ಇನ್ನೊಮ್ಮೆ ಅಂಗನವಾಡಿಗಳಿಗೆ ಕೊಳೆತ ಮೊಟ್ಟೆ
ಇತ್ತೀಚೆಗೆ ಅಂಗನವಾಡಿಗೆ ಕೊಳೆತ ಮೊಟ್ಟೆಗಳು ಪೂರೈಕೆಯಾಗುತ್ತಿರವ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು ಅಂಗನವಾಡಿಗಳಿಗೆ ಮೊಟ್ಟೆ ಪೂರೈಕೆ ಮಾಡುವ ಗುತ್ತಿಗೆದಾರನನ್ನು ಬ್ಲಾಕ್ ಲಿಸ್ಟ್ ಗೆ ಹಾಕುತ್ತೇನೆಂದು ಗುಡುಗಿದ್ದರು. ಆದರೆ ಇನ್ನೂ ಈ ಸಮಸ್ಯೆ ಪರಿಹಾರವಾದಂತಿಲ್ಲ. ಇದೀಗ ಮತ್ತೆ ಮತ್ತೆ ಮಂಗಳೂರಿನ ಹಲವೆಡೆ ಮತ್ತೆ ಕೊಳೆತ ಮೊಟ್ಟೆ ಪೂರೈಕೆ ಆಗುತ್ತಿರುವುದು ಕಂಡು ಬಂದಿದೆ. ಕಾಟಿಪಳ್ಳದ ಆಸುಪಾಸಿನಲ್ಲಿ ಗರ್ಭಿಣಿಯರಿಗೆ ವಿತರಿಸಲಾಗುವ ಮೊಟ್ಟೆಗಳು ಅಂಗನವಾಡಿಗಳಿಗೆ ಪೂರೈಕೆಯಾಗಿದ್ದು, ಹಾಳಾದ ಸ್ಥಿತಿಯಲ್ಲಿ ದೊರೆತಿದೆ.
ಆಕಾಶಭವನದಲ್ಲಿ ಗರ್ಭಿಣಿ ಮಹಿಳೆ, ಮಗು ಮೊಟ್ಟೆ ತಿಂದು ತಿಂಗಳ ಹಿಂದೆ ಅಸ್ವಸ್ಥರಾಗಿದ್ದರು. ತಾಲೂಕಿನ ಹಲವೆಡೆ ಅಂಗನವಾಡಿಗಳಿಗೆ ಕೊಳೆತ ಮೊಟ್ಟೆ ಪೂರೈಕೆಯಾಗಿದೆ. ಈ ಬಾರಿಯೂ ಕೆಲವು ಕಡೆಗಳಿಗೆ ಕೊಳೆತ ಮೊಟ್ಟೆ ಪೂರೈಕೆ ಆಗಿರುವ ಮಾಹಿತಿ ಲಭ್ಯವಾಗಿದೆ.ಸರಕಾರ ಈ ಬಗ್ಗೆ ಸಮರ್ಪಕವಾದ ಕ್ರಮ ಕೈಗೊಳ್ಳಬೇಕು. ಕೇವಲ ಹೆಸರಿಗೆ ಯೋಜನೆ ನೀಡದೆ ಜನರ ಆರೋಗ್ಯದ ಮೇಲೂ ಕಾಳಜಿ ತೋರಬೇಕಿದೆ.
Leave A Reply