ಇಸ್ರೋ ಕಚೇರಿಗೆ ಭೇಟಿ ನೀಡಲಿರುವ ಮೋದಿ

ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆ ಮುಗಿದ ತಕ್ಷಣ ಅಲ್ಲಿಂದ ನೇರವಾಗಿ ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಆಗಮಿಸಲಿದ್ದಾರೆ. ಅಗಸ್ಟ್ 26 ರಂದು ಸಂಜೆ ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೋ ಕಚೇರಿಗೆ ಅವರು ಭೇಟಿ ನೀಡಲಿದ್ದಾರೆ. ಅಲ್ಲಿಯೇ ಅವರು ವಿಜ್ಞಾನಿಗಳಿಗೆ ವೈಯಕ್ತಿಕ ಶುಭ ಹಾರೈಸಿ ಮುಂದಿನ ಯೋಜನೆಗಳ ಬಗ್ಗೆ ಸಭೆ ನಡೆಸಲಿದ್ದಾರೆ.
ಈಗಾಗಲೇ ಚಂದ್ರಯಾನ -3 ಯಶಸ್ವಿಯಾದ ಬೆನ್ನಲ್ಲೇ ತಮ್ಮ ಮುಂದಿನ ಹೆಜ್ಜೆಗಳ ಬಗ್ಗೆ ಜೋಹಾನ್ಸ್ ಬರ್ಗ್ ನಿಂದಲೇ ಮೋದಿಯವರು ಜಗತ್ತನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಚಂದ್ರನ ಬಳಿಕ ಇನ್ನು ಸೂರ್ಯನ ಬಗ್ಗೆ ಇಸ್ರೋ ಸಂಶೋಧನೆ ನಡೆಸಲಿದೆ. ಅದಕ್ಕೆ ಆದಿತ್ಯ ಎಲ್-ವಿ ಹೆಸರನ್ನು ಯೋಜನೆಗೆ ಇಡುವ ಸಾಧ್ಯತೆಗಳಿವೆ. ಆ ಬಳಿಕ ಭಾರತದ ಹೆಮ್ಮೆಯ ಸಂಸ್ಥೆ ಇಸ್ರೋ ಶುಕ್ರ ಗ್ರಹದ ಬಗ್ಗೆ ಕೂಡ ಅಧ್ಯಯನ ನಡೆಸಲಿದೆ. ವಿಕ್ರಮ ಲ್ಯಾಂಡರ್ ಈಗಾಗಲೇ ಹಲವು ಫೋಟೋಗಳನ್ನು ಇಸ್ರೋಗೆ ಕಳುಹಿಸಿಕೊಟ್ಟಿದೆ. ಈ ಯೋಜನೆಯಿಂದ ಆಗಲಿರುವ ಪ್ರಯೋಜನಗಳು ಮತ್ತು ಈ ಮೂಲಕ ಇಸ್ರೋ ಮಾಡಿರುವ ಸಾಧನೆಗಳ ಬಗ್ಗೆ ಇಡೀ ಪ್ರಪಂಚವೇ ಭಾರತದತ್ತ ಮತ್ತೊಮ್ಮೆ ತಿರುಗಿ ನೋಡುವಂತಾಗಿದೆ. ಇದರೊಂದಿಗೆ ಸೂರ್ಯ ಮತ್ತು ಶುಕ್ರ ನಮ್ಮ ಮುಂದಿನ ಗುರಿಗಳು ಎಂದು ಪ್ರಧಾನಿ ಹೇಳಿರುವುದು ಭಾರತದ ಶಕ್ತಿ ಸಾಮರ್ತ್ಯವನ್ನು ಪ್ರಪಂಚಕ್ಕೆ ತೋರಿಸಿಕೊಟ್ಟಂತೆ ಆಗಿದೆ.
Leave A Reply