• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಸನಾತನ ಧರ್ಮ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ!

ಸಂತೋಷ್ ಕುಮಾರ್ ಮುದ್ರಾಡಿ Posted On September 9, 2023
0


0
Shares
  • Share On Facebook
  • Tweet It

ಗೃಹ ಮಂತ್ರಿಗಳಾದ ಪರಮೇಶ್ವರ್ ಅವರು ಬೆಳಿಗ್ಗೆ ಎದ್ದ ಕೂಡಲೇ “ಕರಾಗ್ರೆ ವಸತೇ ಲಕ್ಷ್ಮೀ….” ರಾತ್ರಿ ಮಲಗುವಾಗಲೂ “ರಾಮ ಸ್ಕಂದಂ ಹನುಮಂತಂ…” ಶ್ಲೋಕ ಹೇಳುತ್ತಾರೆ ಎಂದು ಕೇಳುವಾಗ ನಿಜವಾಗಲೂ ತುಂಬಾ ಖುಷಿ ಆಯ್ತು. ಸನಾತನ ಧರ್ಮವನ್ನು ಅಥವಾ ಹಿಂದೂ ಧರ್ಮವನ್ನು ದೂರುವುದು ಈಗ ಎಲ್ಲರಿಗೂ ಒಂದು ದೊಡ್ಡ ಫ್ಯಾಷನ್ ಆಗಿಬಿಟ್ಟಿದೆ. ಅದರ ನಡುವೆ ಪಾಪ ಕೆಲವು ಪಕ್ಷದವರು ಒಳ್ಳೆಯ ಮಾತಾಡಿದರೂ ಅದು ಕೆಟ್ಟ ರೂಪ ಪಡೆದುಕೊಳ್ಳುತ್ತಿದೆ. ಇನ್ನು ಕೆಲವು ಪಕ್ಷದವರು ಸನಾತನ ಧರ್ಮ ಹಿಂದುತ್ವ ನಮ್ಮ ಜನ್ಮ ಸಿದ್ಧ ಹಕ್ಕು ಎನ್ನುವ ರೀತಿಯಲ್ಲಿ ಕೇವಲ ರಾಜಕೀಯದ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಒಟ್ಟಾರೆ ಹಿಂದುತ್ವ ಅಥವಾ ಸನಾತನ ಧರ್ಮದ ತತ್ವ ನಿಷ್ಠೆ ಎನ್ನುವುದು ಪಕ್ಷಕ್ಕೆ ಸೀಮಿತವಾಗದೆ ಪಕ್ಷಾತೀತವಾಗಿ ಕಾಣಬೇಕಾಗುತ್ತದೆ.

ಸನಾತನ ಧರ್ಮದ ವಿಸ್ತಾರ ಹಾಗೂ ಆಳವನ್ನು ಒಮ್ಮೆ ಕಲ್ಪಿಸಿಕೊಳ್ಳಿ.ಸಮುದ್ರ ಯಾವ ಕಾಲಕ್ಕೂ ತನ್ನತ್ತ ಬಲಾತ್ಕಾರದಿಂದ ನೀರನ್ನು ಸೆಳೆಯುವುದಿಲ್ಲ.. ಆದರೆ ಭೂ ಭಾಗದ ಹೆಚ್ಚಿನ ನೀರು ಗಳೆಲ್ಲವೂ ಕೂಡ ಹರಿಯುತ್ತಾ ಕೊನೆಗೆ ಬಂದು ಸೇರುವುದು ಸಮುದ್ರವನ್ನು. ಒಂದು ವಿಧದಲ್ಲಿ ನಮ್ಮ ಸನಾತನ ಧರ್ಮ ಎನ್ನುವುದು ಹೀಗೆ.ಇದು ನಮ್ಮ ಪೂರ್ವಜರು ನಮ್ಮ ಧರ್ಮವನ್ನು ಕಂಡುಕೊಂಡ ಬಗೆ‌.ಇದು ಕೇವಲ ಒಬ್ಬನಿಂದ ಪ್ರವರ್ತಿತವಾಗಿ ಹಾಗೂ ಐದಾರು ಪುಸ್ತಕಗಳಿಗೆ ಸೀಮಿತವಾಗಿರುವ ಧರ್ಮವಲ್ಲ. ಸಾರ್ವಕಾಲಿಕವಾದ ಸತ್ಯವನ್ನು ಯಾರು ಬೇಕಾದರೂ ಇಲ್ಲಿ ಸ್ವತಂತ್ರವಾಗಿ ಹೇಳಬಹುದು. ವೇದ ದಿಂದ ಹಿಡಿದು ಸ್ಮೃತಿ ಪುರಾಣ-ಇತಿಹಾಸಗಳ ತನಕವೂ ನಮ್ಮಲ್ಲಿ ಎಲ್ಲವೂ ಧಾರ್ಮಿಕ ಗ್ರಂಥವೇ ಆಗಿದೆ. ಹಾಗೆಂದು ಎಲ್ಲವನ್ನೂ ಆಚರಿಸುವ ನಿರ್ಬಂಧವಿಲ್ಲ. ಆಚರಿಸಲಿ ಬಿಡಲಿ ಅವರವರಿಗೆ ಅವರವರ ದಾರಿ.ದೇವರಿಲ್ಲ ಎನ್ನುವ ಚಾರ್ವಾಕನು ಕೂಡ ಹಿಂದೂಧರ್ಮೀಯನೇ ಆಗಿದ್ದಾನೆ. ಏಕೆಂದರೆ ಸನಾತನ ಧರ್ಮಕ್ಕೆ ದೇವರ ಅಗತ್ಯ ಕೂಡ ಇಲ್ಲ.

ಈ ಧರ್ಮದಲ್ಲಿರುವ ಹಬ್ಬಗಳೆಲ್ಲವೂ ಕೂಡ ಪ್ರಾಕೃತಿಕವಾಗಿ ಇರುವಂತದ್ದು. ಬಲಾತ್ಕಾರದಿಂದ ಹೇಳಿದ್ದು ಅಥವಾ ಒಂದು ದಿನಕ್ಕೆ ಸೀಮಿತವಾಗಿ ಆಚರಿಸುವ ತಿರುಳಿಲ್ಲದ ಯಾವ ಹಬ್ಬಗಳು ನಮ್ಮಲ್ಲಿಲ್ಲ. ಯುಗಾದಿಯಿಂದ ತೊಡಗುವ ಎಲ್ಲಾ ಹಬ್ಬಗಳು ಕೂಡ ಪ್ರಕೃತಿಯೊಂದಿಗೆ ನಮ್ಮನ್ನು ಮತ್ತಷ್ಟು ಕೂಡಿಸಿಕೊಂಡು ಹೋಗುವಂತಹ ಹಬ್ಬಗಳಾಗಿವೆ. ಆ ಮೂಲಕ ದೇಶವನ್ನು ಒಗ್ಗೂಡಿಸುತ್ತದೆ. ಇನ್ನು ಸಾವಿರಾರು ಜಾತಿಗಳು ಕೂಡ ಧರ್ಮಕ್ಕಿರುವ ಬಲುದೊಡ್ಡ ಪಂಚಾಂಗ. ಇದರ ಹಿಂದಿರುವ ಕಾರಣವಿಷ್ಟೇ.
ತಂದೆಗೆ ಮಗನಾಗಿ ಹುಟ್ಟಿದ ಕಾರಣದಿಂದ ಜಾತಿ ತೀರ್ಮಾನವಾಗುವುದಲ್ಲ. ಆತನ ಬಳಿಗೆ ಯಾವಾಗ ವ್ಯಕ್ತಿತ್ವ ಇದೆ ಎಂದು ಪರಿಗಣಿಸಿ ಅನಂತರ ಆತನ ಜಾತಿ ತೀರ್ಮಾನವಾಗುತ್ತದೆ. ತಲೆಗೆ ಕೆಲಸ ಕೊಡುವವನಾದರೂ ಅರ್ಥಾತ್ ಬುದ್ಧಿವಂತನಾದರೆ ಬ್ರಾಹ್ಮಣ, ಆಯುಧ ಹಿಡಿದು ಪ್ರಾಣರಕ್ಷಣೆಗೆ ನಿಂತರೆ ಆತ ಕ್ಷತ್ರಿಯ, ಮತ್ತೊಬ್ಬರ ಜೀವನೋಪಾಯಕ್ಕಾಗಿ ದವಸಧಾನ್ಯಗಳನ್ನು ವಿತರಿಸುವವನಾದರೆ ಆತ ವೈಶ್ಯ, ಹಾಗು ತನ್ನ ಜೀವನವನ್ನು ಮತ್ತೊಬ್ಬರ ಸೇವೆಗಾಗಿ ಮುಡಿಪಾಗಿಟ್ಟವ ಶೂದ್ರ. ಇದೊಂದು ಜಾತಿ ವ್ಯವಸ್ಥೆ ಎಂದವ ಪರಮ ಮೂರ್ಖ. ಇದು ಸಮಾಜದ ಸುವ್ಯವಸ್ಥೆ ಇರುವ ವರ್ಣವ್ಯವಸ್ಥೆ. ಇದನ್ನು ಕೇವಲ ಹಿಂದೂಗಳಲ್ಲಿ ಮಾತ್ರ ಕಲ್ಪಿಸಿಕೊಳ್ಳುವುದು ಕೂಡ ಅಷ್ಟೇ ಬಾಲಿಷತನವಾಗುತ್ತದೆ. ಮನೆಯಿಂದ ಹಿಡಿದು ಮಂದಿರದ ತನಕ ಊರಿಂದ ಹಿಡಿದು ಆಸ್ಪತ್ರೆಯ ತನಕವೂ ಕೂಡ ಈ ವ್ಯವಸ್ಥೆಯೇ ಎದ್ದು ಕಾಣುವುದು. ಪರಸ್ಪರ ವಿರೋಧ ಎನ್ನುವುದು ಇಲ್ಲಿ ಅರ್ಥವಿಲ್ಲದ ಮೂರ್ಖತನವಷ್ಟೇ. ಇಂತಹ ಭವ್ಯ ಕಲ್ಪನೆಯನ್ನು ಹೊತ್ತುಕೊಂಡು ಸಾಗುತ್ತಿರುವ ಹಿಂದೂಧರ್ಮ ಯಾವ ಕಾಲಕ್ಕೂ ನಾಶವಿಲ್ಲದ್ದು.

