ತಿರುಪತಿ ತಿಮ್ಮಪ್ಪನ ಕಿರೀಟದಂತೆ ಗೋಚರಿಸಿದ ವಿಕ್ರಮ್ ಲ್ಯಾಂಡರ್!
ಇಡೀ ಜಗತ್ತು ಬುಧವಾರ ಚಂದ್ರಯಾನ -3 ಕ್ಕೆ ಸಾಕ್ಷಿಯಾಯಿತು. ಭಾರತದ ಮೂಲೆಮೂಲೆಗಳಲ್ಲಿ ಇದರ ಸಂಭ್ರಮಾಚರಣೆ ನಡೆಯಿತು. ಭಾರತದ ಜನಸಾಮಾನ್ಯನಿಂದ ಹಿಡಿದು ತಾರೆಯರ ತನಕ ಎಲ್ಲರೂ ಇಸ್ರೋವನ್ನು ಮತ್ತು ಇದರ ಯಶಸ್ಸಿನ ಹಿಂದಿರುವ ಪ್ರಮುಖರನ್ನು ಕೊಂಡಾಡಿದರು. ಈ ನಡುವೆ ಇದರ ಕ್ರೆಡಿಟ್ ಪಡೆಯುವ ಕೆಲಸದಲ್ಲಿಯೂ ರಾಜಕೀಯ ನಡೆದಿರುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ನಾವು ಗಮನಿಸಿದ್ದೇವೆ.
ಈಗ ವಿಷಯ ಏನೆಂದರೆ ವಿಕ್ರಮ್ ಲ್ಯಾಂಡರ್ ಅನ್ನು ನೀವು ಬಹಳ ಸೂಕ್ಷ್ಮವಾಗಿ ಗಮನಿಸಿರಬಹುದು. ಅದೇ ಹೊತ್ತಿಗೆ ತಿರುಪತಿ ತಿಮ್ಮಪ್ಪನ ಫೋಟೋವನ್ನು ಮನದಲ್ಲಿ ಕಲ್ಪಿಸಿಕೊಳ್ಳಿ. ಬೇಕಾದರೆ ನಾವು ಈಗ ಪೋಸ್ಟ್ ಮಾಡಿದ ಫೋಟೋವನ್ನು ಕಣ್ಣಾರೆ ನೋಡಿ. ತಿರುಪತಿ ತಿಮ್ಮಪ್ಪನ ಕಿರೀಟ ಹಾಗೂ ವಿಕ್ರಮ್ ಲ್ಯಾಂಡರ್ ಬಹುತೇಕ ಒಂದೇ ರೀತಿಯಲ್ಲಿ ಕಾಣುತ್ತವೆ. ನಾಸ್ತಿಕರು ಇದನ್ನು ಅತಿರೇಕದ ಹೋಲಿಕೆ ಎಂದು ಬಣ್ಣಿಸಬಹುದು. ಆದರೆ ದೈವಿಕ ದೃಷ್ಟಿಯಿಂದ ನೋಡಿದರೆ ಇದೆರಡು ಒಂದೇ ತರಹ ಕಾಣುವುದರಲ್ಲಿ ಸಂಶಯವಿಲ್ಲ. ಚಂದ್ರಯಾನ -3 ಉಡಾವಣೆಯ ಮೊದಲು ಇಸ್ರೋ ಪ್ರಮುಖರು ತಿರುಪತಿ ದೇವಸ್ಥಾನಕ್ಕೆ ತೆರಳಿ ತಿಮ್ಮಪ್ಪನ ಆರ್ಶೀವಾದವನ್ನು ಕೋರಿದ್ದರು. ಅದನ್ನು ಕೆಲವು ಎಡಪಂಥಿಯ ಚಿಂತಕರು ಟೀಕಿಸಿದ್ದರು. ಚಂದ್ರಯಾನ-3 ತಿಮ್ಮಪ್ಪನ ಪಾದಕ್ಕೆ ಎಂದು ಹಂಗಿಸಿದ್ದರು. ಕೊನೆಗೂ ಚಂದ್ರಯಾನ-3 ಯಶಸ್ಸಾಗುವುದರೊಂದಿಗೆ ದೇವರ ಆರ್ಶೀವಾದ ಈ ಯೋಜನೆಯ ಮೇಲಿತ್ತು ಎಂದು ಆಸ್ತಿಕರು ಧೈರ್ಯದಿಂದ ಹೇಳಬಹುದು. ಅದೇ ರೀತಿ ಟೀಕಾಕಾರರ ಬಾಯಿಯನ್ನು ಮುಚ್ಚಿಸಬಹುದು. ಚಂದ್ರಯಾನ -3 ಯಶಸ್ವಿಯಾಗುವ ಮೊದಲು ಇಸ್ರೋ ಅಧ್ಯಕ್ಷ ಸೋಮನಾಥ್ ಅವರು ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದ್ದನ್ನು ನಾವು ಸ್ಮರಿಸಬಹುದು.
Leave A Reply