ಅಬ್ದುಲ್ ಕಲಾಂ ಅಜಾದ್ ಶಿಕ್ಷಣ ಸಚಿವರಾಗಬಹುದಾದರೆ ಸುಧಾಮೂರ್ತಿ, ಶಂಕರ್ ಮಹಾದೇವನ್ ಯಾಕಿಲ್ಲ?
ರಾಷ್ಟ್ರೀಯ ಶೈಕ್ಷಣೀಕ, ಸಂಶೋಧನೆ ಮತ್ತು ತರಬೇತಿ ಸಮಿತಿ (ಎನ್ ಸಿಇಆರ್ ಟಿ) ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು, 1961 ರಲ್ಲಿ ಭಾರತ ಸರಕಾರದಿಂದ ಇದನ್ನು ರಚಿಸಲಾಗಿತ್ತು. ಶಾಲಾ ಶಿಕ್ಷಣದಲ್ಲಿ ಸುಧಾರಿಕೆಯನ್ನು ತರುವುದಕ್ಕಾಗಿ ಮತ್ತು ಮಕ್ಕಳ ಭವಿಷ್ಯಕ್ಕೆ ಭದ್ರ ತಳಪಾಯವನ್ನು ಹಾಕುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಇದು ಯೋಗ್ಯವಾದ ಸಲಹೆಗಳನ್ನು ನೀಡುತ್ತದೆ. ಈ ಸಮಿತಿಗೆ ನೂತನವಾಗಿ 19 ಜನರನ್ನು ಆಯ್ಕೆ ಮಾಡಲಾಗಿದ್ದು ಇನ್ಫೋಸಿಸ್ ಫೌಂಡೇಶನ್ ಇದರ ಅಧ್ಯಕ್ಷೆ, ಲೇಖಕಿ ಸುಧಾಮೂರ್ತಿಯವರನ್ನು ಕೂಡ ಆಯ್ಕೆ ಮಾಡಲಾಗಿದೆ. ಅದರೊಂದಿಗೆ ಶಂಕರ್ ಮಹಾದೇವನ್ ಅವರು ಕೂಡ ಈ ಸಮಿತಿಯಲ್ಲಿ ಕಾರ್ಯ ನಿರ್ವಹಿಸಲಿದ್ದು, ಬೇರೆ ಬೇರೆ ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿರುವವರನ್ನು ಇದರಲ್ಲಿ ಆಯ್ಕೆ ಮಾಡಲಾಗಿದೆ.
ಕೆಲವರು ಸುಧಾಮೂರ್ತಿ, ಶಂಕರ್ ಮಹಾದೇವನ್ ಇವರೆಲ್ಲರೂ ಈ ಸಮಿತಿಯಲ್ಲಿ ಯಾಕಿದ್ದಾರೆ ಎಂದು ಕೊಂಕು ತೆಗೆದಿದ್ದಾರೆ. ಜಗತ್ತಿಗೆ ಗೊತ್ತಿರುವ ಹಾಗೆ ಸುಧಾಮೂರ್ತಿಯವರು ಇನ್ಫೋಸಿಸ್ ಫೌಂಡೇಶನ್ ನಿಂದ ಸಮಾಜದಲ್ಲಿ ಅನೇಕ ಮಾದರಿ ಕಾರ್ಯಗಳನ್ನು ಮಾಡುತ್ತಿರುವುದು ಮಾತ್ರವಲ್ಲ, ಸ್ಫೂರ್ತಿದಾಯಕ ಮಾತುಗಳಿಂದ ತಮ್ಮ ಪುಸ್ತಕಗಳಿಂದಲೂ ಮಕ್ಕಳ ಮೇಲೆ ಉತ್ತಮ ಸಚ್ಚಾರಿತ್ರ ಪರಿಣಾಮಗಳನ್ನು ಬೀರಬಲ್ಲರು. ಇನ್ನು ಶಂಕರ್ ಮಹಾದೇವನ್ ಜಗತ್ತಿನ ಪ್ರಖ್ಯಾತ ಗಾಯಕ, ಸಂಗೀತ ನಿರ್ದೇಶಕರೂ ಮಾತ್ರವಲ್ಲ, ಸಂಗೀತ ಅಕಾಡೆಮಿಗಳ ಮೂಲಕ ಎಷ್ಟೋ ಸಂಗೀತ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಉತ್ತಮ ಕಲಾ ಸರಸ್ಪತಿ ಪುತ್ರರನ್ನು ಸಮಾಜಕ್ಕೆ ನೀಡಿದ್ದಾರೆ.
