• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ವಿನಾಶ ಕಾಲ ಸನ್ನಿಹಿತವಾಗಿರುವುದರಿಂದಲೇ ಸ್ಟಾಲಿನ್ ಗೆ ಈ ವಿಪರೀತ ಬುದ್ಧಿ ಬಂದಿದೆ!

ಸಂತೋಷ್ ಕುಮಾರ್ ಮುದ್ರಾಡಿ Posted On September 6, 2023
0


0
Shares
  • Share On Facebook
  • Tweet It

ಬುದ್ಧಿಜೀವಿಗಳು ತುಂಬಾ ಹತಾಶರಾದರೆ, ತಿರಸ್ಕಾರಕ್ಕೆ ಒಳಗಾದರೆ, ಮನೆಯ ಹತ್ತಿರದ ಬ್ರಾಹ್ಮಣನಿಂದ ಹಿಡಿದು ಈ ದೇಶದ ತನಕ ದೂರುತ್ತಾ ಸಾಗುತ್ತಾರೆ. ಬೇಕಾದರೆ ನೀವೇ ನೋಡಿ ಕೆಲವು ಕಡೆ ರಾಷ್ಟ್ರವನ್ನು ದೂರುತ್ತಾರೆ, ಸಂಸ್ಕೃತಿಯನ್ನು ದೂರುತ್ತಾರೆ, ಆಚಾರ ವಿಚಾರಗಳನ್ನು ದೂರುತ್ತಾರೆ, ಮತ್ತು ಸಾಕಾಗಲಿಲ್ಲವಾದರೆ ಬ್ರಾಹ್ಮಣರನ್ನು ದೂರುತ್ತಾರೆ. ಇದು ಒಟ್ಟಾರೆ ಅವರ ಕೆಲಸ. ಇಲ್ಲಿ ಯಾವುದೂ ಕೂಡ ಒಂದೇ ಒಂದು ತಿರುಳಿಲ್ಲದ ಮಾತುಗಳೇ ಕೂಡಿರುತ್ತದೆ. ಒಮ್ಮೆಗೆ ನೂರಾರು ಜನ ಸುಳ್ಳನ್ನು ಸತ್ಯವೆಂದು, ನೂರಾರು ಕಡೆ ಹೇಳಿದರೆ ಆಗ ಸುಳ್ಳೇ ಸತ್ಯವಾಗುತ್ತದೆ. ಇದು ನಿಯಮ ತಾನೆ. ನಮ್ಮ ಇತಿಹಾಸ ನಿಂತಿರುವುದೇ ಹೀಗೆ.ಈ ನಿಯಮ ಬದುಕಿರುವ ತನಕ ಇವರ ಬದುಕಿಗೆ ಯಾವ ತೊಂದರೆಯೂ ಆಗುವುದಿಲ್ಲ.

ಒಂದು ಪರಂಪರೆಯನ್ನು ಅಥವಾ ಒಂದು ಸಂಸ್ಕೃತಿಯನ್ನು ಬಿಂಬಿಸಿ ಮಾತನಾಡಬೇಕಾದರೆ ವಿದ್ಯೆ ಹಾಗೂ ಸಂಶೋಧನೆ ಅತ್ಯಗತ್ಯ. ಅದೇ ವಿರೋಧಿಸುವುದಾದರೆ ಅಲ್ಪಸ್ವಲ್ಪ ಜ್ಞಾನ ಹಾಗೂ ಒಳ್ಳೆಯ ಮಾತನಾಡುವ ಶಕ್ತಿ ಇದ್ದರೆ ಸಾಕಾಗುತ್ತದೆ. ಎಳ್ಳಿನ ಅಧ್ಯಯನದ ಅಗತ್ಯವೂ ಕೂಡ ವಿರೋಧಿಸುವವರಿಗೆ ಬೇಕಾಗಿರುವುದಿಲ್ಲ. ನೀವು ನಿಮ್ಮ ಹತ್ತಿರದವರನ್ನೇ ಗಮನಿಸಿಕೊಳ್ಳಿ. ನಿಮಗೆ ಚೆನ್ನಾಗಿ ಗೊತ್ತಿದ್ದವರನ್ನು ನಿಮ್ಮ ಎದುರಿಗಿರುವವ ಯಾವುದೋ ಸಣ್ಣ ವಿಚಾರವನ್ನಿಟ್ಟುಕೊಂಡು ದೂರುತ್ತಿದ್ದಾನೆಂದರೆ ಆತನ ಅಜ್ಞಾನ ಹಾಗೂ ವೈಯಕ್ತಿಕ ದ್ವೇಷ ಅದಕ್ಕೆ ಕಾರಣ ಎಂದು ನಿಮಗೆ ಸುಲಭದಲ್ಲಿಯೇ ಗೊತ್ತಾಗುತ್ತದೆ. ಈ ವಿಚಾರದಲ್ಲಿ ಅವರನ್ನು ಒಪ್ಪಿಸಲು ಸಾಧ್ಯವೇ ಇಲ್ಲ.

