• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ನಿಮ್ಮ ಮಕ್ಕಳು ಒತ್ತಡಕ್ಕೆ ಒಳಗಾಗುತ್ತಿದ್ದಾರೆಯೇ ?ಹಾಗಿದ್ದರೆ ಅದಕ್ಕೆ ಮೂಲ ಕಾರಣ ಪೋಷಕರಾದ ನೀವು

TNN Correspondent Posted On August 23, 2017


  • Share On Facebook
  • Tweet It

ಈ ಪ್ರಪಂಚದಲ್ಲಿ ಎಲ್ಲ ಉದ್ಯೋಗಗಳಿಗೆ ಮೂಲಭೂತ ವಿದ್ಯಾರ್ಹತೆ ,ತರಬೇತಿ ಕಡ್ಡಾಯವಾಗಿದೆ .ಆದರೆ  ಪೋಷಕರು  ಎಂಬ ಬಹಳ ಪ್ರಾಮುಖ್ಯವಾದ ಹುದ್ದೆಗೆ ತರಬೇತಿಯೂ ಇಲ್ಲ ,ಅರ್ಹತೆಗಳು ಕೂಡ ಮಾನದಂಡವಲ್ಲ .ಯಾಕೆಂದರೆ ಇದು ಪ್ರೈಯೊಬ್ಬರಿಗೂ ಪೋಷಕರಾದ ಮೇಲೆ ಬರುವ ಕೆಲಸ ,ಜವಾಬ್ದಾರಿ .ಇದಕ್ಕೆ ಹೆಚ್ಚಿನವರು  ದೈಹಿಕವಾಗಿ ,ಆರ್ಥಿಕವಾಗಿ ಸಿದ್ಧರಾಗಿರುತ್ತಾರೆ ಆದರೆ ಮಾನಸಿಕವಾಗಿಯೂ ಸಿದ್ಧರಾಗುವುದು ಅಷ್ಟೇ ಅವಶ್ಯ ಎನ್ನುವುದನ್ನು ಮರೆಯುತ್ತಾರೆ .ತಮ್ಮ ಪೋಷಕರು ,ಸಂಬಂಧಿಗಳು ,ನೆರೆ ಕರೆಯವರು ,ಸ್ನೇಹಿತರು ಹೀಗೆ ಸಮಾಜವನ್ನು ನೋಡಿ ತಮ್ಮ ಮಕ್ಕಳಿಗೆ ಪೋಷಕರಾಗಲು ಸಿದ್ಧರಾಗುತ್ತಾರೆ .ಆದರೆ ಇಲ್ಲಿ ಗಮನಾರ್ಹವಾದ ಅಂಶವೊಂದನ್ನು ಅವರು ಮರೆಯುತ್ತಾರೆ ,ಅದೆಂದರೆ ಪ್ರತಿ ಒಂದು ಮಗು ಕೂಡ ವಿಭಿನ್ನವಾದದ್ದು ಹಾಗೆಯೆ ಪ್ರತಿಯೊಂದು ಮಗುವಿಗೆ ತನ್ನದೇ ಆದ ವೈಶಿಷ್ಟ್ಯವಿದೆ ಅದನ್ನು ಪರಿಗಣಿಸಬೇಕು ಎನ್ನುವುದನ್ನು .ಆದ್ದರಿಂದ ಬೇರೆ ಮಕ್ಕಳನ್ನು ನೋಡಿ ಅವರ ಕೌಶಲ್ಯಕ್ಕೆ ತಮ್ಮ ಮಕ್ಕಳನ್ನು ಹೋಲಿಸುತ್ತಾರೆ ಮತ್ತು ಅವರನ್ನು ಆದರ್ಶವಾಗಿರಿಸಿ ತಮ್ಮ ಮಕ್ಕಳನ್ನು ಅವರಂತೆ ಮಾಡಲು ಪ್ರೋತ್ಸಾಹಿಸುತ್ತಾರೆ ಅಕ್ಷರಶಃ ಒತ್ತಡ ಹೇರುತ್ತಾರೆ ಇದರಿಂದ ಸ್ವಯಂ ಅರಳಬೇಕಿದ್ದ ಮಕ್ಕಳು ಪ್ರಯತ್ನ  ಪೂರ್ವಕವಾಗಿ ಅರಳುತ್ತಾರೆ ಮತ್ತೆ ಮುದುಡುತ್ತಾರೆ .ಮನದಲ್ಲಿ ಒತ್ತಡದ ಬಂಡೆಯನ್ನು ಹೊತ್ತು ಹೊರಗೆ ನೀರಸ ನಗೆಯನ್ನು ನಕ್ಕು ತಮಗೆ ಬಳುವಳಿಯಾಗಿ ಬಂದಿದ್ದ ಕೌಶಲ್ಯವನ್ನು ಮರೆತು ,ತಪ್ಪು ನಿರ್ಧಾರಗಳನ್ನು ತೆಗೆದುಕೊಂಡು ಸದಾ ಸತ್ತಂತೆ ಬದುಕಿ ನಿರಾಶರಾಗಿ ಇದು “ವಿಧಿ ಬರಹ “ಎಂದು ಸುಮ್ಮನಾಗುತ್ತಾರೆ .

