ಈ ಬಾರಿ ಮಹಿಷ ದಸರಾ ಯಾಕೆ ನಡೆಯಬೇಕು!
ಈ Research Paper ಜನಸ್ನೇಹಿ ವೀರಪ್ಪನ ವಂಶದ ಮೂಲ ಪುರುಷ, ಮಹಿಷ ಮಂಡಲದ ಆದಿ ದೊರೆ ಮಹಿಷಾಸುರ ಮಹಾರಾಜರಿಗೆ ಅರ್ಪಣೆ…..
ಭಾರತದಲ್ಲಿ ಮೌರ್ಯ ಸಾಮ್ರಾಜ್ಯ ಎಂಬುದೊಂದು ಸಾಮ್ರಾಜ್ಯ ಇತ್ತು……. ಅದರ ಪ್ರಸಿದ್ಧ ದೊರೆ ಅಶೋಕ…. ಅವನು ಕಳಿಂಗ ಯುದ್ಧ ದ ನಂತರ ಆ ಯುದ್ಧದಲ್ಲಿ ಆದ ರಕ್ತಪಾತದಿಂದ ಮನನೊಂದು ಬೌದ್ಧ ಧರ್ಮ ಸ್ವೀಕರಿಸಿದನು……ಅನಂತರ ಬೌದ್ದ ಧರ್ಮ ಪ್ರಚಾರಕ್ಕಾಗಿ ಅನೇಕರನ್ನು ಅನೇಕ ಪ್ರದೇಶಗಳಿಗೆ ಕಳಿಸಿದನು.
ಆ ರೀತಿ ದಕ್ಷಿಣ ಭಾರತಕ್ಕೆ ಬೌದ್ಧ ದರ್ಮದ ಪ್ರಚಾರಕ್ಕಾಗಿ ಬಂದವನು ಮಹಾದೇವನೆಂಬ ಬೌದ್ಧ ಬಿಕ್ಕು…..
ಇಲ್ಲಿಗೆ ಬಂದ ನಂತರ ಇಲ್ಲಿ ಆರ್ಯರಿಂದ ಈ ದೇಶದ ಮೂಲ ನಿವಾಸಿ ದ್ರಾವಿಡರ ಮೇಲೆ ಆಗುತ್ತಿದ್ದ ದೌರ್ಜನ್ಯಗಳನ್ನು ನೋಡಿ ಮಹಾದೇವನ ಮನಸ್ಸು ಕರಗುತ್ತದೆ… ಹಾಗಾಗಿ ಅವನು ಬುದ್ಧದೇವನಲ್ಲಿ ಈ ಜನರ ಕಷ್ಟ ಪರಿಹರಿಸುವಂತೆ ಪ್ರಾರ್ಥಿಸುತ್ತಾನೆ…
ಆಗ ಬುದ್ಧ ತನ್ನ ತನ್ನ ಧ್ಯಾನದ ಶಕ್ತಿಯನ್ನೆಲ್ಲ ಬಳಸಿ ಮಹಾದೇವನನ್ನು ಕೋಣದಂತೆ ಮಾಡುತ್ತಾನೆ… ಆಗ ಮಹಾದೇವನಿಗೆ ದೊಡ್ಡ ದೊಡ್ಡ ಕೊಂಬುಗಳು ಬರುತ್ತವೆ ಮಹಾದೇವ ಹಾಗೆ ಮಹಿಷ ಆಗುತ್ತಾನೆ… ಮಹಿಷನಾದ ಮಹಾದೇವ ಆ ಕೊಂಬುಗಳನ್ನೇ ಬಳಸಿ ತಿವಿದು ತಿವಿದು, ಗುದ್ದಿ ಗುದ್ದಿ ಆರ್ಯರನ್ನು ಆ ಪ್ರದೇಶದಿಂದ ಓಡಿಸಿ ಮೂಳೆ ನಿವಾಸಿಗಳಿಗೆ ಆ ಪ್ರದೇಶವನ್ನು ಬಿಡಿಸಿ ಕೊಡುತ್ತಾನೆ…. ಆಗ ಅಲ್ಲಿನ ಜನರೆಲ್ಲ ಸೇರಿ ಮಹಿಷನನ್ನು ಕುರಿತು ಅವನನ್ನೇ ಆ ಪ್ರದೇಶದ ಆಡಳಿತ ನೋಡಿಕೊಳ್ಳುವಂತೆ ಕೇಳಿಕೊಳ್ಳುತ್ತಾರೆ….. ಅದಕ್ಕೆ ಒಪ್ಪಿದ ಮಹಿಷ ಆ ಪ್ರದೇಶದ ರಾಜ ಆಗುತ್ತಾನೆ….. ಒಳ್ಳೆಯ ಆಡಳಿತ ನಡೆಸುತ್ತಾನೆ… ಅಪಾರ ಜನಮನ್ನಣೆ ಗಳಿಸುತ್ತಾನೆ….