ಆದರೆ ಎಲ್ಲಾ ಬುದ್ಧಿಜೀವಿಗಳ ದುರಂತವೂಂದಿದೆ. ಅವರ ಈ ಎಡಬಿಡಂಗಿ ಮಾತುಗಳನ್ನು ಅವರ ಹೆಂಡತಿ ಮಕ್ಕಳು ಕೂಡ ಕೇಳುವುದಿಲ್ಲ. ದೇವರನ್ನು ಸನಾತನ ಧರ್ಮವನ್ನು ದೂರುವ ಇವರಿಗೆ ಮನೆಯಲ್ಲಿ ನಡೆಯುವ ಆಚರಣೆಗಳನ್ನು ನಿಲ್ಲಿಸುವ ಯೋಗ್ಯತೆಯಿಲ್ಲ. ಎಲ್ಲಾ ಆಚರಣೆಗಳು ಕೂಡ ಇವರ ಮನೆಯಲ್ಲಿಯೇ ಕಾಣಸಿಗುತ್ತದೆ. ಇದಕ್ಕೆ ಸ್ಟಾಲಿನ್ ಹಾಗೂ ಪ್ರಕಾಶರಾಜ್ ಇತ್ಯಾದಿ ಯಾರೂ ಕೂಡ ಹೊರತಲ್ಲ. ಇದಕ್ಕೆ ಗದ್ದರ್, ಅನಂತಮೂರ್ತಿಯಂತವರು ಜ್ವಲಂತ ನಿದರ್ಶನ. ಇದಕ್ಕೆಲ್ಲಾ ಅವರ ಉತ್ತರ,ಅವರವರ ಆಚರಣೆ ಅವರ ವೈಯಕ್ತಿಕ ವಿಚಾರ ಎನ್ನುವುದೇ ಆಗಿದೆ. ಉಳಿದವರ ಆಚರಣೆಗಳು ಯಾವುದು ಕೂಡ ವೈಯಕ್ತಿಕವಾಗಿರುವುದಿಲ್ಲ. ಕೇವಲ ಅವರ ಮನೆಯವರದ್ದು ಮಾತ್ರ ವೈಯಕ್ತಿಕ ಎನ್ನುವ ಈ ಮುಠ್ಠಾಳರಿಂದ ಏನು ನಿರೀಕ್ಷಿಸಲು ಸಾಧ್ಯವಿದೆ.

ಇದಕ್ಕೆಲ್ಲ ದೊಡ್ಡ ಧೈರ್ಯ ಈ ದೇಶದ ಹಿಂದೂ ಸಮಾಜದ ಪ್ರತಿರೋಧವಿಲ್ಲದ ಸ್ಥಿತಿ. ಇವರು ಬೇರೆ ಮತಗಳ ಬಗ್ಗೆ ಅಥವಾ ಬೇರೆ ಆಚಾರ ವಿಚಾರಗಳ ಬಗ್ಗೆ ವಿಮರ್ಶೆ ಮಾಡದೆಯೇ ಗೊತ್ತಾಗುವ ಸತ್ಯ ಸಂಗತಿಗಳನ್ನು ತೆರೆದು ಹೇಳಲಿ. ಉಳಿದ ಸಮಾಜದ ಮತಾಂತರ, ಭೂಕಬಳಿಕೆ, ಭಯೋತ್ಪಾದನೆ, ಆತ್ಮಹುತಿ ಸಿದ್ದಾಂತ, ಜಿಹಾದಿ ಮನಸ್ಥಿತಿ, ಪರಂಪರೆಗಾಗಿ ವಿದ್ಯೆ ಹಾಗೂ ಹೆಣ್ಣನ್ನು ದುರುಪಯೋಗಪಡಿಸಿಕೊಳ್ಳುವ ಪದ್ಧತಿ ಹೀಗೆ ಇದ್ಯಾವುದರ ಬಗ್ಗೆಯೂ ಕೂಡ ಇವರ ವಿಮರ್ಶೆ ಸಾಗುವುದಿಲ್ಲ. ಇವರ ಅಧ್ಯಯನದ ದೃಷ್ಟಿಗೆ ಕಾಣುವುದು ಕೇವಲ ಹಿಂದೂಗಳ ಅಥವಾ ಸನಾತನ ಧರ್ಮದ ತಪ್ಪುಗಳು ಮಾತ್ರ. ಎಲ್ಲಾ ಮತ ಪಂಥಗಳ ಅಥವಾ ಧಾರ್ಮಿಕ ವಿಧಿ ವಿಧಾನಗಳ ಆಚರಣೆಗಳು ಕೂಡ ಮನುಷ್ಯ ನಿರ್ಮಿತವೇ ಆಗಿದೆ. ತಪ್ಪಿರುವುದು ಸಹಜ ಆದರೆ ತಿದ್ದಿಕೊಳ್ಳುವುದು ವಿಶೇಷವಾದ ಗುಣ.

