ನಾಯಿ ಕಚ್ಚಿ ತಿಂಗಳ ಬಳಿಕ ಬಾಲಕ ಮೃತ್ಯು!
ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ 14 ವರ್ಷದ ಬಾಲಕನೊಬ್ಬನಿಗೆ ನಾಯಿ ಕಚ್ಚಿತ್ತು. ಅದನ್ನು ಆತ ತನ್ನ ಮನೆಯವರಿಗೆ ಹೇಳಿರಲಿಲ್ಲ. ಕಾಲಿಗೆ ರಕ್ತ ಬರುತ್ತಿದ್ದ ಜಾಗಕ್ಕೆ ತಾಯಿ ಹಳದಿಯನ್ನು ಹಾಕಿ ಹಾಗೆ ಬಿಟ್ಟಿದ್ದರು. ತಿಂಗಳ ಬಳಿಕ ಬಾಲಕನಲ್ಲಿ ರೇಬಿಸ್ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಂಡವು. ಬಾಲಕ ನೀರು ಮತ್ತು ಬೆಳಕನ್ನು ನೋಡಿ ಹೆದರುತ್ತಿದ್ದ.
ಕೊನೆಗೆ ರೋಗ ಕೈ ಮೀರಿದಾಗ ಆಸ್ಪತ್ರೆಗೆ ದಾಖಲಿಸಲು ಪೋಷಕರು ತೀರ್ಮಾನಿಸಿದರು. ಆಸ್ಪತ್ರೆಯ ಸಾಗಿಸುವ ದಾರಿಯಲ್ಲಿ ನೋವಿನಿಂದ ನರಳುತ್ತಾ ಬಾಲಕ ತಂದೆಯ ತೊಡೆಯ ಮೇಲೆ ಪ್ರಾಣ ಬಿಟ್ಟಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಆ ತಂದೆಯ ದು:ಖ ಮತ್ತು ಬಾಲಕನ ನೋವನ್ನು ನೋಡಲು ಸಾಧ್ಯವಾಗುತ್ತಿಲ್ಲ.
ಒಟ್ಟಿನಲ್ಲಿ ಮಕ್ಕಳಿಗೆ ಬೀದಿಬದಿ ನಾಯಿಗಳು ಕಚ್ಚಿದರೆ 24 ಗಂಟೆಯೊಳಗೆ ರೇಬಿಸ್ ಚುಚ್ಚುಮದ್ದನ್ನು ನೀಡಿದರೆ ಮಾತ್ರ ಯಾವುದೇ ಪ್ರಾಣಾಪಾಯದಿಂದ ತಪ್ಪಿಸಬಹುದು. ಅದಕ್ಕಾಗಿ ಮಕ್ಕಳಲ್ಲಿ ಜಾಗೃತಿಯನ್ನು ಮೂಡಿಸಬೇಕು. ನಾಯಿ ಕಚ್ಚಿದಲ್ಲಿ ಅವರು ತಕ್ಷಣ ಮನೆಯವರಿಗೆ ವಿಷಯ ತಿಳಿಸುವಂತೆ ತಿಳಿಸಬೇಕು. ಕೆಲವೊಮ್ಮೆ ಮಕ್ಕಳು ವಿವಿಧ ಕಾರಣಕ್ಕೆ ನಾಯಿ ಕಚ್ಚಿರುವುದನ್ನು ಹೇಳುವುದಿಲ್ಲ. ಹಾಗೆ ಆಗಬಾರದು. ಒಂದಿಷ್ಟು ಪೋಷಕರ ನಿರ್ಲಕ್ಷ್ಯ ಮಕ್ಕಳ ಬಾಳನ್ನು ಕಸಿಯಬಹುದು
Leave A Reply