“ಡಿಕೆಶಿ” ಹಣ ಬಡವರಿಗೆ ಹಂಚಲು ಹೇಳಿ – ಸಿಎಂಗೆ ಯತ್ನಾಳ್ ತಿರುಗೇಟು
Posted On August 25, 2023

ಮೋದಿಗೆ ಸಿದ್ದು ಟಾಂಗ್! ಯತ್ನಾಳ್ ತಿರುಗೇಟು
“ಬರೀ ಅಂಬಾನಿ – ಅದಾನಿ ಜೇಬಿನಲ್ಲಿ ಹಣ ಇದ್ದರೆ ಬಡವರ, ಮಧ್ಯಮ ವರ್ಗದವರ ಉದ್ಧಾರ ಸಾಧ್ಯವಿಲ್ಲ. ತಿಮ್ಮ – ಬೋರ – ಕಾಳನ ಜೇಬಿನಲ್ಲಿ ಹಣ ಇದ್ದರೆ ಮಾತ್ರ ಆರ್ಥಿಕತೆ ಬೆಳವಣಿಗೆ ಆಗುತ್ತದೆ” ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಟಾಂಗ್ ನೀಡಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಭಾರತೀಯ ಜನತಾ ಪಾರ್ಟಿ ಮುಖಂಡ, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ತಿರುಗೇಟು ನೀಡಿದ್ದಾರೆ.
“ಮಾನ್ಯ ಮುಖ್ಯಮಂತ್ರಿಗಳ ಆಶಯ ಸರಿಯಾಗಿಯೇ ಇದೆ. ಬಡವರ ಜೇಬಿನಲ್ಲಿ ಹಣವಿದ್ದರೆ ಮಾತ್ರ ಆರ್ಥಿಕತೆ ಬೆಳವಣಿಗೆಯಾಗುತ್ತದೆ. ರಾಷ್ಟ್ರದಲ್ಲೇ ಅತ್ಯಂತ ಶ್ರೀಮಂತ ನಿಮ್ಮ “ಡಿಕೆಶಿ” ಬಳಿ 1146 ಕೋಟಿ ಇದೆಯಂತೆ, ದಯವಿಟ್ಟು ಬಡವರಿಗೆ ಹಂಚುವುದಕ್ಕೆ ಹೇಳಿ. ಕೇವಲ ಡಿಕೆಶಿಯ ಬಳಿ ಇದ್ದರೇ ಅದರಿಂದ ಆರ್ಥಿಕ ಬೆಳವಣಿಗೆ ಆಗುವುದಿಲ್ಲ. ಬಡವರ ಜೇಬಿನಲ್ಲಿ ಹಣವಿರಬೇಕು” ಎಂದು ಯತ್ನಾಳ್ ತಮ್ಮ “ಎಕ್ಸ್” ನಲ್ಲಿ ಬರೆದಿದ್ದಾರೆ.
- Advertisement -
Trending Now
ಎಂಪಿ: ಅತ್ಯಾಚಾರ ಆರೋಪಿ ಎನ್ಕೌಂಟರ್
September 29, 2023
Leave A Reply