ಟೈಟ್ ಆದ್ರೆ ಟ್ಯಾಕ್ಸಿ ಫ್ರೀ!

ಬಾರ್ ಅಂಡ್ ರೆಸ್ಟೋರೇಂಟಿನಲ್ಲಿ ನೀವು ಕಂಠಪೂರ್ತಿ ಕುಡಿದು ಮನೆ ತಲುಪುವುದು ಹೇಗೆ ಎನ್ನುವ ಚಿಂತೆಯಲ್ಲಿದ್ದೀರಾ? ಇನ್ನು ಅಂತಹ ಟೆನ್ಷನ್ ಇದ್ದರೆ ನಮಗೆ ಬಿಡಿ ಎಂದು ಇಟಲಿಯಲ್ಲಿ ಅಲ್ಲಿನ ಸರಕಾರ ಹೇಳಿದೆ. ಇಟಲಿಯ ಬಾರ್ ಅಂಡ್ ರೆಸ್ಟೋರೆಂಟ್ ಗಳು ಸರಕಾರದ ಈ ನಡೆಯನ್ನು ಸ್ವಾಗತಿಸಿದೆ. ಯಾಕೆಂದರೆ ಇದರಿಂದ ಅವುಗಳ ವ್ಯಾಪಾರ ವಹಿವಾಟು ಹೆಚ್ಚಾಗಲಿದೆ. ತುಂಬಾ ಕುಡಿದರೆ ಮನೆಗೆ ಹೇಗೆ ಹೋಗಿ ತಲುಪುವುದು ಎನ್ನುವ ಚಿಂತೆ ಇಲ್ಲದೆ ಮದ್ಯಪ್ರಿಯರು ಇನ್ನೊಂದಿಷ್ಟು ಪೆಗ್ ಹೆಚ್ಚಿಗೆ ಹಾಕುತ್ತಾರೆ ಎನ್ನುವ ಆಶಾಭಾವನೆ ಬಾರ್ ಮಾಲೀಕರದ್ದು. ಅದರೊಂದಿಗೆ ಕುಡಿತದ ಜೊತೆ ಆಹಾರ ವಟಿವಾಟು ಕೂಡ ಹೆಚ್ಚಾಗಲಿದ್ದು, ಇದರಿಂದ ಒಟ್ಟಾರೆಯಾಗಿ ಸರಕಾರಕ್ಕೆ ಪರೋಕ್ಷವಾಗಿ ಆದಾಯ ಹೆಚ್ಚಾಗಲಿದೆ.
ಇನ್ನು ಕುಡಿದು ವಾಹನ ಚಲಾಯಿಸಿದ ಕಾರಣದಿಂದ ನಡೆಯುತ್ತಿದ್ದ ರಸ್ತೆ ಅಪಘಾತಗಳು ಕೂಡ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಾಣಲಿದ್ದು, ಇದರಿಂದ ದೇಶಕ್ಕೂ ಕೂಡ ಲಾಭವಾಗಲಿದೆ. ಒಬ್ಬ ಯುವಕ, ಯುವತಿ ಅಪಘಾತದಲ್ಲಿ ಮೃತಪಟ್ಟರೆ ಅದರಿಂದ ಸರಕಾರದ ಅರ್ಥ ವ್ಯವಸ್ಥೆಯ ಮೇಲೆ ಅದು ಪರಿಣಾಮ ಬೀರಲಿದ್ದು, ಆರ್ಥಿಕ ನಷ್ಟಕ್ಕೆ ಕಾರಣವಾಗಲಿದೆ. ಎಲ್ಲವನ್ನು ಸಮಗ್ರವಾಗಿ ನೋಡಿದಾಗ ಇದು ಮದ್ಯಪಾನಿಗಳಿಗೆ, ಉದ್ಯಮಿಗಳಿಗೆ, ಸರಕಾರಕ್ಕೆ ಆರ್ಥಿಕ ಲಾಭ, ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಮನಸ್ಸಿನ ಖುಷಿ ತರುತ್ತಿರುವುದರಿಂದ ಇದನ್ನು ಇಟಲಿ ಸರಕಾರ ಅನುಷ್ಟಾನ ತಂದಿರುವುದು ಎಲ್ಲರಿಗೂ ನೆಮ್ಮದಿ ತಂದಿದೆ. ಕರ್ನಾಟಕಲ್ಲಿಯೂ ಇಂತಹ ಪ್ರಯತ್ನ ಸಾಧ್ಯಾನಾ ಎಂದು ಜನ ಕೇಳುತ್ತಿದ್ದಾರೆ.
Leave A Reply