ಹನುಮಾನ್ ಚಾಲೀಸಾ ಪಠಿಸುತ್ತಾ ಚಂದ್ರಯಾನ 3 ವೀಕ್ಷಿಸಿದ ಜಪಾನ್!
ಭಾರತದ ಹೆಮ್ಮೆಯ ಚಂದ್ರಯಾನ-3 ಅನ್ನು ವಿಶ್ವವೇ ನಿಬ್ಬೆರಗಾಗಿ ಬುಧವಾರ ವೀಕ್ಷಿಸಿತು. ಇದು ಕೇವಲ ಭಾರತದಲ್ಲಿರುವ ನಾಗರಿಕರಿಗೆ ಮಾತ್ರ ಸಂತೋಷದ ಸಂಗತಿ ಆಗಿರಲಿಲ್ಲ. ವಿಶ್ವಾದ್ಯಂತ ಇರುವ ಅನಿವಾಸಿ ಭಾರತೀಯರು ಕೂಡ ಈ ದಿನ ಸಂಭ್ರಮವನ್ನು ಆಚರಿಸಿಕೊಂಡರು. ಬುಧವಾರ ಸಂಜೆ 6 ಗಂಟೆಯ ಸುಮಾರಿಗೆ ವಿಕ್ರಮ್ ಲ್ಯಾಂಡರ್ ಸುರಕ್ಷಿತವಾಗಿ ಚಂದ್ರನಲ್ಲಿ ತನ್ನ ಇರುವನ್ನು ಸಾಬೀತುಪಡಿಸುತ್ತಲೇ ಭಾರತೀಯರು ಹರ್ಷೋದ್ಧಾರಗಳಿಂದ ಅದನ್ನು ಸಂಭ್ರಮಿಸಿದರು. ಈ ಸಂದರ್ಬದಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೆಂದ್ರ ಪಡ್ನವೀಸ್ ಅವರು ಜಪಾನಿನ ಟೋಕಿಯೋದಲ್ಲಿ ಇದ್ದರು. ಅಲ್ಲಿ ಇದರ ವೀಕ್ಷಣೆಗೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು.
ಅಲ್ಲಿರುವ ಸಭಾಂಗಣದಲ್ಲಿ ಹಾಕಿರುವ ಬೃಹತ್ ಪರದೆಯ ಮೇಲೆ ಅವರು ಅನಿವಾಸಿ ಭಾರತೀಯರೊಂದಿಗೆ ಕುಳಿತು ಚಂದ್ರಯಾನ 3 ಇದರ ಸಾರ್ಥಕ ಕ್ಷಣಗಳನ್ನು ವೀಕ್ಷಿಸಿದರು. ಈ ಸಮಯದಲ್ಲಿ ಸಭಾಂಗಣದಲ್ಲಿ ಹನುಮಾನ್ ಚಾಲೀಸಾ ಪಠಣ ನಡೆಸಲಾಯಿತು. ಚಂದ್ರಯಾನ 3 ಯಶಸ್ವಿಯಾಗಿ ನಡೆಯಲಿ ಎಂದು ಹನುಮಾನ್ ಚಾಲೀಸಾ ಪಠಿಸುತ್ತಾ ದೇವರನ್ನು ಪ್ರಾರ್ಥಿಸಲಾಯಿತು. ಇದರ ವಿಡಿಯೋವನ್ನು ದೇವೆಂದ್ರ ಪಡ್ನವೀಸ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೈ ಭಜರಂಗ ಬಲಿ, ವಂದೇ ಮಾತರಂ ಎಂದು ಬರೆದುಕೊಂಡಿರುವ ಅವರು ಪ್ರಪಂಚದ ಯಾವುದೇ ಮೂಲೆಯಲ್ಲಿರಲಿ ಇಂತಹ ದೃಶ್ಯವನ್ನು ಮಿಸ್ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಈ ಉತ್ಸಾಹ ಮತ್ತು ಹುಮ್ಮಸ್ಸನ್ನು ನೋಡಿ ಖುಷಿಯಾಯಿತು ಎನ್ನುವ ಅರ್ಥದ ಸಾಲುಗಳನ್ನು ಬರೆದಿದ್ದಾರೆ. ಭಾರತೀಯ ಹಿಂದೂಗಳು ಜಗತ್ತಿನಲ್ಲಿ ಎಲ್ಲಿಯೇ ವಾಸಿಸುತ್ತಿರಲಿ, ತಮ್ಮ ಸಂಸ್ಕೃತಿಯನ್ನು ಮರೆಯುವುದಿಲ್ಲ ಎನ್ನುವುದಕ್ಕೆ ಹನುಮಾನ್ ಚಾಲೀಸಾ ಪಠಣವೇ ಸಾಕ್ಷಿ.
Leave A Reply