ಶ್ರೀನಗರದ ಲಾಲ್ ಚೌಕಿಯಲ್ಲಿ ಶಾಶ್ವತವಾಗಿ ಹಾರಾಡಲಿದೆ ಭಾರತದ ರಾಷ್ಟ್ರಧ್ವಜ!

ಕಾಶ್ಮೀರದಲ್ಲಿರುವ ಲಾಲ್ ಚೌಕ್ ಎನ್ನುವ ಪ್ರದೇಶ ಅನಾದಿಕಾಲದಿಂದಲೂ ಅನೇಕ ಹೋರಾಟಗಳ ಕೇಂದ್ರಬಿಂದು. ಈ ಪ್ರದೇಶದಲ್ಲಿ 1980 ರಲ್ಲಿ ಸೂಫಿ ಶೈಲಿಯಲ್ಲಿ ಗಡಿಯಾರ ಗೋಪುರದ ನಿರ್ಮಾಣವಾಗಿತ್ತು. 1990 ರಲ್ಲಿ ಮೂಲಭೂತವಾದಿಗಳು ಅಲ್ಲಿನ ಮೂಲ ನಿವಾಸಿಗಳಾದ ಕಾಶ್ಮೀರಿ ಪಂಡಿತರ ಮೇಲೆ ಭೀಕರ ನರಮೇಧ ನಡೆಸಿ ಕಾಶ್ಮೀರದಿಂದ ಹೊರದಬ್ಬಿದರಲ್ಲ, ಆವತ್ತಿನಿಂದ ಲಾಲ್ ಚೌಕ ಅನೇಕ ಮಾರಣ ಹೋಮಗಳಿಗೆ ಸಾಕ್ಷಿಯಾಗಿದೆ. ಕಾಶ್ಮೀರವನ್ನು ಪ್ರತ್ಯೇಕಿಸುವ ಮನಸ್ಥಿತಿಯ ಮತಾಂಧ ಶಕ್ತಿಗಳು ಈ ಲಾಲ್ ಚೌಕ್ ನಲ್ಲಿ ಭಾರತದ ತ್ರಿವರ್ಣ ಧ್ವಜ ಯಾವತ್ತೂ ಹಾರಾಡಬಾರದು ಎಂದು ಶಪಥ ಮಾಡಿದ್ದರು. ಯಾರಿಗಾದರೂ ಗುಂಡಿಗೆ ಎದೆ ಕೊಡುವ ಧೈರ್ಯ ಇದ್ದರೆ ಲಾಲ್ ಚೌಕದಲ್ಲಿ ಭಾರತದ ರಾಷ್ಟ್ರಧ್ವಜ ಹಾರಿಸಿ ಎಂದು ಬಹಿರಂಗವಾಗಿ ಕರೆ ನೀಡಲಾಗಿತ್ತು.
ಅದನ್ನು ಸವಾಲಾಗಿ ಸ್ವೀಕರಿಸಿ 1992 ರ ಗಣರಾಜ್ಯೋತ್ಸವದಂದು ಭಾರತೀಯ ಜನತಾ ಪಾರ್ಟಿಯ ಅಂದಿನ ರಾಷ್ಟ್ರಾಧ್ಯಕ್ಷರಾಗಿದ್ದ ಮುರಳಿ ಮನೋಹರ್ ಜೋಷಿ, ಅಂದಿನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನರೇಂದ್ರ ಮೋದಿಯವರು ಭದ್ರತಾ ವ್ಯವಸ್ಥೆಯಲ್ಲಿ ಇದೇ ಲಾಲ್ ಚೌಕದಲ್ಲಿರುವ ಗಡಿಯಾರ ಗೋಪುರದಲ್ಲಿ ಭಾರತದ ರಾಷ್ಟ್ರಧ್ವವನ್ನು ಹಾರಿಸಿದ್ದರು. ಅಷ್ಟೇ ಅಲ್ಲ, ಆವತ್ತೇ ಈ ಗಡಿಯಾರ ಗೋಪುರದ ಮೇಲೆ ಭಾರತದ ತ್ರಿವರ್ಣ ಧ್ವಜವನ್ನು ಶಾಶ್ವತವಾಗಿ ಹಾರಿಸುವ ಸಂಕಲ್ಪವನ್ನು ಮೋದಿ ಮಾಡಿದ್ದರು. ಅದಾಗಿ 30 ವರ್ಷಗಳಾಗಿವೆ. ಮೋದಿಯವರ ದೂರದೃಷ್ಟಿಯ ಸ್ಮಾರ್ಟ್ ಸಿಟಿ ಯೋಜನೆಯಡಿ ಶ್ರೀನಗರದ ಲಾಲ್ ಚೌಕ ಹೊಸ ರೂಪ ಪಡೆದುಕೊಂಡಿದೆ. ಈ ಗಡಿಯಾರ ಗೋಪುರಕ್ಕೆ ಹೊಸ ಕಾಯಕಲ್ಪ ನೀಡಲಾಗಿದೆ. ಹಳೆ ವಿನ್ಯಾಸವನ್ನು ಉಳಿಸಿಕೊಂಡು ಹೊಸ ಭಾರತದ ಕನಸನ್ನು ಎದೆಯಲ್ಲಿಟ್ಟು ಗಡಿಯಾರ ಗೋಪುರ ನವವಧುವಿನಂತೆ ಸಜ್ಜಾಗಿದೆ. ಈ ಗಡಿಯಾರ ಗೋಪುರದ ಮೇಲೆ ಇನ್ನು ಮುಂದೆ ಶಾಶ್ವತವಾಗಿ ಭಾರತದ ತ್ರಿವರ್ಣ ಧ್ವಜ ಹಾರಾಡಲಿದೆ. ನವಭಾರತದಲ್ಲಿ ಭಾರತಾಂಬೆಯ ಮುಕುಟದ ಮಣಿಯಾಗಿರುವ ಕಾಶ್ಮೀರ ಯಾವಾಗಲೂ ಭಾರತದ ಅವಿಭಾಜ್ಯ ಅಂಗ ಎಂದು ಮೋದಿಯವರ ಈ ಕಾರ್ಯದಿಂದ ಪ್ರಪಂಚಕ್ಕೆ ಸಂದೇಶ ಹೋಗಿದೆ. ಕಾಶ್ಮೀರವನ್ನು ಪ್ರತ್ಯೇಕಿಸುವುದು ಬಿಡಿ, ಆ ಬಗ್ಗೆ ಕನಸು ಬಿದ್ದರೂ ನಿಮ್ಮ ನಾಶ ಖಂಡಿತ ಎನ್ನುವ ಮೇಸೆಜ್ ಪಾಕಿಸ್ತಾನದಲ್ಲಿ ರಿಂಗಣಿಸುತ್ತಿದೆ. ಅದು ಮೋದಿಯವರ ತಾಕತ್ತು. ಅದಕ್ಕೆ ಈ ದೃಶ್ಯವೇ ಸಾಕ್ಷಿ
Leave A Reply