ಲಡಾಕ್ ನಲ್ಲಿ ರಾಹುಲ್ ಹಿಂದಿನ ಬೈಕ್ ನಲ್ಲಿದ್ದವರು ಯಾರು ಗೊತ್ತಾ?
ಲಡಾಕ್ ಪ್ರವಾಸದಲ್ಲಿರುವ ರಾಹುಲ್ ಗಾಂಧಿಯವರು ಅಲ್ಲಿನ ಉತ್ತಮ ರಸ್ತೆಗಳಲ್ಲಿ ಬೈಕ್ ರೈಡ್ ಮಾಡುತ್ತಾ ಸಾಗಿರುವುದನ್ನು ಜಗತ್ತು ನೋಡಿದೆ. ಆವತ್ತು ಅವರೊಂದಿಗೆ ಬೈಕ್ ರೈಡ್ ಜಾಲಿ ಟ್ರಿಪ್ ನಲ್ಲಿ ಇನ್ನು ಮೂವರು ಇರುವುದನ್ನು ಎಲ್ಲರೂ ನೋಡಿದ್ದಾರೆ. ಆ ಮೂವರು ಕೂಡ ವಿದೇಶಿಗರು ಎನ್ನುವುದನ್ನು ಬ್ರಿಗೇಡಿಯರ್ ವಿ ಮಹಾಲಿಂಗಮ್ ಅವರು ತಮ್ಮ ಎಕ್ಸ್ ನಲ್ಲಿ ಬರೆದಿದ್ದಾರೆ. ಅವರಲ್ಲಿ ಇಬ್ಬರು ಕೀನ್ಯಾದವರಾಗಿದ್ದು ಶಕೀರ್ ಮಹಮ್ಮದ್ ನೂರಾಲಿ ಮಿರಾಲಿ ಹಾಗೂ ಸಾದೀಕ್ ಇರ್ಫಾನ್ ಕೀಮಾನಿ ಮೀರಾಲಿ ಎಂದು ತಿಳಿದುಬಂದಿದೆ. ಇನ್ನೊಬ್ಬರು ಲೂಯಿಗಿ ವಿನ್ಸಿ ಮತ್ತು ಆ ವ್ಯಕ್ತಿ ಇಟಲಿ ಮೂಲದವರು. ಈ ಮೂವರು ಕೂಡ ಟೂರಿಸ್ಟ್ ವೀಸಾದಲ್ಲಿ ಭಾರತದಲ್ಲಿ ಇದ್ದಾರೆ. ಈ ವಿದೇಶಿಗರು ಲಡಾಕ್ ನಲ್ಲಿ ರಾಹುಲ್ ಅವರೊಂದಿಗೆ ಬಂದಿದ್ರಾ? ಇವರಿಗೆ ಲಡಾಕ್ ನಲ್ಲಿ ಏನು ಕೆಲಸ ಎಂದು ನಿವೃತ್ತ ಸೇನಾಧಿಕಾರಿ ಪ್ರಶ್ನಿಸಿದ್ದಾರೆ.
ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಇರುವಾಗ ವಿದೇಶಿಗರು ಭಾರತದಲ್ಲಿ ಹೀಗೆ ನೆಲೆಸುವುದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ವಿದೇಶಾಂಗ ಸಚಿವರಾದ ಜೈಶಂಕರ್ ಹಾಗೂ ಕೇಂದ್ರ ಗೃಹ ಸಚಿವರಾದ ಅಮಿತಾ ಶಾ ಅವರಿಗೆ ಟ್ಯಾಗ್ ಮಾಡಿದ್ದಾರೆ.
Leave A Reply