ಕಾಲಕಾಲಕ್ಕೆ ಎಲ್ಲಾ ವಿಚಾರದಲ್ಲಿಯೂ ತನ್ನನ್ನು ಪರಿವರ್ತಿಸಿಕೊಂಡು ಸಮಾಜದೊಂದಿಗೆ ಸಾಗುತ್ತಿರುವ ಪ್ರಪಂಚದ ಏಕೈಕ ಸಿದ್ಧಾಂತ ಸನಾತನ ಧರ್ಮ ಮಾತ್ರ. ಇಲ್ಲಿ ಮನೆಯ ಆರಾಧನೆಯಿಂದ ಹಿಡಿದು ಊರಿನ ಉತ್ಸವದ ತನಕ, ಮನೆಯ ತಾಯಿಯನ್ನು ದೇವರಾಗಿಸಿಕೊಂಡು, ಚರಾಚರ ಜಗತ್ತಿನ ಎಲ್ಲಾ ವಸ್ತು, ಪ್ರಾಣಿ, ಸಸ್ಯಗಳಲ್ಲಿ ದೇವರನ್ನು
ಕಾಣುವ ತನಕ, ಮಂತ್ರ ವಿದ್ಯೆಯಿಂದ ಹಿಡಿದು ಯಂತ್ರ ವಿಜ್ಞಾನದ ತನಕ ಎಲ್ಲಾ ವಿಚಾರದಲ್ಲಿ ತನ್ನನ್ನು ಬೆಳೆಯಿಸಿಕೊಂಡು ಸಮಾಜವನ್ನು ಉಳಿಸಿಕೊಂಡು ಬೆಳೆಸಿಕೊಂಡು ಸಾಗುತ್ತಿರುವ ಏಕಮಾತ್ರ ಸಿದ್ಧಾಂತ ನಮ್ಮ ಸನಾತನ ಧರ್ಮದ ಹಿಂದೂ ಸಿದ್ಧಾಂತ.

ನಮ್ಮ ಸನಾತನ ಧರ್ಮ ಹುಟ್ಟಿಲ್ಲದ ಧರ್ಮ. ಆದ್ದರಿಂದ ನಾಶವಿಲ್ಲದ್ದು ಎನ್ನುವುದು ಪರಮ ಮೂರ್ಖತನ ವಾದ. ಈಗಾಗಲೇ ಕ್ಷೀಣಿಸುತ್ತಿರುವುದು ನಮಗೆಲ್ಲರಿಗೂ ಗೊತ್ತೇ ಇದೆ.ಇದನ್ನೆ ಬಂಡವಾಳವಾಗಿಸಿಕೊಂಡು ಇವರುಗಳು ಬಾಯಿಬಂದ ಹಾಗೆ ಬೊಗಳುವುದು.ಆದರೆ ಇವರ ವಿರುದ್ಧ ಹೋರಾಟಕ್ಕೆ ಕಡಿಯುವುದು ಕಡಿಯುವುದು ಅಥವಾ ಇದೇ ರೀತಿಯಲ್ಲಿ ಬಾಯಿ ಬಂದ ಹಾಗೆ ಮಾತನಾಡುವುದು ಹಿಂದೂಗಳ ಜಾಯಮಾನವಲ್ಲ. ಅದಕ್ಕಾಗಿ ಇದರ ವಿರುದ್ಧ ಹೋರಾಡಬೇಕಾದರೆ ನೇರವಾಗಿ ಬಹಿಷ್ಕಾರವೊಂದೇ ದಾರಿ. ಯಾರು ಈ ಬಗ್ಗೆ ಮಾತನಾಡುತ್ತಾರೋ ಅವರನ್ನು, ಅವರ ಉದ್ಯಮವನ್ನು, ಅವರ ಸಮಾಜವನ್ನು ಬಹಿಷ್ಕರಿಸಲೇ ಬೇಕಾಗುತ್ತದೆ. ಹೇಗೆ ಯಾವನೋ ಒಬ್ಬ ಮಾಡಿದ ತಪ್ಪಿಗೆ ಇಡೀ ಸಮಾಜವನ್ನು ಇವರು ಗುರುತು ಮಾಡಿ ದೂರುತ್ತಾರೆಯೋ ಅದೇ ದಾರಿಯನ್ನು ಹಿಂದುಗಳು ಕೂಡ ಅವಲಂಬಿಸಲೇಬೇಕು.

