ವಿಷಪ್ರಾಷನ 1 ಜಾನುವಾರು, ಹಲವು ನಾಯಿಗಳ ಸಾವು
Posted On August 17, 2023

ಉಳ್ಳಾಲ: ಆಗಂತುಕನೋರ್ವ ಹಾಕಿದ ವಿಷದಿಂದ ಒಂದು ಜಾನುವಾರು ಹಾಗೂ 9 ರಷ್ಟು ನಾಯಿಗಳು ಸಾವನ್ನಪ್ಪಿರುವ ದಾರುಣ ಘಟನೆ ತಲಪಾಡಿ ಅಲಂಕಾರುಗುಡ್ಡೆ ಎಂಬಲ್ಲಿ ಸಂಭವಿಸಿದೆ.
ಅಲಂಕಾರುಗುಡ್ಡೆ ನಿವಾಸಿ ಸತ್ಯೇಂದ್ರ ಎಂಬವರಿಗೆ ಸೇರಿದ ಹಾಲು ನೀಡುವ ದನ ಸಾವನ್ನಪ್ಪಿದೆ. ಸ್ಥಳೀಯ ಒಂಭತ್ತು ನಾಯಿಗಳು ಕಳೆದ ಎರಡು ದಿನಗಳಿಂದ ಸಾವನ್ನಪ್ಪಿದೆ. ಆಗಂತುಕನೋರ್ವ ರಸ್ತೆಬದಿಯಲ್ಲಿ ಬೀದಿನಾಯಿಗಳಿಗೆಂದು ವಿಷ ಹಾಕುತ್ತಾ ಹೋಗಿರುವುದನ್ನು ಕಂಡವರಿದ್ದಾರೆ. ನಂತರದ ದಿನಗಳಲ್ಲಿ ಅಲ್ಲಲ್ಲಿ ನಾಯಿಗಳು ಸತ್ತುಬಿದ್ದಿದ್ದು, ಇದರಲ್ಲಿ ಕೆಲವನ್ನು ಮಣ್ಣಲ್ಲಿ ಹೂತು ಹಾಕಲಾಗಿದೆಮ ಉಳಿದವು ರಸ್ತೆಬದಿಯಲ್ಲಿ ಕೊಳೆತು ದುರ್ನಾತ ಬೀರುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನೆ ಕುರಿತು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
- Advertisement -
Trending Now
ಎಂಪಿ: ಅತ್ಯಾಚಾರ ಆರೋಪಿ ಎನ್ಕೌಂಟರ್
September 29, 2023
Leave A Reply