ಅಷ್ಟು ಹೊತ್ತಿಗೆ ಮಹಿಷನ ಭಯದಿಂದಾಗಿ ಆ ಪ್ರದೇಶವನ್ನು ಬಿಟ್ಟು ಹೋಗಿದ್ದ ಆರ್ಯ ಬ್ರಾಹ್ಮಣರು ಮತ್ತೆ ಆ ಪ್ರದೇಶಕ್ಕೆ ಬಂದು ಮಹಿಷನನ್ನು ಕೊಲೆ ಮಾಡುತ್ತಾರೆ…..
ಮಹಿಷನಂತಹ ಮಹಾ ಬಲಶಾಲಿ ಸುರಕ್ಷತೆಯ ದೃಷ್ಟಿಯಿಂದ ಒಂದು ಬೆಟ್ಟದ ಮೇಲೆ ಅರಮನೆಯನ್ನು ನಿರ್ಮಿಸಿಕೊಂಡು ಅಲ್ಲಿಂದ ಆಡಳಿತ ನಡೆಸುತ್ತಿದ್ದ…. ಮಹಿಷನಂತಹ ಬಲಶಾಲಿಯ ಅರಮನೆ ಆ ಬೆಟ್ಟದಲ್ಲಿ ಇದ್ದಿದ್ದರಿಂದ ಆ ಬೆಟ್ಟವನ್ನು ಮಹಾಬಲಾದ್ರಿ ಬೆಟ್ಟ ಅನ್ನಲಾಗುತ್ತಿತ್ತು….. ಮಹಿಷನನ್ನು ಕೊಂದ ನಂತರ ಅಲ್ಲಿಗೆ ಬಂದ ಆರ್ಯ ಬ್ರಾಹ್ಮಣರು ಮಹಿಷನ ಅರಮನೆಯಲ್ಲೇ ಒಂದು ಹೆಣ್ಣಿನ ವಿಗ್ರಹ ಸ್ಥಾಪಿಸಿ ಆ ವಿಗ್ರಹಕ್ಕೆ ಚಾಮುಂಡಿ ಎಂದು ಹೆಸರಿಟ್ಟು ಆ ಚಾಮುಂಡಿಯೇ ಮಹಿಷನನ್ನು ಕೊಂದಳು ಎಂದು ಪ್ರಚಾರ ಮಾಡಿದರು…..
ಮಹಿಷನನ್ನು ಕ್ರೂರಿಯಂತೆ ಚಿತ್ರಿಸಿ ಅವನ ಅರಮನೆಯ ಹೊರಗೆ ಆ ಪ್ರತಿಮೆ ಸ್ಥಾಪಿಸಲಾಯಿತು… ಹಾಗೆ ಮಹಿಷನ ಅರಮನೆ ಚಾಮುಂಡಿ ದೇವಾಲಯ ಆಯಿತು.
ಮಹಿಷನ ಜನಪರ ಆಡಳಿತ ಮೆಚ್ಚಿಕೊಂಡ ಜನ ಅವನು ಆಳಿದ ಪ್ರದೇಶವನ್ನು ಮಹಿಷ ಮಂಡಲ, ಮಹಿಷೂರು ಅಂತ ಕರೆಯಲು ಶುರು ಮಾಡಿದರು…..
ಮಹಿಷನ ಕೊಲೆ ಆದ ನಂತರ ಮಹಿಷನ ವಂಶಸ್ಥರು ಈ ಮನುವಾದಿ ಆರ್ಯ ಬ್ರಾಹ್ಮಣರ ಕುತಂತ್ರಕ್ಕೆ ಹೆದರಿ ಅವನ ರಾಜ್ಯದಿಂದ ದೂರ ಬಂದರು…..
ಚಾಮರಾಜನಗರ ಮತ್ತು ತಮಿಳುನಾಡಿನ ಗಡಿಗೆ ಬಂದು ಅಲ್ಲಿ ಸಾವಿರಾರು ವರ್ಷಗಳ ವರೆಗೆ ಸಾಮಾನ್ಯರಂತೆ ಜೀವನ ಮಾಡಿದರು.
ಆ ವಂಶದಲ್ಲಿ ಹುಟ್ಟಿದವನೇ ವೀರನಾದ ವೀರಪ್ಪ…..
ವೀರಪ್ಪನ ತಂದೆತಾಯಿ ವೀರಪ್ಪನ ಶೌರ್ಯ ಗುರುತಿಸಿ ಅವನಿಗೆ ವೀರಪ್ಪ ಅಂತಲೇ ಹೆಸರಿಟ್ಟರು.