ಇಷ್ಟೇ ಅಲ್ಲದೆ ಇದರೊಳಗಿರುವ ಒಂದೊಂದು ಜಾತಿಗಳು ಕೂಡ ನಮಗಿರುವ ಭದ್ರ ಬೇಲಿ. ಎಂತಹ ಜಾತ್ಯತೀತನಾದವನು ಕೂಡ ಮಕ್ಕಳ ಮದುವೆಯ ವಿಚಾರದಲ್ಲಿ ಜಾತೀಯತೆ ಎದ್ದು ಕಾಣುತ್ತದೆ. ನಾವು ಈ ವಿಚಾರದಲ್ಲಿ ಎಷ್ಟು ಸಂಕುಚಿತರಾಗುತ್ತೇವೆಯೋ ಅಷ್ಟು ಮಟ್ಟಿಗೆ ಮುಂದಿನ ಪರಂಪರೆಗಳು ಉಳಿಯುತ್ತದೆ. ಜಾತಿ ಇಲ್ಲ ಎಂದು ಹೇಳಿದರೆ ಮತವು ಇಲ್ಲದಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ನೂರಾರು ಜಾತಿಗಳನ್ನು ಒಪ್ಪಿಕೊಂಡವ ಮತದ ಯಾವ ಅಭಿಮಾನವನ್ನು ಕೂಡ ಹಿಡಿದಿಟ್ಟುಕೊಳ್ಳುವುದಿಲ್ಲ.

