• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಸಮಾನತೆ ಹೆಸರಿನಲ್ಲಿ ಬ್ರಾಹ್ಮಣರನ್ನು ಮುಗಿಸುವುದೇ ಇವರ ಉದ್ದೇಶ?

ಸಂತೋಷ್ ಕುಮಾರ್ ಮುದ್ರಾಡಿ Posted On August 18, 2023
0


0
Shares
  • Share On Facebook
  • Tweet It

ಸಾಧಾರಣ ಎಲ್ಲಾ ಪ್ರಗತಿಪರ ಚಿಂತಕರು ಕೂಡ ಹೋರಾಟಕ್ಕಿಳಿದಾಗ ಅವರ ಬಾಯಿಂದ ಬರುವ ಮೊದಲ ನುಡಿ ಮುತ್ತುಗಳು ಬ್ರಾಹ್ಮಣ್ಯದ ವಿರುದ್ಧವೇ ಆಗಿರುತ್ತದೆ. ಹಾಗೂ ಕೊನೆಯ ಮಾತು ಕೂಡ ಬ್ರಾಹ್ಮಣರ ವಿರುದ್ಧವೇ ಆಗಿರುತ್ತದೆ. ಅವರ ರಕ್ತದ ಕಣಕಣದಲ್ಲೂ ಬ್ರಾಹ್ಮಣ್ಯ ದ್ವೇಷವೊಂದೆ ಎದ್ದು ಕಾಣುವುದು. ಯಾವುದೋ ಓಬಿರಾಯನ ಕಾಲದಲ್ಲಿ ಮಾಡಿದ ಸತ್ಯವೋ ಸುಳ್ಳು ಎಂದು ಸರಿಯಾಗಿ ಗೊತ್ತಿಲ್ಲದ ಕೆಲವು ಸಣ್ಣ ವಿಚಾರವನ್ನು ಹಿಡಿದುಕೊಂಡು ಇವತ್ತಿಗೂ ಕೂಡ ತಮ್ಮ ದ್ವೇಷವನ್ನು ಸಾಧಿಸುತ್ತಿದ್ದಾರೆ. ಹಿಂದೂಗಳಿಗೆ ಉಳಿದ ಮತಗಳಿಂದ ಒದಗಿದ ದೌರ್ಜನ್ಯಗಳು ಕಣ್ಣಮುಂದಿದ್ದರು ಕೂಡ ಅದನ್ನು ಮರೆತು ಬ್ರಾಹ್ಮಣ್ಯದಿಂದ ಅಂತಹ ಯಾವುದೇ ಕೊಲೆ ಸುಲಿಗೆಗಳು ನಡೆಯದಿದ್ದರೂ ವಿನಾಕಾರಣ ಬ್ರಾಹ್ಮಣರ ವಿರುದ್ಧ ಇವರು ಹೋರಾಡುತ್ತಿದ್ದಾರೆ. ಇವರ ಅಂತರಾಳ ಅದೆಷ್ಟು ಸುಟ್ಟು ಕಮಟಿ ಹೋಗಿದೆ ಎಂದು ಸಮಾಜ ಯೋಚಿಸಬೇಕು.