ಆದರೆ ಇಂತಹ ಶ್ರೇಷ್ಟ ಸಾಧಕರನ್ನು ಈ ಸಮಿತಿಯಲ್ಲಿ ಸೇರಿಸುವುದರಿಂದ ಮಕ್ಕಳ ಭವಿಷ್ಯಕ್ಕೆ ಇವರು ಮಾಡುವ ಸಂಶೋಧನೆಗಳು ಪಠ್ಯಪುಸ್ತಕ ರಚನೆಯ ಮೂಲಕ ಉತ್ತಮ ಮಾದರಿಯಾಗುತ್ತವೆ. ಈ ಸಮಿತಿ 3 ರಿಂದ 12 ತರಗತಿಯ ವಿದ್ಯಾರ್ಥಿಗಳ ಪಠ್ಯಪುಸ್ತಕ ರಚಿಸಲಿದೆ. ಅದರೊಂದಿಗೆ ಒಂದು ಮತ್ತು ಎರಡನೇ ತರಗತಿಯ ಮಕ್ಕಳಿಗೂ ಪಠ್ಯಪುಸ್ತಕ ರಚಿಸುವ ಮೂಲಕ ಮಕ್ಕಳ ಬದುಕಿನಲ್ಲಿ ಉತ್ತಮ ದಾರಿದೀಪ ಸೃಷ್ಟಿಸಲಿದೆ. ಇವರಿಗೆ ಶಿಕ್ಷಣದ ಬಗ್ಗೆ ಏನು ಗೊತ್ತಿದೆ ಎಂದು ಪ್ರಶ್ನಿಸುವವರಿಗೆ ಮೌಲಾನಾ ಅಬ್ದುಲ್ ಕಲಾಂ ಅಜಾದ್ ಅವರು ದೇಶದ ಮೊದಲ ಶಿಕ್ಷಣ ಸಚಿವರಾಗಿದ್ದರು ಎನ್ನುವುದನ್ನು ನೆನಪಿಸಬೇಕು. ಯಾಕೆಂದರೆ ಆ ಶಿಕ್ಷಣ ಸಚಿವರು ಶಾಲೆಗೆ ಹೋಗಿಯೇ ಇರಲಿಲ್ಲ. ಅವರಿಗೆ ಯಾವುದೇ ಸಾಂಪ್ರದಾಯಿಕ ಶಾಲಾ ಶಿಕ್ಷಣ ಅಥವಾ ಡಿಗ್ರಿ ಇರಲಿಲ್ಲ. ಅವರು ಮುಲ್ಲಾಸ್ ಇನ್ ಇಸ್ಲಾಮಿಕ್ ಎಜುಕೇಶನ್ ನಲ್ಲಿ ಧಾರ್ಮಿಕ ಶಿಕ್ಷಣ ಪಡೆದಿದ್ದರು. ಅವರಿಗೆ ಭಾರತ ರತ್ನವನ್ನು ಸರಕಾರ ನೀಡಿತ್ತು. ಶಾಲಾ ಶಿಕ್ಷಣ ಇಲ್ಲದವರು ಶಿಕ್ಷಣ ಮಂತ್ರಿಗಳಾಗಬಹುದಾದ ಭಾರತದಲ್ಲಿ ಸುಧಾಮೂರ್ತಿ, ಶಂಕರ್ ಮಹಾದೇವನ್ ಅವರು ಪಠ್ಯಪುಸ್ತಕ ಪ್ಯಾನಲ್ ನಲ್ಲಿ ಇರುವುದು ತಪ್ಪಾ?
Leave A Reply