ಪೋಷಕರ ಒತ್ತಡ ಮಕ್ಕಳ ಮಾನಸಿಕ ಬೆಳವಣಿಗೆಗೆ ದೊಡ್ಡ ಹೊಡೆತವನ್ನೇ ನೀಡುತ್ತಿದೆ .ಬೇರೆ ಮಕ್ಕಳೊಂದಿಗೆ ಹೋಲಿಕೆ ಅವರನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತದೆ .ಮನಸ್ಸು ಸ್ವಚ್ಛಂದವಾಗಿದ್ದಾಗ ಸೃಜನಾತ್ಮಕವಾಗುತ್ತದೆ .ತಮ್ಮ ಆಸಕ್ತಿಕರವಾದ ವಿಭಾಗದಲ್ಲಿ ಸಾಧನೆಯನ್ನು ಮಾಡಲು ಪ್ರೇರೇಪಣೆ ಸಿಗುತ್ತದೆ ,ಆದರೆ  ಒತ್ತಡ ಬಿದ್ದಾಗ ರಚನತ್ಮಾಕ ಪ್ರಕ್ರಿಯೆಯು ಅಲ್ಲಿಯೇ ನಿಂತು ಯಾಂತ್ರಿಕತೆ ಅಭ್ಯಾಸವಾಗುತ್ತದೆ .

ಮಾರ್ಗದರ್ಶನ ನೀಡಿ ,ದಾರ್ಷ್ಟ್ಯದ ಆದೇಶವಲ್ಲ

ಮಕ್ಕಳಿಗೆ  ಮಾರ್ಗದರ್ಶನ ಅಗತ್ಯ .ತಾವು ಪೋಷಕರಾಗಿದ್ದೇವೆ ಎಂಬ ಒಂದೇ ಅರ್ಹತೆಯನ್ನು ಮುಂದಿಟ್ಟುಕೊಂಡು ದಾರ್ಷ್ಯತೆಯಿಂದ ಪ್ರತಿ ಸಲ ನೋವುಂಟು ಮಾಡುವ ಶಿಸ್ತಾದ ಆದೇಶವು ಮಕ್ಕಳನ್ನು ಚಿಪ್ಪಿನೊಳಗೇ ಮುದುಡುವಂತೆ ಮಾಡುತ್ತದೆ .ಒಳಿತು ಕೆಡುಕುಗಳ ಜ್ಞಾನ ,ತಪ್ಪು ಒಪ್ಪುಗಳ ವಿಮರ್ಶೆ ಪೋಷಕರಾಗಿ ನೀವು ನೀಡಲೇಬೇಕು .ಉದಾಹರಣೆಗೆ ಮಗು ಐಸ್ಕ್ರೀಂ ಬೇಕೆಂದು ಹಠ ಹಿಡಿಯಬಹುದು ಆದರೆ ಅದು ಜ್ವರದಿಂದ ನರಳುತ್ತಿದೆ ಎಂದಾದರೆ ಈ ಹೊತ್ತಲಿ ಐಸ್ಕ್ರೀಮ್ ತಿನ್ನಬಾರದು ,ತಿಂದರೆ ಯಾವ ರೀತಿಯ ಕೆಟ್ಟ ಪರಿಣಾಮವಾಗಬಹುದು ಎಂಬುವುದನ್ನು ಪೋಷಕರು ಅರ್ಥೈಸಬೇಕು .ಅದು ಬಿಟ್ಟು ಮುಖಕ್ಕೆ ಹೊಡೆದ ಹಾಗೆ “ಕೊಡುವುದಿಲ್ಲ “ಎಂದರೆ ಮಗು ಹಠಮಾರಿಯಾಗುವ ಸಾಧ್ಯತೆ ಜಾಸ್ತಿ ಇರುತ್ತದೆ .ಇದು ಪ್ರತಿಯೊಂದು ವಿಷಯದಲ್ಲೂ ಮಗುವಿನ ಒತ್ತಡವನ್ನು ಜಾಸ್ತಿ ಮಾಡಬಹುದು .

