• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ವೇದ, ಉಪನಿಷತ್ತು ,ಪುರಾತನ ಗ್ರಂಥಗಳನ್ನು ನಾಶ ಮಾಡುವುದೇ ಇವರ ಗುರಿ!

ಸಂತೋಷ್ ಕುಮಾರ್ ಮುದ್ರಾಡಿ Posted On August 22, 2023


  • Share On Facebook
  • Tweet It

ಸಾಧ್ಯವಿದ್ದಷ್ಟು ಮಟ್ಟಿಗೆ ಈ ಮೇಲಿನ ಹಿಂದುಗಳ ಲಕ್ಷಣಗಳೆಲ್ಲವನ್ನು ತನ್ನಲ್ಲಿ ಆವಾಹಿಸಿಕೊಂಡು ಬದುಕುತ್ತಿರುವ ಏಕೈಕ ಸಮಾಜ,ಇವತ್ತಿಗೆ ಕೇವಲ ಬ್ರಾಹ್ಮಣ ಸಮಾಜ ಮಾತ್ರ. ಆದರೆ ಇದನ್ನು ಒಪ್ಪಿಕೊಂಡು ಅಪ್ಪಿಕೊಂಡು ಮುಂದುವರಿಯುವುದು ಕಾಲ ಕಳೆದಂತೆ ಬಹಳ ದುಃಸ್ತರವಾಗುತ್ತಿದೆ. ಒಬ್ಬ ಕ್ರೈಸ್ತ ಅಥವಾ ಒಬ್ಬ ಮುಸ್ಲಿಂ ತನ್ನ ಧರ್ಮದ ಅಂಶವನ್ನು ತನ್ನಲ್ಲಿ ಇರಿಸಿಕೊಂಡು ಧೈರ್ಯದಿಂದ ಬದುಕುತ್ತಾನೆ. ಆದರೆ ಒಬ್ಬ ಹಿಂದೂವಿಗೆ ಅದಕ್ಕಿಂತಲೂ ಒಬ್ಬ ಬ್ರಾಹ್ಮಣನಿಗೆ ತನ್ನನ್ನು ತಾನು ಬ್ರಾಹ್ಮಣ ಎಂದು ಹೇಳಿಕೊಳ್ಳಲು ಅಥವಾ ತೋರಿಸಿಕೊಳ್ಳಲು ನಾಚಿಕೆಯಾಗುವ ಪರಿಸ್ಥಿತಿಯಲ್ಲಿ ಬ್ರಾಹ್ಮಣ ಸಮಾಜವಿದೆ. ಆ ರೀತಿಯಲ್ಲಿ ನಮ್ಮದೇ ಹಿಂದೂ ಸಮಾಜದ ಈ ಕಮ್ಯುನಿಸ್ಟ್ ಪ್ರೇರಿತ ಕೆಟ್ಟ ಬುದ್ಧಿಯ ಪ್ರಗತಿಪರ ಚಿಂತಕರ ಚಿಂತನೆಯ ವಿಷ ಹಬ್ಬಿ ನಿಂತಿದೆ. ಹಿಂದೂಗಳಿಗೆ ಗೊತ್ತಾಗದ ರೀತಿಯಲ್ಲಿ ಹಿಂದೂಗಳೆ ಬದಲಾಗುವಂತೆ ನೋಡಿಕೊಳ್ಳುವ ಮುಖ್ಯ ಕೆಲಸವನ್ನು ಈ ಪ್ರಗತಿಪರ ಚಿಂತಕರು ಒಳಗಿಂದೊಳಗೆ ಮಾಡುತ್ತಿದ್ದಾರೆ.

