• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಸಂಕೇತಿಗಳು ಅಂದ್ರೆ ಯಾರು ಅನ್ನೋದು ನಿಮಗೆ ತಕ್ಷಣಕ್ಕೆ ಗೊತ್ತಾಗೋದಿಲ್ಲ…

Subhash Bangarpete Posted On August 29, 2023


  • Share On Facebook
  • Tweet It

ಏನ್ಗುರು ಈ ಬ್ರಾಹ್ಮಣರು ಬಹುಜನರಿಗೆ ಶಿಕ್ಷಣಕೊಡದೆ ತಾವೇ ಬುದ್ದಿವಂತರಾಗಿದ್ದರು.

ನಮ್ಮ‌ Generation ನಮ್ಮ ಕುಟುಂಬದಲ್ಲಿ postgraduate ಶಿಕ್ಷಣ ಪಡೆದ ಮೊದಲ Generation.

ನನ್ನ ತಂದೆಯ Generation ನಲ್ಲಿ ಯಾರೂ Postgraduate ಗಳು ಇಲ್ಲ…. ಇನ್ನು ನಮ್ಮ‌ ತಾತನ Generation ಎಷ್ಟು ಓದಿತ್ತು ಅನ್ನೋದನ್ನ ಕೇಳಬೇಡಿ…….

ಅಂದಹಾಗೆ ನಾನು ಸಂಕೇತಿ ಸಮುದಾಯಕ್ಕೆ ಸೇರಿದವನು….

ಸಂಕೇತಿಗಳು ಅಂದ್ರೆ ಯಾರು ಅನ್ನೋದು ನಿಮಗೆ ತಕ್ಷಣಕ್ಕೆ ಗೊತ್ತಾಗೋದಿಲ್ಲ…

ಮತ್ತೂರು ಎಂಬ ಗ್ರಾಮ ಮತ್ತು ಅದು ಸಂಸ್ಕೃತ ಗ್ರಾಮವೆಂಬ ಖ್ಯಾತಿ ಗಳಿಸಿರುವುದು ನಿಮಗೆಲ್ಲ ಗೊತ್ತೇ ಇರುತ್ತದೆ….

ಆ ಗ್ರಾಮದವರು ಸಂಸ್ಕೃತ ಮಾತನಾಡುತ್ತಾರೆ ಅನ್ನೋದು ಎಷ್ಟು ಸತ್ಯವೋ ಆ ಗ್ರಾಮಸ್ಥರ ಮಾತೃಭಾಷೆ ಸಂಸ್ಸೃತ ಅಲ್ಲ ಅನ್ನೋದು ಕೂಡ ಅಷ್ಟೇ ಸತ್ಯ…..‌ ಆ ಗ್ರಾಮಸ್ಥರ ಮಾತೃಭಾಷೆ ಸಂಕೇತಿ ಭಾಷೆ…..‌ ಮತ್ತು ಅಲ್ಲಿರುವವರೆಲ್ಲ ಸಂಕೇತಿ ಭಾಷೆ ಮಾತನಾಡುವ ಸಂಕೇತಿಗಳು……

ಸಂಸ್ಕೃತವನ್ನು ಇಂದಿಗೂ ಉಳಿಸಿಕೊಂಡು ಬಂದಿರುವ ಅಂತಹ ಮಹಾನ್ ಸಮುದಾಯದ ಕುಡಿ ನಾನು…..

ರಾಷ್ಟ್ರೀಯ ಸ್ವಯಂಸೇವಕ ಸಂಘದ ಪೂರ್ವ ಸರಸಂಘಚಾಲಕ ಕೆ.ಎಸ್. ಸುದರ್ಶನ್, ಭಾರತೀಯ ವಿಧ್ಯಾಭವನದ ಪೂರ್ವ ನಿರ್ದೇಶಕ ಪದ್ಮಶ್ರೀ ಮತ್ತೂರು ಕೃಷ್ಣಮೂರ್ತಿ, ಗಮಕಿ ಪದ್ಮಶ್ರೀ ಹೊಸಹಳ್ಳಿ ಕೇಶವಮೂರ್ತಿ, ಸಂಗೀತ ವಿಧ್ವಾಂಸರಾದ RK ಶ್ರೀಕಂಠನ್, RK ಪದ್ಮನಾಭ, ಹಿರಿಯ ಪತ್ರಕರ್ತ HR ರಂಗನಾಥ್ ( ಪಬ್ಲಿಕ್ TV ರಂಗಣ್ಣ), ವಿದೂಶಿ Dr. TS ಸತ್ಯವತಿ ( ಸತ್ಯವತಿ ಸಂಬಂಧದಲ್ಲಿ ನನಗೆ ಸೋದರತ್ತೆ) ಎಲ್ಲರೂ ಸಂಕೇತಿ ಸಮುದಾಯಕ್ಕೆ ಸೇರಿದವರೇ…..

