ಪುನೀತ್ ಕೆರೆಹಳ್ಳಿ ಮೇಲೆ ಗೂಂಡಾ ಕಾಯ್ದೆ
Posted On August 12, 2023
0
ಇತ್ತೀಚೆಗೆ ಬೆಂಗಳೂರಿನಲ್ಲಿ ನಾಗನಕಟ್ಟೆಯನ್ನು ಜೀರ್ಣೋದ್ಧಾರಗೊಳಿಸಿ ಅಲ್ಲಿ ಪೂಜೆ, ಪುನಸ್ಕಾರಗಳಿಗೆ ಜನರನ್ನು ಸೇರಿಸುವ ಬಗ್ಗೆ ಕರೆ ನೀಡಿ ಮತ್ತೆ ಸುದ್ದಿಯಾಗಿದ್ದ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿಯ ಮೇಲೆ ರಾಜ್ಯ ಕಾಂಗ್ರೆಸ್ ಸರಕಾರ ಗೂಂಡಾ ಕೇಸ್ ದಾಖಲಿಸಿದೆ.
ಗೂಂಡಾ ಕೇಸಿಗೆ ಒಳಗಾಗುವ ವ್ಯಕ್ತಿಗೆ ಒಂದು ವರ್ಷ ಬೇಲ್ ಸಿಗುವುದಿಲ್ಲ. ಅದರೊಂದಿಗೆ ಆತನನ್ನು ಬಂಧಿಸಿದ 24 ಗಂಟೆಯೊಳಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಅಗತ್ಯ ಪೊಲೀಸರಿಗೆ ಇರುವುದಿಲ್ಲ. ಅದರೊಂದಿಗೆ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲು ವಿಶೇಷವಾದ ಪ್ರಕ್ರಿಯೆಗಳ ಅಗತ್ಯವಿರುವುದಿಲ್ಲ.
ರಾಷ್ಟ್ರ ರಕ್ಷಾ ಪಡೆ ಎನ್ನುವ ಸಂಘಟನೆಯ ನೇತೃತ್ವ ವಹಿಸಿರುವ ಪುನೀತ್ ಕೆರೆಹಳ್ಳಿ ಅಕ್ರಮ ಗೋಸಾಗಾಟದ ವಾಹನಗಳನ್ನು ತಡೆದ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. 2013 ರಿಂದ 2023 ರ ನಡುವೆ ಇವರ ಮೇಲೆ ಹತ್ತು ಕೇಸುಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ.
Trending Now
ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
November 11, 2025