ಮನೆಯೇ ಶಾಲೆ, ಪೋಷಕರೇ ಗುರುಗಳು

ಪೋಷಕರಿಗಿಂತ ಹೆಚ್ಚಿನ ಗುರುಗಳಿಲ್ಲ .ತಾಯಿ ತಂದೆಯೇ ಮಕ್ಕಳ  ಮೊದಲ ಹೀರೋ ,ಹೀರೋಯಿನ್ .ಮಕ್ಕಳು ಆದರ್ಶದ ಗುಣಗಳನ್ನು ಇವರಲ್ಲಿ ನೋಡ ಬಯಸುತ್ತಾರೆ .ಉದಾಹರಣೆಗೆ “ಕೆಟ್ಟ ಅಭ್ಯಾಸಗಳನ್ನು ಮಾಡಬಾರದು “ಎಂದು ದಿನನಿತ್ಯ ಮಗನಿಗೆ ಹೇಳುವ ತಂದೆಯೇ ಹಿತ್ತಲಲ್ಲಿ ಸಿಗರೇಟು ಸೇದುವುದನ್ನು ಮಗ ಕದ್ದು ನೋಡಿದರೆ ಹೇಗಿರಬಹುದು ?ತಂದೆಯ ಮೇಲಿನ ತನ್ನ ಆದರ್ಶಗಳ ಆಶಾಗೋಪುರ ಕುಸಿದು ಅಲ್ಲಿ ಮ್ಲಾನತೆ ಆವರಿಸಿ ಮಗ ಇನ್ನಿಲ್ಲದ ಒತ್ತಡಕ್ಕೆ ಸಿಲುಕುತ್ತಾನೆ .ಮಕ್ಕಳಿಗೆ ಪ್ರೋತ್ಸಾಹ ಅಗತ್ಯ ,ಅವರು ತಪ್ಪು ಮಾಡಿದಾಗ ನಿಗದಿತ ಶಿಕ್ಷೆಯೂ ಅಗತ್ಯ ಆದರೆ ಪ್ರಯೋಜನಕ್ಕೆ ಬರದವರೆಂಬ ಈಟಿಗಳಂತ ಮಾತುಗಳು ಅವರ ಆತ್ಮ ವಿಶ್ವಾಸವನ್ನೇ ಕುಗ್ಗಿಸುತ್ತದೆ .ಆದ್ದರಿಂದ ತಾಯಿ ತಂದೆ ಇಬ್ಬರೂ ಈ ನಿಟ್ಟಿನಲ್ಲಿ ಯೋಚಿಸಲೇ ಬೇಕು .

ಮಕ್ಕಳನ್ನು ಹೆದರಿಸಿ ಬೆದರಿಸಿ ಸರಿ ದಾರಿಗೆ ತರುವ ಒತ್ತಡಕ್ಕಿಂತ ಪ್ರೀತಿ ವಾತ್ಸಲ್ಯದ ಮಾತುಗಳು ಅತೀ ಅವಶ್ಯ .ಇದು ಮಕ್ಕಳ ಪೋಷಕರಾಗಬೇಕಾದವರಿಗೆ ಇರುವ ಮೊದಲ ಅರ್ಹತೆ .ಉತ್ತಮ ಮಕ್ಕಳು ಬೇಕೆಂದಲ್ಲಿ ಉತ್ತಮ ಪೋಷಕರು ನೀವಾಗಿ .