ಇಲ್ಲಿ ನಾನು ಕೆಲವೇ ಕೆಲವು ಮಂದಿಯನ್ನು Mention ಮಾಡಿದ್ದೇನೆ ಒಂದೊಂದು ಕ್ಷೇತ್ರವನ್ನು ಹುಡುಕುತ್ತಾ ಆ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದವರ List ಮಾಡಲು ಹೋದರೂ ಪಟ್ಟಿ ಬಹಳವೇ ದೊಡ್ಡದಾಗುತ್ತದೆ…..

ನಾನು ಇದನ್ನೆಲ್ಲ ಯಾಕೆ ಹೇಳಿದೆ ಅಂದ್ರೆ ಸಂಸ್ಕಾರ ಉಳಿಸುವ ಜೊತೆ ಜೊತೆಗೇ ಬದುಕಿನ ಅನಿವಾರ್ಯತೆಗಾಗಿ So called Modern ಶಿಕ್ಷಣಕ್ಕೂ ಅಷ್ಟೇ ಮಹತ್ವ ಕೊಟ್ಟ ಸಮುದಾಯ ಸಂಕೇತಿ ಸಮುದಾಯ ಅನ್ನೋದನ್ನ ಅರ್ಥ ಮಾಡಿಸೋಕೆ ಅಷ್ಟೇ…

ಆದರೆ ಅಂತಹ ಸಂಕೇತಿ ಸಮುದಾಯದಲ್ಲಿ ಹುಟ್ಟಿದ ನನ್ನ ಪೂರ್ವಿಕರು Double Graduate ಗಳಾಗಿರಲಿಲ್ಲ ಅನ್ನೋದನ್ನೂ ನಾನು ಹೇಳಿದೆ.

ಏಕೆಂದರೆ ಓದುವ ಆಸಕ್ತಿ ಇದ್ದರೂ ಓದಿಸುವ ಅನುಕೂಲ ನಮ್ಮ ಪೂರ್ವಜರಿಗೆ ಇರಲಿಲ್ಲ…..‌ ಬಡತನದ ಸಮಸ್ಯೆ ಅಷ್ಟರ ಮಟ್ಟಿಗೆ ಹೆಚ್ಚೂಕಡಿಮೆ ಇಡೀ ಸಮುದಾಯಕವನ್ನು ಕಾಡುತ್ತಿತ್ತು…..

ಕಾಲೇಜುಗಳು ಪಟ್ಟಣಗಳಲ್ಲಿ ಇರುತ್ತಿದ್ದುದರಿಂದ ಅಲ್ಲಿಗೆ ಹೋಗಿ ಇದ್ದು ಓದುವ ಶಕ್ತಿ ಹೆಚ್ಚಿನವರಿಗೆ ಇರಲಿಲ್ಲ……

ನಂತರದ ದಿನಗಳಲ್ಲಿ ಸಂಕೇತಿ ಸಂಘಗಳ ವತಿಯಿಂದ ಸಮುದಾಯದ ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನ ನೀಡಿ ಅವರ ಓದನ್ನು ಪ್ರೋತ್ಸಾಹಿಸುವ ಕೆಲಸವನ್ನು ಸಂಕೇತಿ ಸಂಘಗಳು ಶುರು ಮಾಡಿದವು… ಇದರಿಂದ ವಿಧ್ಯಾಭ್ಯಾಸ ಪಡೆಯುವವರ ಸಂಖ್ಯೆ ವೃದ್ದಿಸಿತು…..

