ಜೈಲರ್ ವಿರುದ್ಧ ಆರ್ ಸಿಬಿ ಕೋರ್ಟಿಗೆ!
Posted On August 29, 2023

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ ಸಿನೆಮಾ ಈಗಾಗಲೇ 500 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಆದರೆ ಈ ಸಿನೆಮಾದಲ್ಲಿ ಒಂದು ದೃಶ್ಯವನ್ನು ಕಟ್ ಮಾಡಬೇಕೆಂದು ಆರ್ ಸಿಬಿ ದೆಹಲಿ ಕೋರ್ಟ್ ಮೆಟ್ಟಲೇರಿತ್ತು. ಯಾಕೆಂದರೆ ಸಿನೆಮಾದ ಒಂದು ದೃಶ್ಯದಲ್ಲಿ ಕಾಂಟ್ರಾಕ್ಟ್ ಕಿಲ್ಲರ್ ಪಾತ್ರಧಾರಿಯೊಬ್ಬ ಆರ್ ಸಿಬಿ ಜೆರ್ಸಿ ಧರಿಸಿರುವುದು ಆರ್ ಸಿಬಿ ಪ್ರವರ್ತಕರ ಕೆಂಗೆಣ್ಣಿಗೆ ಗುರಿಯಾಗಿದೆ. ಆರ್ ಸಿಬಿ ಜೆರ್ಸಿ ಧರಿಸಿರುವ ವ್ಯಕ್ತಿ ಸ್ತ್ರೀ ದ್ವೇಷಿಯಾಗಿ ಕಾಣಿಸಿಕೊಂಡಿದ್ದಾರೆ. ಆದ್ದರಿಂದ ಆ ದೃಶ್ಯವನ್ನು ಸೆನ್ಸಾರ್ ಮಾಡುವಂತೆ ಕೋರ್ಟ್ ಮೊರೆ ಹೋಗಲಾಗಿತ್ತು.
ಜೆರ್ಸಿ ಬಳಕೆಗೆ ತಂಡದ ಅನುಮತಿ ಪಡೆದಿರಲಿಲ್ಲ. ಹಾಗಾಗಿ ಜೈಲರ್ ಸಿನೆಮಾದ ಆ ದೃಶ್ಯಗಳನ್ನು ತೆಗೆದುಹಾಕುವಂತೆ ಚಿತ್ರದ ನಿರ್ಮಾಪಕರಿಗೆ ಹೈಕೋರ್ಟ್ ನಿರ್ದೇಶಿಸಿದೆ. ಸೆಪ್ಟೆಂಬರ್ 1 ರಿಂದ ಚಿತ್ರಮಂದಿರದಲ್ಲಿ ಆರ್ ಸಿಬಿ ಜೆರ್ಸಿ ಧರಿಸಿರುವ ದೃಶ್ಯ ಕಟ್ ಆಗಲಿದೆ.
- Advertisement -
Leave A Reply