ಪರಕೀಯರ ಅದೆಷ್ಟು ಆಕ್ರಮಣಗಳನ್ನು ಕಂಡರೂ ಕೂಡ, ಒಂದು ಕಾಲದಲ್ಲಿ ಭಾರತ ಪೂರ್ತಿಯಾಗಿ ಮೊಘಲರ ಹಾಗೂ ಕ್ರೈಸ್ತರ ಅಧೀನದಲ್ಲಿದ್ದರು ಕೂಡ ಗುಪ್ತಗಾಮಿನಿಯಾಗಿ ಹಿಂದೂ ಧರ್ಮ ಹರಿಯುತ್ತಲೇ ಬರುತ್ತಿದೆ. ಆಶ್ಚರ್ಯದ ಸಂಗತಿಯೆಂದರೆ ಯೋಗದ ಮೂಲಕವಾಗಿ ಸೂರ್ಯೋದಯವನ್ನು ಓಂಕಾರದಿಂದ ಕಾಣುವ ಬಗೆಗೆ ಸುಮಾರು ಇನ್ನೂರು ದೇಶಗಳು ಮನಸಾರೆ ಒಪ್ಪಿಕೊಂಡಿವೆ. ಹಿಂದೂ ಧರ್ಮದ ಪ್ರೇಮ ಪೂರಿತವಾದ ಪ್ರಭುಪಾದರ ಇಸ್ಕಾನ್ ಸಂಸ್ಥೆ ಪ್ರಪಂಚವನ್ನೇ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ. ಜಗತ್ತು ತಲೆಗೆ ಅರಿವಿಲ್ಲದೆಯೇ ಭಾರತಕ್ಕೆ ತಲೆಬಾಗುತ್ತದೆ. ಯಾವುದೇ ಮತ ಆಮೀಷಗಳಿಗೆ ಒಳಗಾಗದೆ ತನ್ನತ್ತ ಸೆಳೆಯುತ್ತಿರುವ ಏಕೈಕ ಸಿದ್ದಾಂತ ಸನಾತನ ಧರ್ಮ. ಒಂದು ವೇಳೆ ಬೇರೆ ಮತದವರಂತೆ ತನ್ನ ವಿಸ್ತಾರವನ್ನೇ ಉದ್ದೇಶವಾಗಿಸಿಕೊಂಡಿದ್ದರೆ ಇವತ್ತು ಪ್ರಪಂಚದಲ್ಲಿ ಕೇವಲ ಸನಾತನ ಧರ್ಮ ಮಾತ್ರ ಇರುತ್ತಿತ್ತು. ಆದರೆ ಅಂತಹ ಯಾವುದೇ ಸ್ವಾರ್ಥ ಚಿಂತನೆ ಇಲ್ಲದ ಧರ್ಮವಾದ್ದರಿಂದ ಇಲ್ಲಿ ಹುಟ್ಟಿದವರು ಈ ರೀತಿ ಬಾಯಿಗೆ ಬಂದ ಹಾಗೆ ಮಾತನಾಡುವುದು.

ಅಮೆರಿಕದಂತಹ ದೊಡ್ಡ ದೊಡ್ಡ ದೇಶಗಳು ತಮ್ಮ ಸಂಸತ್ತಿನಲ್ಲಿ ಈ ನೆಲದ ವೇದಮಂತ್ರಗಳನ್ನು ಮೊಳಗಿಸುತ್ತಿವೆ. ದುಬಾಯಿ ಕತಾರ್ ನಂತಹ ಮುಸಲ್ಮಾನ ದೇಶಗಳಲ್ಲಿ ನಮ್ಮ ಭವ್ಯ ಮಂದಿರಗಳು ತಲೆಯೆತ್ತುತ್ತಿವೆ. ಹೇಗೆ ಪ್ರಪಂಚದಲ್ಲಿ ಗಣಿತ, ವಿಜ್ಞಾನ, ಸಮಾಜ ಎನ್ನುವ ಶಾಸ್ತ್ರಗಳು ಒಬ್ಬನಿಂದ ಹುಟ್ಟದೆ ಕಾಲಕಾಲಕ್ಕೆ ಬಂದ ಮಹನೀಯರಿಂದ ಬೆಳೆಯುತ್ತ ಹೋಗಿದೆಯೋ ಅದೇ ರೀತಿಯಲ್ಲಿ ಹಿಂದೂ ಧರ್ಮ ಎನ್ನುವುದು ಹುಟ್ಟದೆ ಬೆಳೆಯುತ್ತಿರುವ ಅಚಿಂತ್ಯ ಜೀವನಪದ್ಧತಿ. ನಾವು ನಮ್ಮ ಮಕ್ಕಳಿಗೆ ಮರುಗಿದಷ್ಟೇ ಹತ್ತಿರದ ಮನೆಯ ಮಕ್ಕಳಿಗೂ ಮರುಗುತ್ತೇವೆ. ರಾಮನ ಆದರ್ಶವಾದ ಭ್ರಾತೃಪ್ರೇಮ, ಕೃಷ್ಣನ ವಿಶ್ವಪ್ರೇಮ, ವಿವೇಕಾನಂದರ ಧೀರೋದಾತ್ತ ನಿಲುವು, ಇತ್ಯಾದಿ ಮಹನೀಯರ ಆದರ್ಶವನ್ನು ಗುರಿಯಾಗಿಸಿಕೊಂಡು ಬೆಳೆಯುತ್ತಿದೆ.

