ಹಿಂದೂ ಧರ್ಮಕ್ಕೆ ಆತ ಹೇಳಿದ್ದನ್ನು ನಾನು ಇಸ್ಲಾಂ, ಕ್ರೈಸ್ತ ಮತಕ್ಕೆ ಹೇಳಿದ್ರೆ!
ತಮ್ಮ ಕಟ್ಟರ್ ಹಿಂದೂ ಧರ್ಮದ ಪರ ಮಾತುಗಳಿಂದ ಸದಾ ಸುದ್ದಿಯಲ್ಲಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಾಂತಾ ಬಿಸ್ವಾ ಶರ್ಮಾ ಅವರು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ಇತ್ತೀಚೆಗೆ ಉದಯನಿಧಿ ಸ್ಟಾಲಿನ್ ಹೇಳಿಕೆ ಕೊಟ್ಟಿದ್ದರು ಮತ್ತು ಆ ಹೇಳಿಕೆಗೆ ತಾವು ಬದ್ಧರಿರುವುದಾಗಿ, ಕೇಸು ಹಾಕಿದರೆ ಪ್ರಕರಣ ಎದುರಿಸಲು ಸಿದ್ಧ ಎಂದು ಪ್ರತಿಪಾದಿಸಿದ್ದರು. ಉದಯನಿಧಿ ಹೇಳಿಕೆಯ ಬಗ್ಗೆ ಮಾಧ್ಯಮದವರು ಅಸ್ಸಾಂ ಮುಖ್ಯಮಂತ್ರಿಯ ಪ್ರತಿಕ್ರಿಯೆ ಕೇಳಿದಾಗ ” ನಾನು ಸ್ಟಾಲಿನ್ ಹೇಳಿಕೆಯನ್ನು ಖಂಡಿಸುತ್ತೇನೆ. ಆದರೆ ಅದರೊಂದಿಗೆ ಈ ವಿಷಯದಲ್ಲಿ ಕಾಂಗ್ರೆಸ್ ನ ನಿಲುವಿನ ಬಗ್ಗೆ ತೀವ್ರ ಅಸಮಾಧಾನವಿದೆ. ನಾನು ಕಾಂಗ್ರೆಸ್ಸಿಗರಿಗೆ ಈ ವಿಷಯದಲ್ಲಿ ಕೇಳುವುದೆನೆಂದರೆ ಒಂದು ವೇಳೆ ನಾನು ಇದೇ ರೀತಿಯ ಹೇಳಿಕೆಯನ್ನು ಇಸ್ಲಾಂ ಅಥವಾ ಕ್ರೈಸ್ತ ಮತದ ವಿರುದ್ಧ ನೀಡಿದರೆ ಆಗ ಏನಾಗುತ್ತಿತ್ತು. ಆಗಲೂ ಕಾಂಗ್ರೆಸ್ ಅದು ನನ್ನ ವಾಕ್ ಸ್ವಾತಂತ್ರ್ಯ ಎಂದು ಸುಮ್ಮನೆ ಕುಳಿತುಕೊಳ್ಳುತ್ತಿತ್ತಾ? ಅದು ಹಿಂದೂ ಧರ್ಮವಾಗಿರಲಿ ಅಥವಾ ಇಸ್ಲಾಂ ಅಥವಾ ಕ್ರೈಸ್ತ ಮತವಾಗಿರಲಿ, ಅದನ್ನು ನಿರ್ಮೂಲನೆ ಮಾಡುತ್ತೇನೆ ಎನ್ನುವುದು ಸರಿಯಲ್ಲ. ಇದಕ್ಕೆಲ್ಲಾ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರೇ ಕಾರಣ ಎಂದು ಹೀಮಾಂತ್ ಬಿಸ್ವಾ ಶರ್ಮಾ ಹೇಳಿದ್ದಾರೆ.
Leave A Reply