ತಮ್ಮ ಕಪೋಲ ಕಲ್ಪಿತವಾದ ರೀತಿಯಲ್ಲಿ ಬ್ರಾಹ್ಮಣ್ಯವನ್ನು ಪರಿಕಲ್ಪಿಸಿಕೊಂಡು ಇತಿಹಾಸದುದ್ದಕ್ಕೂ ಬೇಕಾದಷ್ಟು ಬಾರಿ ಆಕ್ರಮಣಗಳು ನಡೆದಿವೆ. ಅದೆಷ್ಟೋ ಬ್ರಾಹ್ಮಣರ ಮನೆಗಳು ಹಾಗೂ ಪರಂಪರೆಗಳು ಮಣ್ಣು ಪಾಲಾಗಿದೆ. ಬ್ರಾಹ್ಮಣರೇ ಬಹು ಸಂಖ್ಯಾತರಾಗಿದ್ದ ರಾಜ್ಯಗಳು ಕೂಡ ಹೇಳ ಹೆಸರಿಲ್ಲದೆ ನಾಶವಾಗಿದೆ. ಮತ್ತೆ ಮತ್ತೆ ನಾಶವಾಗುತ್ತಲೇ ಇದೆ. ಇನ್ನು ಸ್ವಲ್ಪ ಸಮಯದಲ್ಲಿ ನಮ್ಮದೇ ಕಾಸರಗೋಡು ಭಾಗದಲ್ಲಿ ಬ್ರಾಹ್ಮಣರ ಮನೆಗಳೇ ಇಲ್ಲದಂತಾಗುತ್ತದೆ. ಇವರಿಗೆ ಯಾವುದಾದರೂ ಒಂದು ಊರು ಅಥವಾ ಒಂದು ನಗರ ಅಥವಾ ಒಂದು ರಾಜ್ಯ ಬ್ರಾಹ್ಮಣರ ನಾಶದಿಂದ ಒಳ್ಳೆಯದಾಗಿದೆ ಎಂದು ತೋರಿಸಿ ಕೊಡುವ ಯೋಗ್ಯತೆ ಇದೆಯೇ.

ಮಾತೆತ್ತಿದರೆ ನಾವು ಬ್ರಾಹ್ಮಣ ವಿರೋಧಿಗಳಲ್ಲ, ಬ್ರಾಹ್ಮಣ್ಯದ ವಿರೋಧಿಗಳು ಎಂದು ಕಿವಿಗೆ ಹೂವು ಇಡುವ ಇವರ ಜಾಣ್ಮೆ ಮೆಚ್ಚಲೇಬೇಕು. ಮನುಷ್ಯತ್ವವನ್ನು ಬಿಟ್ಟು ಮನುಷ್ಯನಿಗೆ ಬೆಲೆ ಇಲ್ಲ ಹಾಗೆಯೇ ಬ್ರಾಹ್ಮಣ್ಯವನ್ನು ಬಿಟ್ಟರೆ ಬ್ರಾಹ್ಮಣನಿಗೂ ಬೆಲೆ ಇಲ್ಲ. ಇವರು ಕಲ್ಪಿಸಿಕೊಂಡ ಅಸ್ಪೃಶ್ಯತೆ ಅಸಮಾನತೆ ಬ್ರಾಹ್ಮಣ್ಯದ ಲಕ್ಷಣವೇ ಅಲ್ಲ. ಇದಕ್ಕೆ ಸಾಧ್ಯವಿದ್ದರೆ ವೇದ ಪುರಾಣದ ಒಂದು ಪ್ರಮಾಣವನ್ನು ಕೊಡಲಿ ನೋಡೋಣ. ಅಷ್ಟೇ ಅಲ್ಲದೆ ಎಲ್ಲಾ ಕಾಲದಲ್ಲೂ ಸಮಾಜದ ಎಲ್ಲಾ ವಿಚಾರದ ಹೋರಾಟದಲ್ಲಿಯೂ ಮುಂಚೂಣಿಯಲ್ಲಿ ನಿಂತವರಲ್ಲಿ ಬಹುತೇಕ ಮಂದಿ ಬ್ರಾಹ್ಮಣರೆ ಎಂಬುವುದು ಇತಿಹಾಸ ಕಂಡುಕೊಂಡ ಸತ್ಯ. ತ್ಯಾಗ, ತಪಸ್ಸು, ಇಂದ್ರಿಯ ನಿಗ್ರಹ, ಹಾಗೂ ನಿಸ್ವಾರ್ಥತೆ ಎನ್ನುವುದು ಬ್ರಾಹ್ಮಣ್ಯದ ಪ್ರಮುಖ ಲಕ್ಷಣ. ಇದನ್ನು ಉಳಿಸಿಕೊಂಡವ ಹಾಗೂ ಇದನ್ನು ಬೆಳೆಸಿಕೊಂಡವ ಬ್ರಾಹ್ಮಣನಾಗುತ್ತಾನೆ. ಈ ಗುಣಗಳುಳ್ಳವರು ಬಹುತೇಕ ಮಂದಿ ಈ ಜಾತಿಯವರಾಗಿದ್ದು ಹಾಗೂ ಈ ಗುಣಗಳಿಂದ ತನ್ನ ಹುಟ್ಟಿದ ಜಾತಿಯನ್ನು ಮೀರಿ ಬ್ರಾಹ್ಮಣ್ಯದ ಉತ್ತಮ ಸ್ಥಾನವನ್ನು ಪಡೆದುಕೊಂಡದ್ದು ಎಲ್ಲಾ ಕಾಲದಲ್ಲಿಯೂ ಕಂಡು ಬರುತ್ತದೆ. ವೇದಕಾಲದಿಂದ ಹಿಡಿದು ಇವತ್ತಿನ ತನಕವೂ ಕೂಡ ಇದಕ್ಕೆ ಬೇಕಾದಷ್ಟು ಉದಾಹರಣೆಯನ್ನು ಕೊಡಬಲ್ಲೆ.

