ರಾಹುಲ್ 50 ವರ್ಷದ ಮುದುಕಿಗೆ ಪ್ಲೈಯಿಂಗ್ ಕಿಸ್ ಕೊಡಬೇಕಾಗಿಲ್ಲ ಎಂದಿದ್ದು ಯಾರು?
ಕೇರಳದ ವಯನಾಡು ಸಂಸದ ರಾಹುಲ್ ಗಾಂಧಿಯವರು ಸಂಸತ್ ನಲ್ಲಿ ನಡೆದ ಅವಿಶ್ವಾಸ ನಿರ್ಣಯದ ಅಧಿವೇಶನದಲ್ಲಿ ನೀಡಿದ ಫ್ಲೈಯಿಂಗ್ ಕಿಸ್ ಬಗ್ಗೆ ಬಿಹಾರದ ಕಾಂಗ್ರೆಸ್ ಶಾಸಕಿ ನೀತು ಸಿಂಗ್ ಅವರು ತಮ್ಮದೇ ಧಾಟಿಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ” ರಾಹುಲ್ ಗಾಂಧಿಯವರ ಹತ್ತಿರ ಹುಡುಗಿಯರ ಏನೂ ಕಡಿಮೆ ಇಲ್ಲ. ಒಂದು ವೇಳೆ ಪ್ಲೈಯಿಂಗ್ ಕಿಸ್ ಕೊಡಲೇಬೇಕಿದ್ದರೆ ಯಾವುದಾದರೂ ಯುವತಿಗೆ ಕೊಡುತ್ತಾರೆ ವಿನ: 50 ವರ್ಷದ ಮುದುಕಿಗೆ ಅಲ್ಲ” ಎಂದು ರಾಹುಲ್ ಅವರು ಬೆಂಬಲಿಸಿ ಹೇಳಿಕೆ ನೀಡಿದ್ದಾರೆ.
ರಾಹುಲ್ ಗಾಂಧಿಯವರ ಈ ವರ್ತನೆಯ ಬಗ್ಗೆ ಕೇರಳದ ಮತ್ತೊಬ್ಬ ಸಂಸದ ಶಶಿ ತರೂರ್ ಅವರ ಅಭಿಪ್ರಾಯವನ್ನು ಮಾಧ್ಯಮಗಳು ಕೇಳಿದಾಗ ಅದನ್ನು ತಾವು ಸರಿಯಾಗಿ ಗಮನಿಸಿಲ್ಲ. ಲೋಕಸಭಾ ಟಿವಿಯಲ್ಲಿಯೂ ಆ ದೃಶ್ಯದ ಬಗ್ಗೆ ಸರಿಯಾಗಿ ಅದು ದಾಖಲಾಗಿಲ್ಲ ಎಂದು ಹೇಳಿದ್ದಾರೆ. ಕೆಲವರು ಅದು ರಾಹುಲ್ ಗಾಂಧಿಯವರು ಪ್ರೀತಿಯನ್ನು ಹಂಚಿದ್ದು ಎಂದು ಹೇಳಿದರೆ ಕೆಲವರು ಸ್ಮೃತಿ ಇರಾನಿಯವರಿಗೆ ಪ್ಲೈಯಿಂಗ್ ಕಿಸ್ ಕೊಟ್ಟಿರುವುದಿಲ್ಲ ಎಂದು ಹೇಳಿದ್ದಾರೆ. ಕೆಲವರು ಮುಖ್ಯ ವಿಷಯ ಬಿಟ್ಟು ಪ್ಲೈಯಿಂಗ್ ಕಿಸ್ ಬಗ್ಗೆ ಚರ್ಚೆ ನಡೆದಿರುವುದು ದುರಾದೃಷ್ಟಕರ ಎಂದು ಕೂಡ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.
Leave A Reply