ಇದರ ಈ ಗುಣ ಇದರ ಹಿರಿಮೆಗೆ ಗರಿಮೆ ತಂದುಕೊಟ್ಟದ್ದು. ಇದನ್ನು ಅರ್ಥೈಸಿಕೊಳ್ಳುವಲ್ಲಿ ಇಲ್ಲಿದ್ದವರೇ ಸೋತಿದ್ದಾರೆಂದರೆ ಬೇರೆ ದುರಂತ ಇಲ್ಲ. ಈ ಸನಾತನ ಧರ್ಮದಿಂದ ಕವಲೊಡೆದು ಅನೇಕ ಧರ್ಮಗಳು ಬಂದಿದೆ. ಅದಕ್ಕೆ ಅವಕಾಶವನ್ನು ಪೂರ್ವಜರಾದ ಋಷಿಮುನಿಗಳು ಕೊಟ್ಟಿದ್ದಾರೆ ಎನ್ನುವುದೇ ಅವರ ದೋಷ ಎನ್ನುವ ರೀತಿಯಲ್ಲಿ ಕಂಡುಕೊಂಡರೆ ಅದು ಯಾರ ತಪ್ಪು ಎಂದು ನಾವು ತೀರ್ಮಾನಿಸಿಕೊಳ್ಳಬೇಕು. ಇಂದಿಗೂ ಎಂದಿಗೂ ಸರ್ವ ಸಮನ್ವತೆಯಿಂದ ಬದುಕುವ, ಬದುಕ ಕೊಡುವ ಈ ಸನಾತನ ಧರ್ಮದಲ್ಲಿ ಅಥವಾ ಹಿಂದೂ ಧರ್ಮದಲ್ಲಿ ಹುಟ್ಟಿದ್ದು ನಮ್ಮ ಭಾಗ್ಯ ಎಂದು ನಾವು ಕಂಡುಕೊಳ್ಳದಿದ್ದರೆ ನಮ್ಮಷ್ಟು ಮೂರ್ಖರು ಯಾರು ಇಲ್ಲ.

0
Shares
  • Share On Facebook
  • Tweet It




Trending Now
ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
ಸಂತೋಷ್ ಕುಮಾರ್ ಮುದ್ರಾಡಿ July 11, 2025
ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
ಸಂತೋಷ್ ಕುಮಾರ್ ಮುದ್ರಾಡಿ July 11, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
    • ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕದ್ರಿ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ತಸ್ಲೀಮ್ …!
    • ಬೀದಿನಾಯಿಗಳಿಗೆ ನಿತ್ಯ ಚಿಕನ್, ಮೊಟ್ಟೆ ನೀಡಲು ಬಿಬಿಎಂಪಿ ನಿರ್ಧಾರ!
    • ಜನಸಾಮಾನ್ಯರ ಕೈಗೆಟಕುತ್ತಿಲ್ಲ ತೆಂಗಿನಕಾಯಿ ದರ... ಪುತ್ತೂರಿನಲ್ಲಿ ಹೆಚ್ಚಿದ ಕಳವು!
    • ವಿಎಚ್ ಪಿ ಶರಣ್, ನವೀನ್ ಗೆ ರಿಲೀಫ್: ಅರುಣ್ ಶ್ಯಾಮ್ ವಾದ
    • ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
    • ಉದಯಪುರ್ ಫೈಲ್ಸ್ ಸಿನೆಮಾಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಕಾರ!
    • ಚರ್ಚಿನಲ್ಲಿ ಪ್ರಾರ್ಥನೆ: ಟಿಟಿಡಿ ಅಧಿಕಾರಿ ಸಸ್ಪೆಂಡ್!
  • Popular Posts

    • 1
      ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • 2
      ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • 3
      ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
    • 4
      ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕದ್ರಿ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ತಸ್ಲೀಮ್ …!
    • 5
      ಬೀದಿನಾಯಿಗಳಿಗೆ ನಿತ್ಯ ಚಿಕನ್, ಮೊಟ್ಟೆ ನೀಡಲು ಬಿಬಿಎಂಪಿ ನಿರ್ಧಾರ!

  • Privacy Policy
  • Contact
© Tulunadu Infomedia.

Press enter/return to begin your search