ಕ್ರೈಸ್ತರ ಹಾಗೂ ಮುಸ್ಲಿಮರ ದಾಳಿಯಿಂದ ಹಿಂದೂ ಸಮಾಜ ಒದ್ದಾಡುತ್ತಿದ್ದರೆ,ಬ್ರಾಹ್ಮಣ ಸಮಾಜ ಈ ದಲಿತ ಪರ ವ್ಯಕ್ತಿಗಳ ದಾಳಿಯಿಂದ ತತ್ತರಿಸುತ್ತಿದೆ . ಒಬ್ಬ ವ್ಯಕ್ತಿ ತಾನು ಹಿಂದೂ ಎಂದು ಹೇಳಿಕೊಳ್ಳಲು ನಾಚಿಕೆ ಪಡುತ್ತಾನೆಂದರೆ ಅದಕ್ಕಿಂತಲೂ ಸಾವಿರಪಟ್ಟು ಹೆಚ್ಚು ಹೇಸಿಗೆಯಾಗುವುದು ನಾನು ಬ್ರಾಹ್ಮಣ ಎಂದು ಹೇಳಿಕೊಳ್ಳಲು. ಅಷ್ಟೇ ಅಲ್ಲ ಇಲ್ಲಿಯ ತನಕವೂ ಕೂಡ ಬ್ರಾಹ್ಮಣ ಸಮಾಜದಿಂದ ಒಂದು ಅತ್ಯಾಚಾರ ಅಥವಾ ದೊಡ್ಡಮಟ್ಟದ ಕೊಲೆ ಸುಲಿಗೆಗಳು ನಡೆದಿಲ್ಲ. ಆದರೆ ಮತೀಯವಾದ ಜಿಹಾದ್ ಹಾಗೂ ಮತಾಂತರಕ್ಕೆ ಮಾತ್ರವಲ್ಲದೆ ಅತ್ಯಾಚಾರಕ್ಕೆ ಕೂಡ ಬ್ರಾಹ್ಮನ ಸಮಾಜ ಬಹಳಷ್ಟು ಅನುಭವಿಸುತ್ತಿದೆ.ಅಂತಹ ಕೆಟ್ಟ ವಾತಾವರಣ ನಡುವೆ ಬ್ರಾಹ್ಮಣ ಜೀವಿಸುವಂತಾಗಿದೆ. ವಿಶ್ವವಿದ್ಯಾನಿಲಯದಲ್ಲಿ ಕಲಿಯುವ ವಿದ್ಯಾರ್ಥಿಗಳಲ್ಲಿ ಅತ್ಯಂತ ಕಳಪೆ ಮಟ್ಟದಲ್ಲಿ ಗುರುತಿಸಲ್ಪಡುವವನು ಬ್ರಾಹ್ಮಣ. ಏಕೆಂದರೆ ದೇಶದ ಎಲ್ಲಾ ಕೆಟ್ಟ ವ್ಯವಸ್ಥೆಗಳು ಕೂಡ ಈತನಿಂದಲೇ ನಡೆದಿದ್ದು ಎಂದು ಅಲ್ಲಿನ ಅಧ್ಯಾಪಕರು ಮತ್ತೆ ಮತ್ತೆ ಒತ್ತಿ ಹೇಳುತ್ತಿರುತ್ತಾರೆ. ಹೋಮ, ಹವನ, ಪೂಜೆ, ಆಚಾರ, ವಿಚಾರ, ಮಡಿವಂತಿಕೆಯ ವಿಷಯದಲ್ಲಿ ಬ್ರಾಹ್ಮಣರದ್ದು ಬಹುಪಾಲು ಹಾಗೂ ಆ ಮೂಲಕ ಉಳಿದ ಜಾತಿಗಳನ್ನು ಅಸಮಾನತೆಯನ್ನು ತೋರಿಸುತ್ತಿದ್ದರು ಮತ್ತು ಶೋಷಣೆ ಮಾಡುತ್ತಿದ್ದರು ಎನ್ನುವ ಸುಳ್ಳಿನ ಇತಿಹಾಸವನ್ನು ಕಲಿಸುತ್ತಾರೆ. ಇದನ್ನು ಕೇಳುವಾಗ ಕಾದ ಎಣ್ಣೆ ಕಿವಿಗೆ ಸುರಿದ ಹಾಗೆ ಆಗುತ್ತಿರುತ್ತದೆ. ಆದರೂ ಕಷ್ಟಪಟ್ಟು ಕಲಿತು ಬಂದರೆ ಈ ಮೀಸಲಾತಿಯ ಪ್ರಪಂಚದಲ್ಲಿ ಈತನಿಗೆ ಸರ್ಕಾರಕ್ಕೆ ಸಂಬಂಧಪಟ್ಟ ಯಾವ ಕೆಲಸದಲ್ಲೂ ಸ್ಥಾನಮಾನವಿಲ್ಲ. ಎಲ್ಲಾ ಕಡೆಯೂ ಬೇಡದವನಾಗಿ ಬದುಕು ಸಾಗಿಸುವುದು ಈಗ ಬ್ರಾಹ್ಮಣ ಸಮಾಜಕ್ಕೆ ಅನಿವಾರ್ಯವಾಗಿದೆ.

