ಕಾಂಗ್ರೆಸ್ಸಿಗರು ಹರಕೆ ಹೊತ್ತರೆ ಓಕೆ, ಬೇರೆಯವರಿಗೆ ಟೀಕೆ!
ಯಾವುದೇ ಕಾರ್ಯ ಫಲಪದ್ರವಾಗಲಿ ಎಂದು ಬೇಡಿಕೊಂಡು ದೇವರಿಗೆ ಹರಕೆ ಹೊತ್ತಿಕೊಳ್ಳುವುದು ಅಥವಾ ಪ್ರಾರ್ಥನೆ ಸಲ್ಲಿಸುವುದು ಸನಾತನ ಸಂಸ್ಕೃತಿಯಲ್ಲಿ ನಡೆದುಕೊಂಡು ಬಂದಿರುವ ಸಂಪ್ರದಾಯ. ಆಸ್ತಿಕ ಬಾಂಧವರು ಇದನ್ನು ತಲೆತಲಾಂತರಗಳಿಂದ ಆಚರಿಸಿಕೊಂಡು ಬಂದಿದ್ದಾರೆ. ತಾವು ಬಯಸಿದ ಕಾರ್ಯಗಳು ಅನುಷ್ಟಾನಕ್ಕೆ ಬಂದ ನಂತರ ಅದನ್ನು ಈಡೇರಿಸಿದ್ದಕ್ಕಾಗಿ ದೇವರಿಗೆ ಧನ್ಯವಾದ ಅರ್ಪಿಸುವ ಅಂಗವೇ ಹರಕೆ ತೀರಿಸುವುದು. ದೇವಸ್ಥಾನಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿದವರನ್ನು ಹೀಯಾಳಿಸುವವರು ಇದ್ದಾರೆ. ಕಳೆದ ಬಾರಿ ಚಂದ್ರಯಾನ -3 ಯಶಸ್ಸಿಗಾಗಿ ಇಸ್ರೋ ವಿಜ್ಞಾನಿಗಳು ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದಾಗ ಅದನ್ನು ಟೀಕಿಸಿದವರು ಇದ್ದಾರೆ. ಚಂದ್ರಯಾನಕ್ಕೆ ತಿರುಪತಿ ತಿಮ್ಮಪ್ಪನ ಪಾದವೇ ಗತಿ ಎಂದು ಮೂದಲಿಸಿದವರು ಇದ್ದಾರೆ. ವಿಜ್ಞಾನಿಗಳು ಚಂದ್ರಯಾನ ಯಶಸ್ಸು ಗಳಿಸಿದ ನಂತರ ದೇವರಿಗೆ ಕೃತಜ್ಞತೆ ಸಲ್ಲಿಸಲು ಹೋದಾಗಲು ವ್ಯಂಗ್ಯವಾಡಿದವರು ಇದ್ದಾರೆ.
ಈಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿರುವುದರಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆಶಿವಕುಮಾರ್ ಅವರು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ದೇವಿಗೆ ಹರಕೆ ತೀರಿಸಲು ತೆರಳಿದ್ದಾರೆ. ಅಲ್ಲಿಯೇ ಗೃಹಲಕ್ಷ್ಮಿ ಯೋಜನೆ ಸುಸೂತ್ರವಾಗಿ ನಡೆಯಲು ಪ್ರಾರ್ಥನೆ ಸಲ್ಲಿಸಿ ಚಾಲನೆ ನೀಡಿದ್ದಾರೆ. ಸಿಎಂ, ಡಿಸಿಎಂ ಚುನಾವಣೆಯ ಮೊದಲು ಅಧಿಕಾರಕ್ಕೆ ಬರಲು ಹರಕೆ ಹೊತ್ತಿರುವುದು ಮಾಧ್ಯಮಗಳ ಮೂಲಕ ಎಲ್ಲರಿಗೂ ಗೊತ್ತಾಗಿದೆ. ಇದು ಈಗ ಚರ್ಚೆಗೆ ಕಾರಣವಾಗಿದೆ. ಚಂದ್ರಯಾನ ಯಶಸ್ವಿಯಾಗಲು ತಿರುಪತಿ ತಿಮ್ಮಪ್ಪನಿಗೆ ಪ್ರಾರ್ಥನೆ ಸಲ್ಲಿಸಿದಾಗ ವ್ಯಂಗ್ಯ ಮಾಡಿದವರು ಈಗ ಯಾಕೆ ಮೌನವಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಮಾತಿನ ಬಾಣವನ್ನು ಎಸೆದಿದ್ದಾರೆ. ಹಾಗಾದರೆ ಕಾಂಗ್ರೆಸ್ಸಿಗರು ಹರಕೆ ಹೊತ್ತರೆ, ಪ್ರಾರ್ಥನೆ ಸಲ್ಲಿಸಿದರೆ ಅದು ಓಕೆ. ಅದೇ ಬೇರೆಯವರು ಹರಕೆ ಅಥವಾ ಪ್ರಾರ್ಥನೆ ಸಲ್ಲಿಸಿದರೆ ಅದು ಹೇಗೆ ವ್ಯಂಗ್ಯ, ಟೀಕೆಗೆ ಕಾರಣವಾಗುತ್ತದೆ. ಈಗ ಯಾಕೆ ಬುದ್ಧಿಜೀವಿಗಳು, ಪ್ರಗತಿಪರರು ಮಾತನಾಡುವುದಿಲ್ಲ ಎಂದು ಹಲವರು ಕೇಳುತ್ತಿದ್ದಾರೆ. ಎಡಪಂಥಿಯರ ಈ ಮೌನ ಕೂಡ ಟೀಕೆಗೆ ಕಾರಣವಾಗಿದೆ.
Leave A Reply