ರಾಹುಲ್ ಅಮೇಠಿಯಲ್ಲಿ ಈ ಬಾರಿ ಗೆಲುವು – ಕಾಂಗ್ರೆಸ್
ಒಂದು ವೇಳೆ ರಾಹುಲ್ ಗಾಂಧಿ ಉತ್ತರ ಪ್ರದೇಶದ ಅಮೇಠಿಯಿಂದ ಸ್ಪರ್ಧಿಸಿದರೆ ಹಾಲಿ ಸಂಸದೆ ಮತ್ತು ಕೇಂದ್ರ ಸಚಿವೆಯೂ ಆಗಿರುವ ಸ್ಮೃತಿ ಇರಾನಿ ತಮ್ಮ ಡಿಪಾಸಿಟ್ ಕೂಡ ಕಳೆದುಕೊಂಡು ಹೀನಾಯವಾಗಿ ಸೋಲಲಿದ್ದಾರೆ ಎಂದು ಕಾಂಗ್ರೆಸ್ಸಿನ ಅನೇಕ ಹಿರಿಯ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಮೇಠಿ ಗಾಂಧಿ ಕುಟುಂಬದ ” ನ್ಯಾಚುರಲ್ ಸೀಟ್” ಎಂದಿರುವ ಕಾಂಗ್ರೆಸ್ಸಿನ ಹಿರಿಯ ಮುಖಂಡ ಹರೀಶ್ ರಾವತ್, ರಶೀದ್ ಅಲ್ವಿಯವರು ಸ್ಮೃತಿ ಇರಾನಿ ಅಮೇಠಿ ಬಿಟ್ಟು ಓಡಿ ಹೋಗುವ ಸಾಧ್ಯತೆ ಇದೆ. ಆದರೆ ಭಾರತೀಯ ಜನತಾ ಪಾರ್ಟಿ ಅದಕ್ಕೆ ಅವಕಾಶ ಮಾಡಿಕೊಡಬಾರದು. ಅವರು ಅಲ್ಲಿಂದಲೇ ರಾಹುಲ್ ವಿರುದ್ಧ ಸ್ಪರ್ಧಿಸಿ ಸೋಲುವುದನ್ನು ದೇಶ ನೋಡಬೇಕು ಎಂದು ಹೇಳಿದ್ದಾರೆ. ಅದೇ ರೀತಿ ನರೇಂದ್ರ ಮೋದಿಯವರ ವಿರುದ್ಧ ವಾರಣಾಸಿಯಿಂದ ಪ್ರಿಯಾಂಕಾ ವಾದ್ರಾ ಸ್ಪರ್ಧಿಸಿದರೆ ಮೋದಿ ಸೋಲಲಿದ್ದಾರೆ. ಅದಕ್ಕಾಗಿ ಅಲ್ಲಿಂದ ಬೇರೆಡೆಯಿಂದ ಸ್ಪರ್ಧಿಸಲು ಮೋದಿ ಚಿಂತನೆ ನಡೆಸಿದ್ದಾರೆ ಎಂದು ಅಲ್ವಿ ಹೇಳಿದ್ದಾರೆ. ಈ ಬಾರಿಯ ಚುನಾವಣೆಯ ನಂತರ ಮೋದಿ ಗುಜರಾತಿಗೆ ಮರಳಬೇಕಾಗುತ್ತೆ ಎನ್ನುವುದು ಕಾಂಗ್ರೆಸ್ಸಿನ ಆಶಾವಾದ. ಹಾಗಂತ ರಾಹುಲ್ ಗಾಂಧಿ ಅಮೇಠಿಯ ಜೊತೆಗೆ ವಯನಾಡಿನಲ್ಲಿಯೂ ಸ್ಪರ್ಧಿಸುತ್ತಾರೆ ಎಂದು ಹೇಳುತ್ತಿರುವ ಕಾಂಗ್ರೆಸ್ ನಾಯಕರು ಕಷ್ಟಕಾಲದಲ್ಲಿ ಕೈ ಹಿಡಿದ ವಯನಾಡಿನ ಮತದಾರರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
Leave A Reply