ಹೀಗೆಯೇ ಸಾಗಿದರೆ ಮುಂದೊಂದು ದಿವಸ ಬ್ರಾಹ್ಮಣ ಸಮಾಜವೇ ಇಲ್ಲದಂತಾಗುವುದರಲ್ಲಿ ಸಂಶಯವೇ ಇಲ್ಲ. ಇವರ ಇಲ್ಲಸಲ್ಲದ ಆರೋಪಗಳನ್ನು ಕೇಳಿ ಸುಮ್ಮನಿದ್ದು ಮತ್ತಷ್ಟು ಅವರಿಗೆ ಅವಕಾಶ ಕೊಡುವುದು ತಮ್ಮ ನಾಶಕ್ಕೆ ತಾವೇ ಕೊಳ್ಳಿ ಇಟ್ಟುಕೊಳ್ಳುವ ಹಾಗೆ. ಆದ್ದರಿಂದ ಹಿಂದೂ ಸಮಾಜದ ಕೇಂದ್ರಬಿಂದುವಾಗಿರುವ ಬ್ರಾಹ್ಮಣರು ಅತ್ಯವಶ್ಯವಾಗಿ ಸಂಘಟಿತರಾಗಬೇಕು. ಬ್ರಾಹ್ಮಣ ಸಂಘಟನೆಗಳಿಗೆ, ಉಳಿದ ಹಿಂದೂ ಸಮಾಜಗಳು ಕೂಡ ಬೆಂಬಲವನ್ನು ಕೊಡಲೇಬೇಕು. ಸನಾತನ ಧರ್ಮದ ಅಥವಾ ಹಿಂದೂ ಸಮಾಜದ ಉಳಿವಿಗಾಗಿ ಬೆಳವಣಿಗೆಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡ ಬ್ರಾಹ್ಮಣ ಸಮಾಜ,ಉಳಿಯುವುದು ಹಾಗೂ ಉಳಿಸುವುದು ಅನಿವಾರ್ಯದ ಸಂಗತಿ. ಬ್ರಾಹ್ಮಣ ಸಮಾಜವನ್ನು ಕಳೆದುಕೊಂಡ ರಾಜ್ಯಗಳು ಈಗಾಗಲೇ ತನ್ನ ಅವನತಿಯನ್ನು ಕಂಡುಕೊಳ್ಳುತ್ತಿರುವುದು ಎಲ್ಲರ ಗಮನಕ್ಕೂ ಬರುತ್ತಿದೆ.

ಅಳಿದುಳಿದ ಈಗಿನ ಬ್ರಾಹ್ಮಣ ಸಮಾಜದವರು ಕೂಡ ಪರಸ್ಪರ ಅದ್ವೈತ, ವಿಶಿಷ್ಟಾದ್ವೈತ, ದ್ವೈತ,ಸ್ಮಾರ್ತ,ಶಿವಳ್ಳಿ , ಗೌಡ ಸಾರಸ್ವತ, ಹವ್ಯಕ, ಸಂಕೇತಿ, ಹೊಯ್ಸಳ, ವಿಶ್ವಕರ್ಮ ಇತ್ಯಾದಿ ಪರಸ್ಪರ ಸಂಘಟಿತರಾಗುವುದು ಕೇವಲ ನಿಮ್ಮ ಆಚಾರ ವಿಚಾರಕ್ಕೆ ಸಂಬಂಧಪಟ್ಟ ರೀತಿಯಲ್ಲಿರಲಿ. ಸಮಾಜದ ದೃಷ್ಟಿಯಲ್ಲಿ ಇಂತಹ ದುರುದ್ದೇಶ ಪೂರಿತ ಹೋರಾಟಗಳ ವಿರುದ್ಧವಾಗಿ ಸೆಟೆದು ನಿಲ್ಲುವಾಗ ಎಲ್ಲರೂ ಬ್ರಾಹ್ಮಣರು ಎನ್ನುವ ವರ್ಗದಲ್ಲಿ ಸಂಘಟಿತರಾಗುವುದು ಒಳ್ಳೆಯದು.ಇಷ್ಟೇ ಅಲ್ಲದೆ ಅಂತರ್ರಾಜ್ಯ ಬ್ರಾಹ್ಮಣ ವರ್ಗಗಳನ್ನು ಕೂಡ ಇದರೊಳಗೆ ಸೇರಿಸುವ ಪ್ರಕ್ರಿಯೆ ನಡೆಯಬೇಕು. ಈ ರೀತಿಯಾಗಿ ಒಂದು ಛತ್ರದ ಅಡಿಯಲ್ಲಿ ಸಂಘಟಿತರಾಗುವುದು ಈ ಕಾಲಕ್ಕೆ ಅನಿವಾರ್ಯವಾದ ಸಂಗತಿ.

