ಬಿಜೆಪಿ ಮಾಜಿ ಶಾಸಕಿ ಮನೆಯಲ್ಲಿ ಡಿಕೆಶಿ ಕೃಷ್ಣಾಷ್ಟಮಿ!
ಲೋಕಸಭಾ ಚುನಾವಣೆಗೆ ಏಳೆಂಟು ತಿಂಗಳು ಮಾತ್ರ ಬಾಕಿ ಇರುವಂತಹ ಈ ಹೊತ್ತಿನಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಭಾರತೀಯ ಜನತಾ ಪಾರ್ಟಿಯ ಪ್ರಭಾವಿ ಮುಖಂಡರ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ. ಚಿತ್ರದುರ್ಗದ ಹಿರಿಯೂರಿನ ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ಮನೆಯಲ್ಲಿ ಕೃಷ್ಣಾಷ್ಟಮಿಯ ಭರ್ಜರಿ ಹಬ್ಬದೂಟವನ್ನು ಅವರು ಸವಿದರು. ಪ್ರೀತಿಯಿಂದ ಹಬ್ಬಕ್ಕೆ ಕರೆದರು, ಅದಕ್ಕೆ ಬಂದೆ ಎಂದು ಡಿಕೆಶಿಯವರು ಹೇಳಿದರಾದರೂ ಅವರು ಸುಮ್ಮಸುಮ್ಮನೆ ಹಾಗೆ ಹೋಗಿ ಊಟ ಮಾಡಿ ಬರುವುದಿಲ್ಲ ಎನ್ನುವುದು ರಾಜಕೀಯದಲ್ಲಿ ಇರುವವರಿಗೆ ಗೊತ್ತಿರುವ ವಿಷಯ.
ಪೂರ್ಣಿಮಾ ಶ್ರೀನಿವಾಸ್ ಅವರ ಕೆ.ಆರ್.ಪುರಂ ನಿವಾಸಕ್ಕೆ ಭೇಟಿ ಕೊಟ್ಟ ಡಿಕೆಶಿ ಅಲ್ಲಿ ತುಂಬಾ ಹೊತ್ತು ಇದ್ದು, ಮನೆಮಂದಿಯೊಂದಿಗೆ ಫೋಟೋ ಕೂಡ ತೆಗೆದಿದ್ದಾರೆ. ಯಾವುದೇ ಆಪರೇಶನ್ ಇಲ್ಲ, ನಮ್ಮದೇನಿದ್ದರೂ ಕೋ ಆಪರೇಶನ್ ಎಂದು ಡಿಕೆಶಿ ಸಮಜಾಯಿಷಿಕೆ ನೀಡಿದರಾದರೂ ಯಥಾಪ್ರಕಾರ ಡಿಕೆಶಿಯವರ ಸಂಪರ್ಕದಲ್ಲಿರುವ ಎಲ್ಲ ಬಿಜೆಪಿ ಮುಖಂಡರು ಹೇಳುವಂತೆ ಬಿಜೆಪಿ ಬಿಡುವ ಪ್ರಶ್ನೆ ಇಲ್ಲ ಎಂದು ಪೂರ್ಣಿಮಾ ಸುರೇಶ್ ಹೇಳಿದರು. ಹೋಗುವುದಾದರೆ ಕದ್ದು ಮುಚ್ಚಿ ಕಾಂಗ್ರೆಸ್ಸಿಗೆ ಸೇರುವುದಿಲ್ಲ ಎಂದು ಕೂಡ ಹೇಳಲು ಮರೆಯಲಿಲ್ಲ.
Leave A Reply