ಅನಧಿಕೃತ ಬ್ಯಾನರ್, ಸಚಿವರಿಗೆ ದಂಡ!
Posted On August 31, 2023
0

ಅನಧಿಕೃತ ಬ್ಯಾನರ್ ಹಾಕುವುದರ ವಿರುದ್ಧ ಕಠಿಣ ಕ್ರಮ ಮುಂದುವರೆಸಿರುವ ರಾಜ್ಯ ಸರಕಾರದ ಅಧಿಕಾರಿಗಳು ಸ್ವತ: ಸಚಿವರ ವಿರುದ್ಧ ಕ್ರಮ ತೆಗೆದುಕೊಳ್ಳುವುದನ್ನು ಮುಂದುವರೆಸಿದ್ದಾರೆ. ಕಲಬುರಗಿ ಮಹಾನಗರ ಪಾಲಿಕೆಯ ಅನುಮತಿ ಪಡೆಯದೇ ಬ್ಯಾನರ್ ಹಾಕಿದ್ದಕ್ಕಾಗಿ ಪ್ರಿಯಾಂಕ್ ಖರ್ಗೆ ಅವರಿಗೆ ದಂಡ ವಿಧಿಸಲಾಗಿದೆ. ಪ್ರಿಯಾಂಕ್ ಖರ್ಗೆ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದಾರೆ.
ಕಲಬುರಗಿ ನಗರದ ಹೊರವಲಯದ ಬಂಗರಗಾ ಕಲ್ಯಾಣ ಮಂಟಪದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲು ಆಗಮಿಸುತ್ತಿದ್ದ ಪ್ರಿಯಾಂಕ್ ಖರ್ಗೆ ಅವರಿಗೆ ಸ್ವಾಗತ ಕೋರಲು ಅವರ ಬೆಂಬಲಿಗರು ಬ್ಯಾನರ್ ಹಾಕಿದ್ದರು.
Trending Now
ಅನುಶ್ರೀ - ರೋಷನ್ ದಾಂಪತ್ಯ ಜೀವನಕ್ಕೆ ನಿಮ್ಮದೂ ಶುಭ ಹಾರೈಕೆ ಇರಲಿ!
August 28, 2025
ಬಸ್ ನಲ್ಲಿ 200 ಕೆಜಿ ಸ್ಫೋಟಕ ಪತ್ತೆ! ತಪ್ಪಿದ ದೊಡ್ಡ ಸಂಚು..
August 26, 2025