ಸೌದಿಗೆ ಇಂಧನ ಶಕ್ತಿ ತುಂಬಲಿರುವ ಭಾರತ!
ಇಂತಹ ದಿನ ಯಾವತ್ತಾದರೂ ಬರಬಹುದು ಎಂದು ನೀವು ಊಹಿಸಿದ್ದಿರಾ? ಬಹುತೇಕ ಜನ ಇಲ್ಲ ಎಂದೇ ಹೇಳಬಹುದು. ಸೌದಿ ಅರೇಬಿಯಾದಿಂದ ನಾವು ತೈಲವನ್ನು ಎಷ್ಟೋ ವರ್ಷಗಳಿಂದ ಆಮದು ಮಾಡಿಕೊಳ್ಳುತ್ತಾ ಇದ್ದೇವೆ. ಒಂದು ದೇಶ ಯಾವತ್ತೂ ಬೇರೆ ದೇಶದಿಂದ ಏನಾದರೂ ಆಮದು ಮಾಡಿಕೊಳ್ಳುತ್ತಾ ಇದ್ದರೆ ಎಷ್ಟೆಂದರೂ ಆ ದೇಶದ ಎದುರು ಕುಬ್ಜವಾಗಿಯೇ ಇರಬೇಕಾಗುತ್ತದೆ. ಇಲ್ಲಿಯ ತನಕ ಸೌದಿ ಅರೇಬಿಯಾ ಭಾರತದ ಎದುರು ಒಂದು ಮುಷ್ಠಿ ಹೆಚ್ಚಿನ ಪ್ರಾಬಲ್ಯವನ್ನು ತೈಲ ರಫ್ತಿನ ವಿಷಯದಲ್ಲಿ ಹೊಂದಿತ್ತು. ಆದರೆ ಇನ್ನು ಮುಂದೆ ಭಾರತ ಸೌದಿ ಅರೇಬಿಯಾದ ಸಂಬಂಧ ಬೇರೆಯದ್ದೇ ಆಯಾಮವನ್ನು ಪಡೆದುಕೊಳ್ಳಲಿದೆ. ಎರಡೂ ದೇಶಗಳ ನಡುವೆ ಕೊಡು ಕೊಳ್ಳುವಿಕೆ ವ್ಯವಹಾರ ನಡೆಯಲಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಹಾಗೂ ಸೌದಿ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ದ್ವಿಪಕ್ಷೀಯ ವಾಣಿಜ್ಯ ವ್ಯವಹಾರದ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಮೂಲಕ ಮುಂದಿನ ದಿನಗಳಲ್ಲಿ ಭಾರತ – ಮಧ್ಯಪ್ರಾಚ್ಯ ರಾಷ್ಟ್ರಗಳು – ಈರೋಪ್ ನಡುವೆ ಆರ್ಥಿಕ ಕಾರಿಡಾರ್ ರಚನೆಯಾಗಲಿದೆ. ಈ ಒಡಂಬಡಿಕೆಯಲ್ಲಿ ಜಾಗತಿಕ ಇಂಧನ ಪೂರೈಕೆಯನ್ನು ಸೌದಿ ಅರೇಬಿಯಾಕ್ಕೆ ಭಾರತ ಮಾಡಲಿದೆ. ನವೀಕರಿಸಬಹುದಾದ ಇಂಧನವನ್ನು ಪೂರೈಸಲಿರುವ ಭಾರತ ಹಸಿರು ಜಲಜನಕವನ್ನು ಪ್ರತಿ ವರ್ಷ 5 ಮಿಲಿಯನ್ ಟನ್ ನಷ್ಟು ಪೂರೈಕೆ ಮಾಡುವ ಗುರಿ ಇಟ್ಟುಕೊಂಡಿದೆ. ಸೌದಿಗೆ ಮಾತ್ರವಲ್ಲ, ಸಿಂಗಾಪುರ ಕೂಡ ಇಂಧನ ಪೂರೈಕೆ ವಿಷಯದಲ್ಲಿ ಭಾರತದೊಂದಿಗೆ ಒಪ್ಪಂದ ಮಾಡುವ ಆಸಕ್ತಿಯನ್ನು ತೋರಿಸಿದ್ದು, ನವೀಕರಿಸಬಹುದಾದ ಇಂಧನವನ್ನು ಭಾರತದಿಂದ ಆಮದು ಮಾಡಿಕೊಳ್ಳಲಿದೆ. ಅಂಡಮಾನ್ ಮತ್ತು ನಿಕೋಬರ್ ದ್ವೀಪದ ಅಡಿಯಲ್ಲಿ ಕೇಬಲ್ ಮೂಲಕ ಈ ಪೂರೈಕೆ ನಡೆಯಲಿದೆ.
ಇದು ಸದ್ಯಕ್ಕೆ ಆಗುವ ಪ್ರಕ್ರಿಯೆ ಅಲ್ಲ, ಇದಕ್ಕಾಗಿ ವರುಷಗಳು ತಗಲುತ್ತವೆ ಎಂದು ಮೋದಿ ವಿರೋಧಿಗಳು ಹೇಳಬಹುದು. ಆದರೆ ವಿಷಯ ಏನೆಂದರೆ ಈ ಕುರಿತು ಈಗಾಗಲೇ ಕೆಲಸ ಆರಂಭವಾಗಿದೆ. ಇದು ಬಾಹ್ಯ ಪ್ರಪಂಚಕ್ಕೆ ಈಗ ಪ್ರಚಾರವಾಗುತ್ತಿದೆಯಾದರೂ ಇದರ ಮೊದಲೇ ಕಾಮಗಾರಿಗಳು ಆರಂಭವಾಗಿದೆ.
Leave A Reply