ಕೆಂಪುಕೋಟೆಯ ಧ್ವಜಾರೋಹಣದಲ್ಲಿ ಖರ್ಗೆ ಭಾಗವಹಿಸಿಲ್ಲ, ಯಾಕೆ?
ನವದೆಹಲಿಯಲ್ಲಿ 2023 ರ ಅಗಸ್ಟ್ 15 ರಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಧ್ವಜಾರೋಹಣ ಮಾಡಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು. ಈ ಇಡೀ ಕಾರ್ಯಕ್ರಮದಲ್ಲಿ ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷರೂ, ರಾಜ್ಯಸಭಾ ವಿಪಕ್ಷ ನಾಯಕರೂ ಆಗಿರುವ ಮಲ್ಲಿಕಾರ್ಜುನ್ ಖರ್ಗೆಯವರು ಭಾಗವಹಿಸಿಲ್ಲ. ಈ ಕುರಿತು ಮಾಧ್ಯಮಗಳು ಖರ್ಗೆಯವರನ್ನು ಪ್ರಶ್ನಿಸಿದಾಗ ಮೂರು ಕಾರಣಗಳನ್ನು ಹೇಳಿದ್ದಾರೆ.
ಮೊದಲನೇಯದಾಗಿ ತಮಗೆ ಕಣ್ಣಿಗೆ ಸಂಬಂಧಪಟ್ಟ ತೊಂದರೆಗಳು ಇವೆ. ಇನ್ನು ಪ್ರೊಟೊಕಾಲ್ ಇರುವುದರಿಂದ ಬೆಳಿಗ್ಗೆ 9.20 ಕ್ಕೆ ತಮ್ಮ ನಿವಾಸದಲ್ಲಿ ತ್ರಿವರ್ಣ ಧ್ವಜ ಏರಿಸಬೇಕಾಗಿದೆ. ಅದರೊಂದಿಗೆ ಕಾಂಗ್ರೆಸ್ ಕಚೇರಿಯಲ್ಲಿಯೂ ಧ್ವಜಾರೋಹಣ ಮಾಡಲು ಇತ್ತು. ಅದಕ್ಕಾಗಿ ತಾವು ಕೆಂಪುಕೋಟೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಲಿಲ್ಲ. ಇನ್ನು ಪ್ರಧಾನಿ, ರಕ್ಷಣಾ, ಗೃಹ ಸಚಿವರು ಭಾಗವಹಿಸುವ ಕಾರ್ಯವಾಗಿರುವ ಕಾರಣ ಬಿಗಿ ಸುರಕ್ಷತಾ ವ್ಯವಸ್ಥೆ ಇರುತ್ತದೆ. ಅವರೆಲ್ಲರೂ ತೆರಳಿದ ಮೇಲೆ ನಮ್ಮನ್ನು ಬಿಡಲಾಗುತ್ತದೆ. ಆದ್ದರಿಂದ ಸಮಯದ ಹೊಂದಾಣಿಕೆ ಮಾಡಲಾಗದೇ ಆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.
Leave A Reply