  • Share On Facebook
  • Tweet It


- Advertisement -


Trending Now
ಮುಸ್ಲಿಮರು ಹೆಚ್ಚಿರುವ ಕಡೆ ಸಾವರ್ಕರ್ ಫೋಟೋ ಹಾಕಿದ್ದೇ ತಪ್ಪು ಎಂದ ಸಿದ್ದು!
Tulunadu News August 17, 2022
ಪರೇಶ್ ಮೇಸ್ತಾ ಬಿಜೆಪಿಯವರನ್ನು ಕ್ಷಮಿಸಿಬಿಡಪ್ಪ!
Tulunadu News August 15, 2022
Leave A Reply

  • Recent Posts

    • ಮುಸ್ಲಿಮರು ಹೆಚ್ಚಿರುವ ಕಡೆ ಸಾವರ್ಕರ್ ಫೋಟೋ ಹಾಕಿದ್ದೇ ತಪ್ಪು ಎಂದ ಸಿದ್ದು!
    • ಪರೇಶ್ ಮೇಸ್ತಾ ಬಿಜೆಪಿಯವರನ್ನು ಕ್ಷಮಿಸಿಬಿಡಪ್ಪ!
    • ಉಗುರು ಸಿಕ್ಕಿದರೆ ದೇಹ ನುಂಗುವವರಿಗೆ ಈದ್ಗಾ ಮೈದಾನ ಉದಾಹರಣೆ!
    • ಎಸಿಬಿ ರದ್ದು ಮಾಡಿದ್ದು ಕೋರ್ಟ್, ಬೆನ್ನು ತಟ್ಟಿಕೊಳ್ಳುವ ಅವಕಾಶ ಬಿಜೆಪಿಗೆ ಮಿಸ್!
    • ಹಲಾಲ್-ಜಟ್ಕಾ ವಿಷಯದಲ್ಲಿ ಪ್ರವೀಣ್ ಹತ್ಯೆಯಾಯಿತಾ ಎನ್ನುವ ತನಿಖೆ ಆಗಲಿ!
    • ಸಿಎಂ ಬದಲಾವಣೆಯಿಂದ ರಾಜ್ಯದ ಜನರಿಗೆ ಆಗುವಂತದ್ದು ಏನೂ ಇಲ್ಲ!!
    • ಸಿಬಲ್ ಅರಳು ಮರಳಿನ ಹೇಳಿಕೆ ಅವರ ಇವತ್ತಿನ ಪರಿಸ್ಥಿತಿ ಸೂಚಿಸುತ್ತದೆ!
    • ಹೆಣ್ಣುಮಕ್ಕಳು ನೇತಾಡಿ ಹೋಗುವ ಪರಿಸ್ಥಿತಿ ಬರಬಾರದಾಗಿತ್ತು!!
    • ಅಕ್ರಮ ಮರಳು ಗುತ್ತಿಗೆದಾರರು ಸಿಕ್ಕಿಬಿದ್ದರೆ ಶಿಕ್ಷೆ ಎಲ್ಲಿ ಆಗಿದೆ?
    • ಯಡ್ಡಿ ಭೇಟಿ ಮಾಡಿದ ಶಾ ಕೊಟ್ಟ ಸಂದೇಶ ಕುತೂಹಲಕಾರಿ!
  • Popular Posts

    • 1
      ಮುಸ್ಲಿಮರು ಹೆಚ್ಚಿರುವ ಕಡೆ ಸಾವರ್ಕರ್ ಫೋಟೋ ಹಾಕಿದ್ದೇ ತಪ್ಪು ಎಂದ ಸಿದ್ದು!
    • 2
      ಪರೇಶ್ ಮೇಸ್ತಾ ಬಿಜೆಪಿಯವರನ್ನು ಕ್ಷಮಿಸಿಬಿಡಪ್ಪ!
    • 3
      ಉಗುರು ಸಿಕ್ಕಿದರೆ ದೇಹ ನುಂಗುವವರಿಗೆ ಈದ್ಗಾ ಮೈದಾನ ಉದಾಹರಣೆ!
    • 4
      ಎಸಿಬಿ ರದ್ದು ಮಾಡಿದ್ದು ಕೋರ್ಟ್, ಬೆನ್ನು ತಟ್ಟಿಕೊಳ್ಳುವ ಅವಕಾಶ ಬಿಜೆಪಿಗೆ ಮಿಸ್!
    • 5
      ಹಲಾಲ್-ಜಟ್ಕಾ ವಿಷಯದಲ್ಲಿ ಪ್ರವೀಣ್ ಹತ್ಯೆಯಾಯಿತಾ ಎನ್ನುವ ತನಿಖೆ ಆಗಲಿ!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search