ಅನಂತರ ಅದೇ ಸಂಕೇತಿ ಸಂಘಗಳು ಮೈಸೂರು, ಹಾಸನ, ಶಿವಮೊಗ್ಗ ದಂತಹ ಸಂಕೇತಿಗಳು ನೆಲೆಸಿದ್ದ ಗ್ರಾಮಗಳಿಗೆ ಹತ್ತಿರವಿದ್ದ ನಗರಗಳಲ್ಲಿ ವಿಧ್ಯಾರ್ಥಿ ನಿಲಯಗಳನ್ನು ನಿರ್ಮಿಸಿ ಅಲ್ಲಿ ಸಮುದಾಯದ ವಿಧ್ಯಾರ್ಥಿಗಳಿಗೆ ಉಚಿತ Hostel ಸೌಲಭ್ಯ ಒದಗಿಸಿದವು…‌ ಇದರಿಂದ ಸಂಕೇತಿ ಸಮುದಾಯಕ್ಕೆ ಸೇರಿದ ಮಕ್ಕಳಲ್ಲಿ ಕಾಲೇಜಿನ ಮೆಟ್ಟಿಲು ಹತ್ತುವವರ ಸಂಖ್ಯೆ ದೊಡ್ಡ ಮಟ್ಟದಲ್ಲಿ ಬೆಳೆಯಿತು.

ಏಕೆಂದರೆ ಮೈಸೂರು, ಹಾಸನ ಮತ್ತು ಶಿವಮೊಗ್ಗದಂತಹ ನಗರಗಳಲ್ಲಿ ಉತ್ತಮ ಎನಿಸಿಕೊಂಡ ಕಾಲೇಜುಗಳು ಇದ್ದವು… ಮತ್ತು ಅದರ ಜೊತೆಗೆ ಉಚಿತ Hostel ಸೌಲಭ್ಯವೂ ಇತ್ತು.

ಸ್ವತಃ ನನ್ನ ತಾಯಿ, ಮತ್ತು ನಾನು ಸಂಘದ Hostel ನಲ್ಲಿ ಇದ್ದು ವಿಧ್ಯಾಭ್ಯಾಸ ಮಾಡಿದವರೇ….‌

ಸಂಕೇತಿ ಸಮುದಾಯ ಶಿಕ್ಷಣ ಪಡೆದಿದ್ದರಲ್ಲಿ ಸಂಕೇತಿ ಸಂಘದ ಪಾತ್ರ ಬಹಳ ಮಹತ್ವದ್ದು ಅನ್ನೋದರಲ್ಲಿ ಎರಡನೇ ಮಾತೇ ಇಲ್ಲ

ಆ ಸಂಘಗಳು ಮತ್ತು ಸಂಘದ Hostel ಗಳು ಇಲ್ಲದೇ ಹೋಗಿದ್ದಿದ್ದರೆ ಸಮುದಾಯದ ಎಷ್ಟೋ ಜನ ಕಾಲೇಜು ಮಟ್ಟಿಲು ಹತ್ತಲೂ ಸಾಧ್ಯ ಇರಲಿಲ್ಲ….

ಶಿಕ್ಷಣಕ್ಕೆ ಇಷ್ಟು ಮಹತ್ವ ಕೊಟ್ಟ ಸಮುದಾಯವೇ ಸಮುದಾಯದ ಸಂಘದ ಸಹಕಾರ ಇಲ್ಲದೆ ಶಿಕ್ಷಣ ಪಡೆಯುವುದು ಬಡತನದ ಕಾರಣಕ್ಕೆ ಸಾಧ್ಯವಿರಲಿಲ್ಲ ಎಂದ ಮೇಲೆ ಆ ಸಮುದಾಯ ತಾನು ಮಾತ್ರ ಶಿಕ್ಷಣ ಪಡೆದು ಬೇರೆಯವರನ್ನು ಶಿಕ್ಷಣದಿಂದ ದೂರ ಇಡುವುದು ಹೇಗೆ ಸಾಧ್ಯ…

ಇಲ್ಲಿ ಸಂಕೇತಿ ಬ್ರಾಹ್ಮಣ ಸಮುದಾಯ ಕೇವಲ ಒಂದು ಉದಾಹರಣೆ ಅಷ್ಟೇ…..

ಅಂದಿನ ದಿನಗಳಲ್ಲಿ ಬಡತನ, ಹಣ ಮತ್ತು resources ನ ಕೊರತೆ ಅನ್ನೋದು ಎಲ್ಲ ಬ್ರಾಹ್ಮಣ ಸಮುದಾಯದ ಅಥವಾ ಒಟ್ಟಾರೆ ಭಾರತೀಯ ಸಮಾಜದ Common ಸಮಸ್ಯೆ ಆಗಿತ್ತು.