ಒಂದು ವೇಳೆ ಆತ್ಮಾಭಿಮಾನಕ್ಕೆ ,ಅಹಂಕಾರಕ್ಕೆ ಒಳಗಾಗಿ ತಮ್ಮ ತಮ್ಮೊಳಗೆ ಕಚ್ಚಾಡಿಕೊಂಡಿದ್ದರೆ ತಮ್ಮ ಊರಿನಲ್ಲಿಯೇ ತಾವುಗಳು ನಿರ್ಗತಿಗರಾಗುವುದಕ್ಕೆ ಹೆಚ್ಚು ದಿವಸವಿಲ್ಲ. ನಮ್ಮ ಮನೆಗೆ ನಮ್ಮ ಪರಂಪರೆಗೆ ಸಂಬಂಧಪಟ್ಟ ಮತೀಯವಾದ ಆಚಾರ ವಿಚಾರಗಳೆಲ್ಲವೂ ಕೂಡ ಮನೆಗೆ ಮೀಸಲಿರಲಿ. ಆಚಾರ ವಿಚಾರಕ್ಕೆ ಧಕ್ಕೆ ಬರದಂತೆ ಸಂಪ್ರದಾಯವನ್ನು ಉಳಿಸಿಕೊಂಡು ಕಾನೂನು ರೀತಿಯ ಪ್ರಕಾರವೇ ರಸ್ತೆಗಳಿದು ಹೋರಾಡಬೇಕಾಗುವುದು ಇನ್ನು ಬಹಳ ಅನಿವಾರ್ಯವೆಂದು ಕಾಣುತ್ತದೆ. ಈ ನಿಟ್ಟಿನಲ್ಲಿ ಕಾನೂನು ಚೌಕಟ್ಟಿನಲ್ಲಿ ಬರುವ ಬ್ರಾಹ್ಮಣರನ್ನು ಕೂಡ ಸೇರಿಸಿಕೊಳ್ಳಬೇಕು. ಈ ಯೋಚನೆ ಹಾಗೂ ಈ ಯೋಜನೆ ಕಷ್ಟವೆಂದು ಕಂಡುಬಂದರೂ ಕೂಡ ತನ್ನ ಸಂಕಲ್ಪದಿಂದ ಬೇಕಾದಷ್ಟು ಸಾಧನೆಗಳನ್ನು ಅನುಸರಿಸಿದ ಈ ಬ್ರಾಹ್ಮಣ ವರ್ಗಕ್ಕೆ ಸರಿಯಾಗಿ ಯೋಚಿಸಿ,ಯೋಜಿಸಿ ಮುಂದುವರಿದರೆ ಇದು ಕೂಡ ಸಾಧ್ಯವಾಗಿಯೇ ಆಗುತ್ತದೆ.

ಇದೊಂದು ಕೇವಲ ಬ್ರಾಹ್ಮಣ ಸಮಾಜದ ಉಳಿವಿಗಾಗಿ ಎನ್ನುವುದಕ್ಕಿಂತಲೂ ಹಿಂದೂ ಸಮಾಜದ ಉಳಿವಿಗಾಗಿ ಎನ್ನುವುದೇ ಸತ್ಯವಾಗಿದೆ. ಹಾಗೊಂದು ವೇಳೆ ನಡೆಯದಿದ್ದರೆ ಈಗಿನ ವಾತಾವರಣವೇ ಮುಂದುವರಿದರೆ ಈ ಗತಿ ಕಟ್ಟ ಚಿಂತಕರ ದಾಳಿಗೆ ಒಳಗಾಗಿ ಸವೆದು ಸಾಯಬೇಕಷ್ಟೇ. ಇದರ ಪರಿಣಾಮದಿಂದ ಮತೇತರ ದೌರ್ಜನ್ಯಗಳಿಗೆ ಹಿಂದೂ ಸಮಾಜ ಒಳಗಾಗುತ್ತದೆ. ಇವತ್ತಲ್ಲ ನಾಳೆ ಕಾಶ್ಮೀರದ ನಿರಾಶ್ರಿತ ಪಂಡಿತರ ಗತಿ ಪ್ರತಿ ಊರಿನ ಬ್ರಾಹ್ಮಣನಿಗೂ ಖಂಡಿತಾ ಬಂದೇ ಬರುತ್ತದೆ. ಪಶ್ಚಿಮ ಬಂಗಾಳದ ಬ್ರಾಹ್ಮಣನ ದುರಂತ ಅವಸ್ಥೆಗಳನ್ನು ಇಲ್ಲಿಯ ಬ್ರಾಹ್ಮಣರು ಕೂಡ ಅನುಭವಿಸಬೇಕಾಗುತ್ತದೆ. ಆ ಮೂಲಕ ಮತ್ತಷ್ಟು ಬಡಕಲಾಗುವುದು ಹಿಂದೂ ಸಮಾಜವೇ ಎಂದು ಕಣ್ಣಾರೆ ಕಾಣುತ್ತಿರುವ ಸತ್ಯ. ಆದ್ದರಿಂದ ತಮ್ಮ ತಮ್ಮ ಮತಕ್ಕಾಗಿ ಪ್ರತಿಷ್ಠೆಗಾಗಿ ವಾದ ವಿವಾದಗಳೊಂದಿಗೆ ದ್ವೇಷ ಅಸೂಯೆಗಳನ್ನು ಬೆಳೆಸಿಕೊಂಡರೆ ನಾಳೆಯ ದಿವಸ ಮತವೂ ಇರುವುದಿಲ್ಲ ಆಚರಿಸಲು ಬ್ರಾಹ್ಮಣರೂ ಇರುವುದಿಲ್ಲ ಎನ್ನುವುದಂತು ಸತ್ಯ.