ವೀರಪ್ಪ ಇದ್ದ ಊರಿನ ಎಲ್ಲರೂ ಕೃಷಿಯನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದರು….. ಆ ಊರು ಕಾಡಿನ ಅಂಚಿನಲ್ಲಿತ್ತು…ಹಾಗಾಗಿ ಆ ಊರಿನವರು ಬೆಳೆದ ಬೆಳೆಯನ್ನು ಕಾಡಿನ ಪ್ರಾಣಿಗಳು ತಿನ್ನುತ್ತಿದ್ದವು…..
ಆಗ ಊರಿನವರೆಲ್ಲಾ ಬಂದು ವೀರಪ್ಪನಿಗೆ ತಮ್ಮ ಬೆಳೆಗೆ ಕಾಡು ಪ್ರಾಣಿಗಳಿಂದ ರಕ್ಷಣೆ ನೀಡುವಂತೆ ಕೇಳಿಕೊಂಡರು… ಹಾಗಾಗಿ ವೀರಪ್ಪನಿಗೆ ರೈತರ ಬೆಳೆಗೆ ರಕ್ಷಣೆ ನೀಡುವುದೇ ಕೆಲಸವಾಯಿತು.
ಹೀಗಾಗಿ ಅವನು ಬೆಳೆ ತಿನ್ನಲು ಬಂದ ಪ್ರಾಣಿಗಳನ್ನು ಕೊಲ್ಲಲು ಶುರು ಮಾಡಿದನು……
ಒಂದು ದಿನ ವೀರಪ್ಪ ಒಂದು ಆನೆ ತನ್ನ ದಂತಗಳ ಕಾರಣಕ್ಕಾಗಿ ಆಹಾರ ತಿನ್ನುವುದಕ್ಕೆ ಆಗದೆ ತೊಂದರೆ ಅನುಭವಿಸುತ್ತಿರುವುದನ್ನು ಗಮನಿಸಿದನು.. ಆಗ ಆ ಆನೆಗೆ ಆಹಾರ ತಿನ್ನುವುದಕ್ಕೆ ಸಹಾಯ ಮಾಡಬೇಕೆಂದು ನಿರ್ಧರಿಸಿದನು…. ದಂತ ಇದ್ದರೆ ತಾನೆ ಆನೆ ಆಹಾರ ತಿನ್ನಲಾಗದೆ ಒದ್ದಾಡುವುದು ಹೀಗಾಗಿ ದಂತವನ್ನೇ ತೆಗೆದುಬಿಡೋಣವೆಂದು ಯೋಚಿಸಿ ಕರುಣಾಮಯಿಯಾದ ವೀರಪ್ಪನು ಆ ಆನೆಯ ಎರಡೂ ದಂತಗಳನ್ನು ಕಿತ್ತನು…
ಕಾಡಿನಲ್ಲಿರುವ ಯಾವ ಆನೆಗಳಿಗೂ ದಂತದ ಕಾರಣಕ್ಕಾಗಿ ಅಹಾರ ತಿನ್ನಲಾಗದ ಪರಿಸ್ಥಿತಿ ಬರಬಾರದೆಂದು ಇದೇ ವೀರಪ್ಪನು ಎಲ್ಲ ಆನೆಗಳಿಂದಲೂ ದಂತ ಕಿತ್ತನು….
ಕಾಡಿನಲ್ಲಿದ್ದ ಆನೆಯೊಂದು ಗಂಧದ ಮರದಿಂದ ಬರುತ್ತಿದ್ದ ವಾಸನೆ ತಡೆಯಲಾರದೆ ಸತ್ತುಹೋಯಿತು.
ಹೀಗಾಗಿ ಆನೆಗಳ ಬದುಕಿಗೆ ತೊಂದರೆ ಆಗಬಾರದೆಂಬ ಕಾರಣಕ್ಕೆ ವೀರಪ್ಪನು ಆ ಇಡೀ ಕಾಡನ್ನು ಗಂಧದ ಮರದಿಂದ ಮುಕ್ತ ಮಾಡಿದನು.
ಊರಿನವರೊಬ್ಬರ ಕೃಷಿ ಭೂಮಿ ಬ್ಯಾಂಕ್ ಸಾಲವೊಂದಕ್ಕೆ ಅಡವಾಗಿತ್ತು… ಆ ಭೂಮಿಯ ಮಾಲಿಕರು ತನ್ನ ಕೃಷಿ ಭೂಮಿ ಉಳಿಕೊಳ್ಳಲು ಸಹಾಯ ಮಾಡಬೇಕೆಂದು ವೀರಪ್ಪನನ್ನು ಕೇಳಿಕೊಂಡರು….