0
Shares
  • Share On Facebook
  • Tweet It




Trending Now
ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!
ಸಂತೋಷ್ ಕುಮಾರ್ ಮುದ್ರಾಡಿ July 8, 2025
ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!
ಸಂತೋಷ್ ಕುಮಾರ್ ಮುದ್ರಾಡಿ July 8, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!
    • ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!
    • ನನಗಾಗಿ ಚಿಂತಿಸಬೇಡಾ, ದೇಶಕ್ಕಾಗಿ ಆಡು.. ಆಕಾಶ್ ದೀಪ್ ತಂಗಿಯ ಭಾವನಾತ್ಮಕ ಮಾತು! ಏನಾಗಿದೆ ಆಕೆಗೆ...
    • ಕನ್ನಯ್ಯ ಲಾಲ್ ಹತ್ಯಾ ಕಥೆಯುಳ್ಳ ಉದಯಪುರ್ ಫೈಲ್ ಸಿನೆಮಾ ಬಿಡುಗಡೆಗೆ ತಡೆ ಕೋರಿ ಜಮಿಯತ್ ಉಲ್ಮಾ ಐ ಹಿಂದ್ ಉಚ್ಚನ್ಯಾಯಾಲಯಕ್ಕೆ!
    • ಕರ್ನಾಟಕದಲ್ಲಿ ಮುಸ್ಲಿಮರಿಲ್ಲದ ಊರಿನಲ್ಲಿ ಹಿಂದೂ ಸಮಾಜದಿಂದ ಮೊಹರಂ ಆಚರಣೆ!
    • ಗ್ಯಾರಂಟಿ ಅಥವಾ ಅಭಿವೃದ್ಧಿ: ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಜನರ ಮುಂದೆ ಆಯ್ಕೆ ಇಟ್ರಾ?
    • 20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
    • 20, 30 ವಯಸ್ಸಿನಲ್ಲಿ ಮಗು ಬೇಕೆನ್ನುವ ಆಸೆ ಹುಟ್ಟಿರಲಿಲ್ಲ, 40 ರಲ್ಲಿ ಬಂತು! ಖ್ಯಾತ ನಟಿಯ ಮನದಿಂಗಿತ...
    • ಸ್ಯಾನಿಟರಿ ಪ್ಯಾಡ್ ಪ್ಯಾಕೆಟ್ ಮೇಲೆ ರಾಹುಲ್ ಗಾಂಧಿ ಫೋಟೋಗೆ ಜೆಡಿಯು-ಬಿಜೆಪಿ ವ್ಯಂಗ್ಯ!
    • ಪರಸ್ಪರ ಸಮ್ಮತಿಯಿಂದ ನಡೆದ ಲೈಂಗಿಕ ಕ್ರಿಯೆ ನಂತರ ರೇಪ್ ಎನ್ನಲಾಗುವುದಿಲ್ಲ - ಕೇರಳ ಹೈಕೋರ್ಟ್ ಆದೇಶ
  • Popular Posts

    • 1
      ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!
    • 2
      ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!
    • 3
      ನನಗಾಗಿ ಚಿಂತಿಸಬೇಡಾ, ದೇಶಕ್ಕಾಗಿ ಆಡು.. ಆಕಾಶ್ ದೀಪ್ ತಂಗಿಯ ಭಾವನಾತ್ಮಕ ಮಾತು! ಏನಾಗಿದೆ ಆಕೆಗೆ...
    • 4
      ಕನ್ನಯ್ಯ ಲಾಲ್ ಹತ್ಯಾ ಕಥೆಯುಳ್ಳ ಉದಯಪುರ್ ಫೈಲ್ ಸಿನೆಮಾ ಬಿಡುಗಡೆಗೆ ತಡೆ ಕೋರಿ ಜಮಿಯತ್ ಉಲ್ಮಾ ಐ ಹಿಂದ್ ಉಚ್ಚನ್ಯಾಯಾಲಯಕ್ಕೆ!
    • 5
      ಕರ್ನಾಟಕದಲ್ಲಿ ಮುಸ್ಲಿಮರಿಲ್ಲದ ಊರಿನಲ್ಲಿ ಹಿಂದೂ ಸಮಾಜದಿಂದ ಮೊಹರಂ ಆಚರಣೆ!

  • Privacy Policy
  • Contact
© Tulunadu Infomedia.

Press enter/return to begin your search