(Continued…)

0
Shares
  • Share On Facebook
  • Tweet It




Trending Now
ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
ಸಂತೋಷ್ ಕುಮಾರ್ ಮುದ್ರಾಡಿ September 11, 2025
ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
ಸಂತೋಷ್ ಕುಮಾರ್ ಮುದ್ರಾಡಿ September 11, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
    • ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಲು ಆಸೆ- ಕೈ ಶಾಸಕ ಬಿ.ಕೆ.ಸಂಗಮೇಶ್ವರ್
    • ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ರಾಜೀನಾಮೆ!
    • ಸೌಜನ್ಯ ಕೊಲೆ ಮಾಡಿದ್ದೇ ಮಾವ ವಿಠಲ ಗೌಡ - ಸ್ನೇಹಮಯಿ ಕೃಷ್ಣರಿಂದ ಎಸ್ಪಿಗೆ ದೂರು ಅರ್ಜಿ!
    • ಸೆಪ್ಟೆಂಬರ್ 9 ರಂದು ಮದ್ದೂರು ಸ್ವಯಂಪ್ರೇರಿತ ಬಂದ್ ಗೆ ಹಿಂದೂ ಮುಖಂಡರ ಕರೆ!
  • Popular Posts

    • 1
      ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • 2
      ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • 3
      ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • 4
      ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • 5
      ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ

  • Privacy Policy
  • Contact
© Tulunadu Infomedia.

Press enter/return to begin your search