ಬ್ರಾಹ್ಮಣರು ಬಡತನದ ಕಾರಣಕ್ಕಾಗಿ ತಾವೇ ಶಿಕ್ಷಣ ಪಡೆಯುವುದು ಸಾಧ್ಯವಿಲ್ಲದಿದ್ದಾಗ ಅವರು ಇತರೆ ಸಮುದಾಯಗಳನ್ನು ಶಿಕ್ಷಣದಿಂದ ದೂರ ಇಡುವುದು ಹೇಗೆ..? ಇದರಲ್ಲಿ ಏನಾದರೂ Logic ಇದೆಯಾ ನೀವೇ ಯೋಚಿಸಿ….

(Continued…)

  • Share On Facebook
  • Tweet It


- Advertisement -


Trending Now
ರೈಲು ಬೋಗಿಗಳು ಆವತ್ತು ಮತ್ತು ಇವತ್ತು!
Subhash Bangarpete September 26, 2023
ಕಾಂಗ್ರೆಸ್ಸಿಗೆ ಇ.0.ಡಿ.ಯಾ ಮೈತ್ರಿಕೂಟದ ಒಳಗೆನೆ ಸ್ಪರ್ಧೆ!
Subhash Bangarpete September 26, 2023
Leave A Reply

  • Recent Posts

    • ರೈಲು ಬೋಗಿಗಳು ಆವತ್ತು ಮತ್ತು ಇವತ್ತು!
    • ಕಾಂಗ್ರೆಸ್ಸಿಗೆ ಇ.0.ಡಿ.ಯಾ ಮೈತ್ರಿಕೂಟದ ಒಳಗೆನೆ ಸ್ಪರ್ಧೆ!
    • ರಾಮ ಮಂದಿರ ಉದ್ಘಾಟನೆಯ ಬಳಿಕ ಗೋಧ್ರಾ ಹತ್ಯಾಕಾಂಡ ನಡೆಯಬಹುದು - ಠಾಕ್ರೆ
    • ಮಂಗಳೂರು - ಗೋವಾ ವಂದೇ ಭಾರತ್ ರೈಲು ಸೇವೆ
    • ಕುಕ್ಕರ್ ಬಾಂಬ್ ಸಂಚಿನ ಹಿಂದಿನ ಮಾಸ್ಟರ್ ಮೈಂಡ್ ಅರಾಫತ್ ಆಲಿ ಬಂಧನ
    • ಅಂದು ಸಿದ್ದು, ಇಂದು ಹರಿ!
    • ಆ ನಿರೂಪಕ ಇದ್ದರೆ ಬರಲ್ಲ ಎನ್ನುವುದು ಶೂರತನವೇ?
    • ಏನಂತ ಚೈತ್ರಾಳಿಗೆ ಅಷ್ಟು ಹಣ ಕೊಟ್ರು ಪೂಜಾರಿ!?
    • ಉತ್ತರಖಂಡದ ಮದರಸಾಗಳಲ್ಲಿ ಇನ್ನು ಸಂಸ್ಕೃತ ಶಿಕ್ಷಣ
    • ಭಾರತ್ ಮಾತಾ ಕೀ ಜೈ ಎಂದು ಮೀಡಿಯಾ ಸೆಂಟರ್ ನಲ್ಲಿ ಉದ್ಘೋಷಣೆ!
  • Popular Posts

    • 1
      ರೈಲು ಬೋಗಿಗಳು ಆವತ್ತು ಮತ್ತು ಇವತ್ತು!
    • 2
      ಕಾಂಗ್ರೆಸ್ಸಿಗೆ ಇ.0.ಡಿ.ಯಾ ಮೈತ್ರಿಕೂಟದ ಒಳಗೆನೆ ಸ್ಪರ್ಧೆ!
    • 3
      ರಾಮ ಮಂದಿರ ಉದ್ಘಾಟನೆಯ ಬಳಿಕ ಗೋಧ್ರಾ ಹತ್ಯಾಕಾಂಡ ನಡೆಯಬಹುದು - ಠಾಕ್ರೆ
    • 4
      ಮಂಗಳೂರು - ಗೋವಾ ವಂದೇ ಭಾರತ್ ರೈಲು ಸೇವೆ


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search