ಜೈಲರ್ ಯಶಸ್ಸಿಗೆ ರಜನಿ ಅಯೋಧ್ಯೆ ಭೇಟಿ!
Posted On August 21, 2023

ಉತ್ತರ ಪ್ರದೇಶದ ಪ್ರವಾಸದಲ್ಲಿರುವ ರಜನಿಕಾಂತ್ ಅವರು ಅಯೋಧ್ಯೆಗೆ ಭೇಟಿ ನೀಡಿ ಭಗವಂತ ಶ್ರೀರಾಮನ ದರ್ಶನ ಪಡೆದಿದ್ದಾರೆ. ಇದೇ ಸಂದರ್ಭದಲ್ಲಿ ಅವರು ನಿರ್ಮಾಣ
ಹಂತದಲ್ಲಿರುವ ದೇವಸ್ಥಾನವನ್ನು ವೀಕ್ಷಣೆ ಮಾಡಿದರು. ಈ ಬಗ್ಗೆ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಮೊನ್ನೆಯಷ್ಟೇ ರಜನಿಕಾಂತ್ ಅವರು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಭೇಟಿಯಾಗಿದ್ದರು. ಅದರೊಂದಿಗೆ ಸಮಾಜವಾದಿ ಪಕ್ಷದ ಅಖಿಲೇಶ್ ಸಿಂಗ್ ಯಾದವ್, ಉತ್ತರ ಪ್ರದೇಶದ ರಾಜ್ಯಪಾಲ ಆನಂದಿಬೆನ್ ಪಟೇಲ್ ಅವರನ್ನು ಕೂಡ ಭೇಟಿಯಾಗಿದ್ದರು. ಯೋಗಿ ಆದಿತ್ಯನಾಥ್ ಅವರ ಕಾಲು ಮುಟ್ಟಿ ನಮಸ್ಕರಿಸಿರುವುದು ವಿವಾದಕ್ಕೆ ಕಾರಣವಾಗಿತ್ತು. ಜೈಲರ್ ಈಗಾಗಲೇ ಪಂಚಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ದಾಖಲೆಯ ಗಳಿಕೆಯತ್ತ ಮುನ್ನುಗುತ್ತಿದೆ.
- Advertisement -
Leave A Reply