ಭಾರತ ಎಂದು ಕರೆದಾಗ ತೃಪ್ತಿ – ವಿರೇಂದ್ರ ಸೆಹ್ವಾಗ್

ನಾನು ಯಾವುದೇ ರಾಜಕೀಯ ಪಕ್ಷದ ಅಭಿಯಾನಿಯಲ್ಲ. ಎಲ್ಲಾ ರಾಜಕೀಯ ಪಕ್ಷದಲ್ಲಿಯೂ ಕೆಲವರು ಉತ್ತಮ ವ್ಯಕ್ತಿಗಳು ಹಾಗೂ ಅಸಮರ್ಥರು ಇದ್ದಾರೆ. ನನಗೆ ಯಾವುದೇ ರಾಜಕೀಯ ಮಹತ್ವಾಕಾಂಕ್ಷೆಗಳಿಲ್ಲ. ಒಂದು ವೇಳೆ ಇದ್ದಿದ್ದರೆ ಕಳೆದ ಎರಡು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿಯೇ ನನಗೆ ಹಲವು ರಾಜಕೀಯ ಪಕ್ಷಗಳಿಂದ ಆಹ್ವಾನವಿತ್ತು ಎಂದು ಸ್ಫೋಟಕ ಬ್ಯಾಟ್ ಮೆನ್, ಆಲ್ ರೌಂಡರ್ ವಿರೇಂದ್ರ ಸೆಹ್ವಾಗ್ ತಮ್ಮ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ. ನಾನು ಕ್ರೀಡಾ ಮೈದಾನದಲ್ಲಿ ಮಾಡಿದ ಸಾಧನೆ ನನಗೆ ಯಾವುದೇ ರಾಜಕೀಯ ಪಕ್ಷದಿಂದ ಟಿಕೆಟ್ ಸಿಗುವಷ್ಟು ಸಾಕು. ಆದರೆ ರಾಜಕೀಯ ಸಿದ್ಧಾಂತಗಳನ್ನು ಬದಿಗೊತ್ತಿ ಹೇಳುವುದಾದರೆ ನನ್ನ ಆಸಕ್ತಿ ಇರುವುದು “ಭಾರತ್” ಮೇಲೆ ಎಂದು ವಿವರಣೆ ನೀಡಿದ್ದಾರೆ.
ಒಂದು ವೇಳೆ ವಿಪಕ್ಷಗಳು ಎಲ್ಲಾ ಒಂದಾಗಿ ತಮ್ಮ ಒಕ್ಕೂಟಕ್ಕೆ ಇಟ್ಟಿರುವ “ಇಂ.ಡಿ.ಯಾ” ಹೆಸರನ್ನು ಬದಲಾಯಿಸಿ ಭಾರತ್ ಎಂದು ಬೇಕಾದರೆ ಮಾಡಿ. ಭಾ.ರ.ತ್ ಎನ್ನುವ ಶಬ್ದದ ವಿಸ್ತ್ರತ ರೂಪವನ್ನು ಬೇಕಾದರೆ ಕ್ರಿಯಾತ್ಮಕವಾಗಿ ತಯಾರು ಮಾಡಿಕೊಳ್ಳಲಿ. ಈ ಹಿಂದೆಯೂ ರಾಹುಲ್ ಗಾಂಧಿಯವರು ಭಾರತ ಜೋಡೋ ಯಾತ್ರೆ ಮಾಡಿದ್ದರು. ಈಗಲೂ ಹಲವರಿಗೆ ಭಾರತ ಹೆಸರಿನಿಂದ ಅಸ್ಥಿರತೆ ಕಾಡುತ್ತದೆ. ಒಟ್ಟಿನಲ್ಲಿ ಈ ಬಾರಿಯ ಚುನಾವಣೆ ಮೋದಿ ಹಾಗೂ ವಿಪಕ್ಷ ನಾಯಕರ ನಡುವೆ ಆಗಿರುವುದರಿಂದ ಯಾರೂ ಬೇಕಾದರೆ ಜಯಿಸಲಿ. ಆದರೆ ನಮ್ಮ ದೇಶವನ್ನು ಭಾರತ ಎಂದು ಕರೆಯುವಾಗ ಆಗುವ ಸಂತೃಪ್ತಿ ಹಾಗೂ ಖುಷಿ ಬೇರೆ ಹೆಸರಿನಿಂದ ಕರೆದಾಗ ಆಗುವುದಿಲ್ಲ ಎಂದು ಹೇಳಿದ್ದಾರೆ
Leave A Reply