ಚಂದ್ರಯಾನದ ಧೂಳಿಗೂ ಸಮನಲ್ಲದ ಪ್ರಕಾಶ್ ರೈ ಹೊಲಸು ಮನಸ್ಸಿದು!
ಚಂದ್ರಯಾನದ ಧೂಳಿಗೂ ಸಮನಲ್ಲದ ಪ್ರಕಾಶ್ ರೈ ಹೊಲಸು ಮನಸ್ಸಿದು!
ಒಂದು ಕ್ಷಣಕ್ಕೆ ಈ ಫೋಟೋ ನೋಡಿದಾಗ ಯಾರೋ ಪಾಕಿಸ್ತಾನದವರಾ, ಚೀನಾದವರಾ ಭಾರತೀಯರನ್ನು ತಮಾಷೆ ಮಾಡುತ್ತಾ ಇದ್ದಾರೇನೋ ಎಂದು ಅನಿಸಿತು. ಆದರೆ ಮೇಲೆ ಹೆಸರು ನೋಡಿದ ಬಳಿಕ ಹಾಗೆ ತಮಾಷೆ ಮಾಡಿದವನ ಮುಖ ಮತ್ತು ಹೆಸರು ನೋಡಿ ಆತನ ಮೇಲೆ ಒಮ್ಮೆ ಅಸಹ್ಯ ಮೂಡಿತು. ಹೇಳಿ, ಕೇಳಿ ಪ್ರಕಾಶ್ ರಾಜ್ ಉತ್ತಮ ನಟ. ಆ ಮನುಷ್ಯ ಅಷ್ಟೇ ಮಾಡಿದ್ರೆ ಸಾಕಿತ್ತು. ಆದರೆ ತನ್ನನ್ನು ಪ್ರೇಕ್ಷಕರು ತನ್ನ ನಟನೆಯ ಕಾರಣದಿಂದ ಮಾತ್ರ ಹೊಗಳುತ್ತಾರೆ ಎಂದು ರೈಗೆ ಗೊತ್ತಿರಬೇಕಿತ್ತು. ನಟ ಎನ್ನುವ ಏಕೈಕ ಕಾರಣದಿಂದ ತಾನು ಆಡಿದ್ದನ್ನು ಎಲ್ಲರೂ ಒಪ್ಪುತ್ತಾರೆ ಎಂದು ಯಾರೂ ಭಾವಿಸಬಾರದು. ಪ್ರಕಾಶ್ ರೈ ತನ್ನ ಮನಸ್ಸಿನ ಹೊಲಸುಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದು ವಾಕರಿಕೆ ಮಾಡಿ ಅದನ್ನು ಬೇರೆಯವರು ಸ್ವೀಕರಿಸುತ್ತಾರೆ ಎಂದು ಅಂದುಕೊಂಡಿದ್ದಾರೆ. ಅದು ಅವರ ಭ್ರಮೆ. ಈಗ ಮತ್ತೆ ಪ್ರಕಾಶ್ ರೈ ತಮ್ಮ ಬಾಯಿಯ ತ್ಯಾಜ್ಯವನ್ನು ಬರೆದು ಗಲೀಜು ಮಾಡಿಕೊಂಡಿದ್ದಾರೆ.
ಈಗ ಪ್ರಪಂಚವೇ ಭಾರತದತ್ತ ಮತ್ತೊಮ್ಮೆ ತಿರುಗಿ ನೋಡುತ್ತಿರುವುದಕ್ಕೆ ಚಂದ್ರಯಾನ ಒಂದು ಮುಖ್ಯ ಕಾರಣ. ಅದು ಭಾರತದ ಹೆಮ್ಮೆ. ರಷ್ಯಾದಂತಹ ದೇಶಗಳು ಕೂಡ ಇದರಲ್ಲಿ ಪ್ರತಿ ಬಾರಿ ಯಶಸ್ವಿಯಾಗುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ, ದೇಶದ ವಿಜ್ಞಾನಿಗಳು ಹಗಲು ರಾತ್ರಿ ಒಂದು ಮಾಡಿ ತಮ್ಮ ಅಷ್ಟೂ ಶ್ರಮವನ್ನು ಹಾಕಿ ಮಾಡಿದ ಚಂದ್ರಯಾನ ಯಶಸ್ವಿಯಾಗಲಿ ಎಂದು ಪ್ರತಿಯೊಬ್ಬ ದೇಶಪ್ರೇಮಿ ಭಾರತೀಯರು ದೇವರ ಬಳಿ ಪ್ರಾರ್ತಿಸಿದ್ದಾರೆ. ಆದರೆ ಪ್ರಕಾಶ್ ರಾಜ್ ಹಾಗೂ ಅವರಂತಹ ಗಲೀಜು ಮನಸ್ಥಿತಿಯವರು ಮಾತ್ರ ನಮ್ಮೆಲ್ಲರ ಆಶಯದ ವಿರುದ್ಧವಾಗಿ ಚಿಂತಿಸುತ್ತಿದ್ದರೇನೋ ಎಂದು ಅನಿಸುತ್ತದೆ. ಪ್ರಕಾಶ್ ರೈ ಹಾಕಿರುವ ಚಂದ್ರಯಾನ ಪೋಸ್ಟರ್ ನಲ್ಲಿ ಒಬ್ಬ ವ್ಯಕ್ತಿ ಚಾ ಮಾಡುವ ಫೋಟೋ ಹಾಕಿದ್ದಾರೆ. ಇಷ್ಟೇ ಅಲ್ಲಿಂದ ಕಾಣುತ್ತಿರುವುದು ಎಂದು ಭಾರತದ ಹೆಮ್ಮೆಯ ಸಂಸ್ಥೆ ಇಸ್ರೋವನ್ನು ಹಂಗಿಸುತ್ತಿದ್ದಾರೆ. ಚಂದ್ರಯಾನ ಒಂದು ವೈಜ್ಞಾನಿಕ ವಿಷಯ. ಅದು ಪ್ರಕಾಶ್ ರೈಯಂತಹ ಸಾಮಾನ್ಯ ವ್ಯಕ್ತಿಯ ತಲೆಗೆ ಹೋಗುವ ವಿಷಯ ಅಲ್ಲ. ಅದೇನಿದ್ದರೂ ವಿಜ್ಞಾನಿಗಳಿಗೆ ಬಿಡಬೇಕಾಗಿರುವ ವಿಷಯ. ಆದರೆ ಪ್ರಕಾಶ್ ಅವರಿಗೆ ಎಲ್ಲಾ ಕಡೆಯಲ್ಲಿಯೂ ಕಡ್ಡಿ ಅಲ್ಲಾಡಿಸುವ ಅಭ್ಯಾಸ. ಅವರು ಇದರಲ್ಲಿಯೂ ತಮ್ಮ ಹುಚ್ಚಾಟವನ್ನು ತೋರಿಸಿದ್ದಾರೆ. ಇದರಿಂದ ಅವರಂತವರನ್ನು ಬಿಟ್ಟು ಅನೇಕರಿಗೆ ಮನಸ್ಸಿಗೆ ನೋವಾಗಿದೆ. ಬೇರೆ ದೇಶದಲ್ಲಾದರೆ ಪ್ರಕಾಶ್ ರೈ ಮೇಲೆ ಏನು ಕ್ರಮ ಜರುಗಿಸಲಾಗುತ್ತದೆಯೋ ಗೊತ್ತಿಲ್ಲ, ಭಾರತವಾಗಿರುವುದರಿಂದ ಇಂತವರನ್ನೆಲ್ಲಾ ಸಹಿಸಿಕೊಳ್ಳಬೇಕು!!
Leave A Reply