ಪ್ರಧಾನಿ ಮೋದಿಯಾಗಬೇಕಾದರೆ ಶಿವರಾತ್ರಿ ಡೆಡ್ ಲೈನ್?
ಶಿವರಾತ್ರಿಗೂ, ಚುನಾವಣೆಗೂ ಏನು ಸಂಬಂಧ ಎಂದು ನಿಮಗೆ ಅನಿಸಬಹುದು. ಸಂಬಂಧ ಇದೆ. ಮುಂದಿನ ವರ್ಷ 2024 ರ ಮಾರ್ಚ್ 8 ರಂದು ಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಇನ್ನು ಲೋಕಸಭಾ ಚುನಾವಣೆ ಬಹುತೇಕ ಮೇ ಮೊದಲ ವಾರ ನಡೆಯಲಿದೆ. ಮಾರ್ಚ್ 8 ರ ಒಳಗೆ ಲೋಕಸಭಾ ಚುನಾವಣೆ ನಡೆದರೆ ಮಾತ್ರ ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗಿ ಮುಂದುವರೆಯಲಿದ್ದಾರೆ. ಇಲ್ಲದಿದ್ದರೆ ಯಾರಾದರೂ ಮಹಿಳೆ ದೇಶದ ಗದ್ದುಗೆ ಹಿಡಿಯಲಿದ್ದಾರೆ. ಹೀಗೆಂದು ಖ್ಯಾತ ಜ್ಯೋತಿಷಿ, ಧರ್ಮದರ್ಶಿ ಡಾ. ಯಶವಂತ್ ಗುರೂಜಿ ಇಂತಹ ಸಾಧ್ಯತೆಯ ಬಗ್ಗೆ ಕಾಲಜ್ಞಾನ ನುಡಿದಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತದಿಂದ ಅಧಿಕಾರಕ್ಕೆ ಬರಲಿದೆ ಎಂದೇ ಇದೇ ಜ್ಯೋತಿಷಿ ಭವಿಷ್ಯ ನುಡಿದಿದ್ದರು. ಅದು ನಿಜವಾಗಿದೆ. ಆದ್ದರಿಂದ ಇವರು ಮತ್ತೆ ರಾಷ್ಟ್ರರಾಜಕಾರಣದಲ್ಲಿ ನುಡಿದಿರುವ ಭವಿಷ್ಯ ನಿಜವಾಗಬಹುದು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಒಂದು ವೇಳೆ ಎನ್ ಡಿಎ ಬಹುಮತ ಪಡೆದು ಅಧಿಕಾರಕ್ಕೆ ಬಂದು ಮಹಿಳೆ ಪ್ರಧಾನಿಯಾಗುವುದಾದಲ್ಲಿ ಅಂತಹ ಮುಖಗಳು ಯಾವುದು ಎಂದು ನೋಡಿದರೆ ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ ಆಗಬಹುದು ಎನ್ನುವುದು ಲೆಕ್ಕಾಚಾರ. ಒಂದು ವೇಳೆ ವಿಪಕ್ಷಗಳ ಒಕ್ಕೂಟ ಇಂ.ಡಿ.ಯಾ ಅಧಿಕಾರಕ್ಕೆ ಬಂದರೆ ನಿಸ್ಸಂಶಯವಾಗಿ ಮಮತಾ ಬ್ಯಾನರ್ಜಿ ತಮ್ಮ ರಾಜಕೀಯ ಜೀವನದ ಬಹುದೊಡ್ಡ ಗುರಿಯನ್ನು ಈಡೇರಿಸಿಕೊಳ್ಳಲಿದ್ದಾರೆ. ಇದಕ್ಕಾಗಿ ನಾವು ಇನ್ನು ಒಂಭತ್ತು ತಿಂಗಳು ಕಾಯಬೇಕು!
Leave A Reply