ಮಠಾಧಿಪತಿಗಳು, ಸನ್ಯಾಸಿಗಳು ಈ ನಿಟ್ಟಿನಲ್ಲಿ ಯೋಚಿಸಿ ಹೆಜ್ಜೆ ಇಟ್ಟರೆ ಸಮಾಜಕ್ಕೆ ಮತ್ತಷ್ಟು ಸುಲಭವಾಗುತ್ತದೆ. ಹಿಂದೂ ಸಮಾಜದ ಎಲ್ಲಾ ಸಮಸ್ಯೆಗಳು ಒಂದಕ್ಕೆ ಒಂದು ಪೂರಕವಾಗಿ ನಿಂತಿರುವುದು. ಅದರಲ್ಲಿ ಒಂದು ಕೊಂಡಿ ಕಳಚಿತುಂತಾದರೆ ಮತ್ತೆ ಎಲ್ಲವೂ ಕೂಡ ದುರ್ಬಲವಾಗುತ್ತದೆ.

  • Share On Facebook
  • Tweet It


- Advertisement -


Trending Now
ನನ್ನ ಹೆಸರಿನಲ್ಲಿ ಮನೆಯಿಲ್ಲ, ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಮನೆ ನೀಡಿದ ತೃಪ್ತಿ ಇದೆ - ಮೋದಿ
ಸಂತೋಷ್ ಕುಮಾರ್ ಮುದ್ರಾಡಿ September 29, 2023
ಎಂಪಿ: ಅತ್ಯಾಚಾರ ಆರೋಪಿ ಎನ್ಕೌಂಟರ್
ಸಂತೋಷ್ ಕುಮಾರ್ ಮುದ್ರಾಡಿ September 29, 2023
Leave A Reply

  • Recent Posts

    • ನನ್ನ ಹೆಸರಿನಲ್ಲಿ ಮನೆಯಿಲ್ಲ, ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಮನೆ ನೀಡಿದ ತೃಪ್ತಿ ಇದೆ - ಮೋದಿ
    • ಎಂಪಿ: ಅತ್ಯಾಚಾರ ಆರೋಪಿ ಎನ್ಕೌಂಟರ್
    • ಶಿಕ್ಷಕರು ಇಲ್ಲ, ಬಸ್ಸು ಇಲ್ಲ, ಬಾರ್ ಇದೆ!
    • ಆತ್ಮಹತ್ಯೆ ಸೈಟ್ ಗೂಗಲ್ ಸರ್ಚ್ ಮಾಡಿದ್ರೆ ಪೊಲೀಸರಿಗೆ ಗೊತ್ತಾಗುತ್ತೆ!
    • ತನ್ನ ದೇಶದ ಭಿಕ್ಷುಕರನ್ನು ಅರಬ್ ರಾಷ್ಟ್ರಗಳಿಗೆ ಕಳುಹಿಸುತ್ತಿರುವ ಪಾಕ್!
    • ಇಲ್ಲಿ ಭಾವನೆ, ಅನಿವಾರ್ಯತೆ ಮತ್ತು ವಾಸ್ತವಕ್ಕೆ ಜಾಗ ಇಲ್ಲ!
    • ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಟೆ ಡೇಟ್ ಫಿಕ್ಸ್!
    • ಮಾಂಸಾಹಾರಕ್ಕೆ ಹಲಾಲ್, ಸಸ್ಯಾಹಾರಕ್ಕೆ ಸಾತ್ವಿಕ್!
    • ಮದ್ಯ: ಗೋವಾ ಕನಿಷ್ಟ, ಕರ್ನಾಟಕ ಗರಿಷ್ಟ!
    • ರೈಲು ಬೋಗಿಗಳು ಆವತ್ತು ಮತ್ತು ಇವತ್ತು!
  • Popular Posts

    • 1
      ನನ್ನ ಹೆಸರಿನಲ್ಲಿ ಮನೆಯಿಲ್ಲ, ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಮನೆ ನೀಡಿದ ತೃಪ್ತಿ ಇದೆ - ಮೋದಿ
    • 2
      ಎಂಪಿ: ಅತ್ಯಾಚಾರ ಆರೋಪಿ ಎನ್ಕೌಂಟರ್
    • 3
      ಶಿಕ್ಷಕರು ಇಲ್ಲ, ಬಸ್ಸು ಇಲ್ಲ, ಬಾರ್ ಇದೆ!
    • 4
      ಆತ್ಮಹತ್ಯೆ ಸೈಟ್ ಗೂಗಲ್ ಸರ್ಚ್ ಮಾಡಿದ್ರೆ ಪೊಲೀಸರಿಗೆ ಗೊತ್ತಾಗುತ್ತೆ!
    • 5
      ತನ್ನ ದೇಶದ ಭಿಕ್ಷುಕರನ್ನು ಅರಬ್ ರಾಷ್ಟ್ರಗಳಿಗೆ ಕಳುಹಿಸುತ್ತಿರುವ ಪಾಕ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search