ಮೈಸೂರಿನಿಂದ ಮುರ್ಡೇಶ್ವರಕ್ಕೆ ಹೋಗುವವರಿಗೆ ಸಿಹಿ ಸುದ್ದಿ!
ಬೆಂಗಳೂರಿನಿಂದ ಮೈಸೂರು ಮಾರ್ಗವಾಗಿ ಮಂಗಳೂರಿಗೆ ಬರುತ್ತಿದ್ದ ರೈಲು (ರೈಲು ನಂಬ್ರ 16585/86) ಇನ್ನು ಮುರ್ಡೇಶ್ವರದವರೆಗೆ ಪ್ರತಿನಿತ್ಯ ಸಂಚಾರ ಮಾಡಲಿದೆ. ಪ್ರಸ್ತುತ ಬೆಂಗಳೂರಿನಿಂದ ಕಾರವಾರದವರೆಗೆ ಪಂಚಗಂಗಾ ಎಕ್ಸಪ್ರೆಸ್ ಮಾತ್ರವೇ ಪ್ರತಿದಿನ ಸಂಚಾರ ಮಾಡುತ್ತಿದೆ. ಈ ಸಾಲಿಗೆ ಬೆಂಗಳೂರು – ಮಂಗಳೂರು ಎಕ್ಸಪ್ರೆಸ್ ಕೂಡ ಸೇರಲಿದೆ.
ಮೂರು ವರ್ಷಗಳ ನಂತರ ರೈಲಿನ ಮೂಲಕ ಸಾಂಸ್ಕೃತಿಕ ರಾಜಧಾನಿ ಮೈಸೂರನ್ನು ಕರಾವಳಿ ಕರ್ನಾಟಕಕ್ಕೆ ಮರುಸಂಪರ್ಕಿಸುವ ಕೆಲಸ ನಡೆಯುತ್ತಿದೆ. ಬೆಂಗಳೂರು ರೈಲು ನಿಲ್ದಾಣ ಮತ್ತು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ನಡುವಿನ ಸಮಯದಲ್ಲಿ ಸ್ವಲ್ಪ ಬದಲಾವಣೆಯೊಂದಿಗೆ ರೈಲು ತನ್ನ ನಿಗದಿತ ಮಾರ್ಗದಲ್ಲಿ ಸಂಚರಿಸುವ ನಿರೀಕ್ಷೆ ಇದೆ.
ರೈಲು ಸಂಖ್ಯೆ 16585 ಎಸ್ ಎಂವಿಟಿ ಸ್ಟೇಶನ್ ನಿಂದ ರಾತ್ರಿ 8.15 ಕ್ಕೆ ಹೊರಡುತ್ತದೆ. ರಾತ್ರಿ 11.40 ಕ್ಕೆ ಇದು ಮೈಸೂರು ತಲುಪಲಿದೆ. ಮಂಗಳೂರು ಸೆಂಟ್ರಲ್ ಗೆ ಬೆಳಿಗ್ಗೆ 8.55 ಕ್ಕೆ ತಲುಪಲಿದೆ. ಇದಕ್ಕೂ ಮುನ್ನ ಬೆಳಿಗ್ಗೆ 9.05 ಕ್ಕೆ ತಲುಪುತ್ತಿತ್ತು. ಮಂಗಳೂರು ಸೆಂಟ್ರಲ್ ನಿಂದ ಬೆಳಿಗ್ಗೆ 9.20 ಕ್ಕೆ ಹೊರಡುವ ರೈಲು ಮಧ್ಯಾಹ್ನ 1.20 ಕ್ಕೆ ಮುರ್ಡೇಶ್ವರ ತಲುಪಲಿದೆ.
Leave A Reply