ರಾಹುಲ್ ನಿಲುವು ಮಣಿಪುರದಲ್ಲಿ ಮತ್ತು ರಾಜಸ್ಥಾನದಲ್ಲಿ ಭಿನ್ನ!
ಕಾಂಗ್ರೆಸ್ಸಿನ ವಯನಾಡ್ ಸಂಸದ ರಾಹುಲ್ ಗಾಂಧಿಯವರು ಸಂಸತ್ ನಲ್ಲಿ ಅವಿಶ್ವಾಸ ನಿಲುವಳಿ ಮಂಡನೆಯ ಅಧಿವೇಶನದಲ್ಲಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಾರ್ಟಿ ಮತ್ತು ಕೇಂದ್ರ ಸರಕಾರ ಭಾರತದಲ್ಲಿ ಸಹೋದರ – ಸಹೋದರರ ನಡುವೆ ಕಾಳಗ, ಧರ್ಮ – ಧರ್ಮಗಳ ನಡುವೆ ಅಪನಂಬಿಕೆಯನ್ನು ಸೃಷ್ಟಿಸುತ್ತಿದೆ ಎನ್ನುವ ಆರೋಪವನ್ನು ಮಾಡಿದ್ದಾರೆ. ಆದರೆ ಇದೇ ರಾಹುಲ್ ಗಾಂಧಿಯವರ ಕಾಂಗ್ರೆಸ್ ಪಕ್ಷ ಆಡಳಿತ ಇರುವ ರಾಜಸ್ಥಾನದಲ್ಲಿ 2022 ರ ಫೆಬ್ರವರಿ ತಿಂಗಳಲ್ಲಿ ಪಿ.ಎಫ್.ಐ ಎನ್ನುವ ಸಂಘಟನೆಗೆ ಪಾದಯಾತ್ರೆ (ಮಾರ್ಚ್ ಫಾಸ್ಟ್) ಮಾಡಲು ಅನುಮತಿ ನೀಡಲಾಗಿತ್ತು. ಪಿಎಫ್ ಐ ಎಂತಹ ಸಂಘಟನೆ ಎನ್ನುವುದು ಇಡೀ ಭಾರತಕ್ಕೆ ಗೊತ್ತಿದೆ. ಕೇರಳದಂತಹ ರಾಜ್ಯದಲ್ಲಿ ಅನೇಕ ವಿಧ್ವಂಸಕ ಕೃತ್ಯಗಳ ಹಿಂದೆ ಪಿಎಫ್ ಐ ಕೈವಾಡ ಇತ್ತು. ಭಾರತವನ್ನು ಆಂತರಿಕವಾಗಿ ದುರ್ಬಲಗೊಳಿಸಲು ಪಿಎಫ್ ಐ ಸಂಘಟನೆ ಒಳಸಂಚನ್ನು ರೂಪಿಸಿತ್ತು. ಅಂತಹ ಸಂಘಟನೆಗೆ ಸಮಾವೇಶ ಮಾಡಲು ಅನುಮತಿಯನ್ನು ಕಾಂಗ್ರೆಸ್ ಸರಕಾರ ರಾಜಸ್ಥಾನದಲ್ಲಿ ನೀಡಿತ್ತು.
ಆದರೆ ಅದೇ ಕಾಂಗ್ರೆಸ್ ಸರಕಾರ ರಾಜಸ್ಥಾನದ ಅನೇಕ ಭಾಗಗಳಲ್ಲಿ ಹನುಮಾನ್ ಜಯಂತಿ, ಹಿಂದೂ ಹೊಸ ವರ್ಷ, ಪರಶುರಾಮ ಜಯಂತಿ, ರಾಮನವಮಿಯ ಶೋಭಾಯಾತ್ರೆಯನ್ನು ಕೈಗೊಳ್ಳಲು ಪ್ರತಿಬಂಧ ಹೇರಿದ್ದು ಕೂಡ ಆ ರಾಜ್ಯದ ಜನರು ಅನುಭವಿಸಿದ್ದಾರೆ. ಅದಲ್ಲದೇ ದೇಶವನ್ನೇ ನಡುಗಿಸಿದ ಕನ್ನಯ್ಯ ಲಾಲ್ ಹತ್ಯೆ ಪ್ರಕರಣದಲ್ಲಿ ಅಲ್ಲಿನ ಸರಕಾರ ಹೇಗೆ ನಡೆದಿದೆ ಎನ್ನುವುದು ಆ ಕುಟುಂಬಕ್ಕೆ ತಿಳಿದಿದೆ. ಆ ಕುಟುಂಬ ಮತಾಂಧರಿಂದ ರಕ್ಷಣೆ ಕೋರಿ ಪೊಲೀಸ್ ಸುರಕ್ಷತೆಗೆ ಮನವಿ ಮಾಡಿದರೂ ಇಲಾಖೆ ಅದನ್ನು ನಿರ್ಲಕ್ಷಿಸಿತ್ತು. ಈಗ ಬಿಜೆಪಿಯನ್ನು ಟೀಕಿಸುತ್ತಿರುವ ರಾಹುಲ್ ಗಾಂಧಿಯವರು ರಾಜಸ್ಥಾನದಲ್ಲಿ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಾರೆ. ಅದೇ ಸಂಸತ್ತಿನಲ್ಲಿ ಮಾತನಾಡುವಾಗ ಮಣಿಪುರದಲ್ಲಿ ಭಾರತಮಾತೆಯ ಹತ್ಯೆಯಾಗಿದೆ ಎನ್ನುತ್ತಾರೆ. ರಾಜಸ್ಥಾನದಲ್ಲಿ ಅವರದ್ದೇ ಪಕ್ಷದ ಆಡಳಿತ ಹಿಂದೂಗಳ ಹಕ್ಕುಗಳನ್ನು ದಮನ ಮಾಡುವಾಗ ರಾಹುಲ್ ಮಾತನಾಡುವುದಿಲ್ಲ. ಇಂತಹ ದ್ವಂದ್ವ ಯಾಕೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ.
Leave A Reply