ಫೋನ್ ನಲ್ಲಿ ಖಾಸಗಿ ಪೋರ್ನ್ ವೀಕ್ಷಣೆ ಅಪರಾಧವಲ್ಲ-ಕೇರಳ ಹೈಕೋರ್ಟ್

ರಸ್ತೆಬದಿಯಲ್ಲಿ ವ್ಯಕ್ತಿಯೊಬ್ಬ ತನ್ನ ಮೊಬೈಲಿನಲ್ಲಿ ನೀಲಿ ಚಿತ್ರಗಳ ವೀಕ್ಷಣೆ ಮಾಡುತ್ತಿದ್ದಾಗ, ಬಂಧಿಸಿದ ಪೊಲೀಸರಿಗೆ ಕೇರಳ ಹೈಕೋರ್ಟ್ ನೀಡಿದ ತೀರ್ಪು ಹಿನ್ನಲೆ ಉಂಟುಮಾಡಿದೆ. ಕಳೆದ ವಾರ ತೀರ್ಪು ನೀಡಿದ ನ್ಯಾಯಾಮೂರ್ತಿ ಪಿ.ವಿ.ಕುಂಇಕೃಷ್ಣನ್ ಅವರು ಯಾವುದೇ ವ್ಯಕ್ತಿ ಯಾರೊಬ್ಬರ ಫೋನ್ ಗಳಿಗೂ ಅಶ್ಲೀಲ ಫೋಟೋಗಳನ್ನು ಅಥವಾ ವಿಡಿಯೋಗಳನ್ನು ವಿತರಿಸದೇ, ಸಾರ್ವಜನಿಕವಾಗಿ ಪ್ರದರ್ಶನ ಮಾಡದೇ, ತನ್ನ ಮೊಬೈಲ್ ನಲ್ಲಿಯೇ ಖಾಸಗಿಯಾಗಿ ವೀಕ್ಷಣೆ ಮಾಡುವುದು ಐಪಿಸಿಯ ಅಡಿಯಲ್ಲಿ ಅಶ್ಲೀಲತೆಯ ಅಪರಾಧಕ್ಕೆ ಕಾರಣವಾಗುವುದಿಲ್ಲ ಎಂದು ತೀರ್ಪು ನೀಡಿದ್ದಾರೆ. ಅಂತಹ ಕೃತ್ಯ ವ್ಯಕ್ತಿಯ ಖಾಸಗಿ ಆಯ್ಕೆಯಾಗಿದ್ದು, ಪೊಲೀಸರು ಅವರ ಗೌಪ್ಯತೆಗೆ ಒಳನುಗ್ಗುವಂತಿಲ್ಲ ಎಂದು ತಿಳಿಸಿದೆ. ಇನ್ನು ವ್ಯಕ್ತಿಯೊಬ್ಬ ಅಶ್ಲೀಲ ವಿಡಿಯೋ ಅಥವಾ ಫೋಟೋಗಳನ್ನು ಪ್ರಸಾರ ಮಾಡಿದರೆ, ಸಾರ್ವಜನಿಕವಾಗಿ ಹಂಚಲು ಪ್ರಯತ್ನ ಮಾಡಿದ್ದರೆ ಅದು ಸೆಕ್ಷನ್ 292 ಐಪಿಸಿ ಅಡಿಯಲ್ಲಿ ಅಪರಾಧ ಅನಿಸಿಕೊಳ್ಳುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.
ಹೀಗಿದ್ದಾಗಲೂ ಅಪ್ರಾಪ್ತ ಮಕ್ಕಳಿಗೆ ಮೊಬೈಲ್ ಫೋನ್ ನೀಡುವ ಬಗ್ಗೆ ನ್ಯಾಯಾಧೀಶರು ಪೋಷಕರಿಗೆ ಕಿವಿಮಾತು ಹೇಳಿದ್ದಾರೆ. ಇಂಟರ್ ನೆಟ್ ಹೊಂದಿದ ಮೊಬೈಲ್ ಫೋನ್ ಗಳಲ್ಲಿ ಮಕ್ಕಳು ಸುಲಭವಾಗಿ ಫೋರ್ನ್ ಸೈಟ್ ಗಳಿಗೆ ಬ್ರೋಸ್ ಮಾಡುತ್ತಾರೆ. ಇದರಿಂದ ಮಕ್ಕಳ ಮನಸ್ಸಿನಲ್ಲಿ ಯಾವ ಪರಿಣಾಮ ಬೀಳುತ್ತದೆ ಎನ್ನುವುದನ್ನು ಪೋಷಕರು ಅರ್ಥ ಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ.