ರಾಜ್ ಕುಟುಂಬಕ್ಕೆ ಮತ್ತೊಂದು ಅಘಾತ!
ವಿಜಯ ರಾಘವೇಂದ್ರ ಅವರ ಧರ್ಮಪತ್ನಿ ಸ್ಪಂದನಾ ವಿಜಯ ರಾಘವೇಂದ್ರ ಅವರು ಬ್ಯಾಂಕಾಂಕ್ ಪ್ರವಾಸದಲ್ಲಿದ್ದಾಗ ಹಠಾತ್ ಹೃದಯಾಘಾತವಾಗಿ ಮರಣ ಹೊಂದಿದ್ದಾರೆ. ಅವರಿಗೆ 35 ವರ್ಷ ವಯಸ್ಸಾಗಿತ್ತು. ಸ್ಪಂದನಾ ಅವರು ಕರ್ನಾಟಕದ ಖ್ಯಾತ ಪೊಲೀಸ್ ಆಫೀಸರ್ ಬಿ.ಕೆ.ಶಿವರಾಮ್ ಅವರ ಪುತ್ರಿ. ಶಿವರಾಮ್ ಅವರು ಕರ್ನಾಟಕದ ಪೊಲೀಸ್ ಇಲಾಖೆಯಲ್ಲಿ ದಿಟ್ಟ ಅಧಿಕಾರಿ ಎಂದು ಹೆಸರು ಗಳಿಸಿದ್ದಾರೆ. ವಿಜಯ ರಾಘವೇಂದ್ರ ಅವರು ಕನ್ನಡದ ವರನಟ ಡಾ. ರಾಜಕುಮಾರ್ ಅವರ ಧರ್ಮಪತ್ನಿ ಪಾರ್ವತಮ್ಮ ಅವರ ಸಹೋದರ ಚಿನ್ನೇಗೌಡರ ಹಿರಿಯ ಪುತ್ರ. ಸ್ಪಂದನಾ ಅವರು 2007 ರಲ್ಲಿ ಕನ್ನಡದ ಖ್ಯಾತ ನಟ ವಿಜಯ ರಾಘವೇಂದ್ರ ಅವರನ್ನು arranged ಮದುವೆಯಾಗಿದ್ದರು. ಇವರಿಬ್ಬರಿಗೂ ಶೌರ್ಯ ಎನ್ನುವ ಮಗನಿದ್ದಾನೆ. ಇತ್ತೀಚೆಗೆ ಸ್ಪಂದನಾ ಅವರು ಬ್ಯಾಂಕಾಂಕ್ ಪ್ರವಾಸಕ್ಕೆ ಕುಟುಂಬದವರೊಂದಿಗೆ ತೆರಳಿದ್ದರು.
ವಿಜಯ ರಾಘವೇಂದ್ರ ಅವರ ಸಹೋದರ ನಟ ಶ್ರೀ ಮುರುಳಿ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಅತ್ತಿಗೆ ರಾತ್ರಿ ಮಲಗಿದಾಗ ನಿಧನರಾಗಿದ್ದಾರೆ ಎಂದು ಅಣ್ಣ ತಮಗೆ ಫೋನ್ ಮಾಡಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ತಾವೀಗ ಹೇಳುವ ಸ್ಥಿತಿಯಲ್ಲಿಲ್ಲ ಎಂದು ಕಣ್ಣೀರು ಸುರಿಸುತ್ತಾ ತಿಳಿಸಿದರು. ಸ್ಪಂದನಾ ಅವರ ತಂದೆ ಹಾಗೂ ಸಹೋದರ ಅವರು ಸೋಮವಾರ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಇದ್ದು, ಮಂಗಳೂರು ವಿಮಾನ ನಿಲ್ದಾಣದಿಂದ ಬೆಂಗಳೂರು ಮೂಲಕ ಬ್ಯಾಂಕಾಂಕಿಗೆ ತೆರಳಿದ್ದಾರೆ. ಪಾರ್ಥಿವ ಶರೀರವನ್ನು ಮಂಗಳವಾರ ಬೆಂಗಳೂರಿಗೆ ತರುವ ಪ್ರಕ್ರಿಯೆ ಆರಂಭವಾಗಿದೆ.
ಸ್ಪಂದನಾ ಅವರು ರವಿಚಂದ್ರನ್ ಅವರ ಜೊತೆ 2016 ರಲ್ಲಿ ಅಪೂರ್ವ ಸಿನೆಮಾದಲ್ಲಿ ನಟಿಸಿದ್ದಾರೆ. ಅವರು ವಿಜಯ ರಾಘವೇಂದ್ರ ಅವರು ಕೆಲವು ಸಿನೆಮಾಗಳಿಗೆ ನಿರ್ಮಾಪಕಿಯಾಗಿಯೂ ಕೆಲಸ ಮಾಡಿದ್ದಾರೆ. ತುಂಬಾ ಅನೋನ್ಯ ಕುಟುಂಬದಲ್ಲಿ ಸಡನ್ನಾಗಿ ಜವರಾಯ ಹೀಗೆ ಮಾಡಿದ್ದು ನೋಡಿ ಚಿತ್ರರಂಗವೇ ದಂಗಾಗಿಬಿಟ್ಟಿದೆ. ಕಳೆದ ಕೆಲವು ಸಮಯದಿಂದ ಡಯಟ್ ನಲ್ಲಿದ್ದ ಸ್ಪಂದನಾ 16 ಕೆಜಿ ತೂಕ ಇಳಿಸಿಕೊಂಡಿದ್ದರು.
Leave A Reply