ಅವರಿಗೆ ಸಹಾಯ ಮಾಡಲಿಕ್ಕಾಗಿ ವೀರಪ್ಪನು ಕನ್ನಡದ ಹೆಸರಾಂತ ನಟ ಡಾ ರಾಜಕುಮಾರ್ ಅವರನ್ನು ಅಪಹರಿಸಿ ಸರ್ಕಾರದಿಂದ ಭಾರೀ ಮೊತ್ತದ ಹಣಕ್ಕಾಗಿ ಬೇಡಿಕೆ ಇಟ್ಟನು…
ಅವನು ಹೀಗೆ ಮಾಡುವುದಕ್ಕೂ ಕಾರಣವಿತ್ತು… ಕೆಲ ದಿನಗಳ ಹಿಂದೆ ರೈತರೆಲ್ಲ ಸಾಲಮನ್ನಾ ಮಾಡಿ ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು….. ಆದರೆ ಸರ್ಕಾರ ಸಾಲಮನ್ನ ಮಾಡಲು ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲವೆಂದು ರೈತರ ಮನವಿಯನ್ನು ತಿರಸ್ಕರಿಸಿತ್ತು…..
ರೈತಪರನಾದ ವೀರಪ್ಪನು ಸರ್ಕಾರಕ್ಕೆ ಬುದ್ದಿ ಕಲಿಸಬೇಕೆಂದು ಯೋಚಿಸಿ ರಾಜಕುಮಾರ್ ಅವರ ಅಪಹರಣ ಮಾಡಿ ಸರ್ಕಾರದಿಂದಲೇ ಹಣ ಪೀಕಿ ರೈತರ ಸಾಲ ತೀರಿಸಿದನು.
ಇದರಿಂದಾಗಿ ವೀರಪ್ಪನ ಕೀರ್ತಿ ಇಡೀ ದೇಶದಲ್ಲಿ ಹೆಸರುವಾಸಿಯಾಗಿತ್ತು…. ಮಹಿಷನ ಕಾಲದ ಗತ ವೈಭವ ಜನಮನ್ನಣೆ ಮರುಕಳಿಸಿತ್ತು….
ಇದನ್ನು ಆರ್ಯ, ಮನುವಾದಿ ಬ್ರಾಹ್ಮಣರಿಗೆ ಸಹಿಸಲಾಗಲಿಲ್ಲ.. ಅವರು ಕುತಂತ್ರದಿಂದ ಓರ್ವ ಆರ್ಯ ಮಹಿಳೆಯ ಮುಂದಾಳತ್ವದಲ್ಲಿ ವೀರಪ್ಪನನ್ನೂ ಕೊಂದರು.
ಮೂಲ್ನಿವಾಸಿ ಬಂಧುಗಳೇ ಈ ಆರ್ಯ ಮನುವಾದಿ ಬ್ರಾಹ್ಮಣರು ಯಾವಾಗಲೂ ಮೂಳೆ ನಿವಾಸಿ ದ್ರಾವಿಡರ ಏಳಿಗೆಯನ್ನು ಸಹಿಸುವುದಿಲ್ಲ…. ಅವರು ಕೋಮುವಾದಿಗಳು, ಮಾನವತಾ ವಿರೋಧಿಗಳು.
ಇಂತಹ ಕೋಮುವಾದಿಳಿಂದ, ಅವರ ಮನುವಾದಿ ಧರ್ಮದಿಂದ ದ್ರಾವಿಡರು ದೂರ ಇರಬೇಕು.
ಬನ್ನಿ ನೈಜ ಇತಿಹಾಸ ತಿಳಿಯೋಣ.
Jokes Apart ಇದು ಸದ್ಯಕ್ಕೆ ನಾನು ನನ್ನ ಕಲ್ಪನೆಗೆ ಅನುಗುಣವಾಗಿ ಬರೆದ ಕಥೆಯಾಗಿದೆ…ಆದರೆ ಖಂಡಿತ ಹೇಳುತ್ತೇನೆ ಕೇಳಿ…. ಮುಂದಿನ ದಸರೆಯ ಒಳಗೆ ಇಂತಹ ಹತ್ತಾರು ಆಧಾರ ರಹಿತ Garbage, Guttar ಕಥೆಗಳು Fake Factory ಇಂದ ಹೊರ ಬರಲಿವೆ…..
ಪಾಪ ಎಡಚ ಗ್ಯಾಂಗು ಏಳೆಂಟು ವರ್ಷದಿಂದ ಮಹಿಷ ದಸರಾ ಮಾಡುತ್ತಿದ್ದರೂ ಅವರಿಗೆ ಈವರೆಗೂ ಸರಿಯಾದ Support System ಸಿಕ್ಕಿರಲಿಲ್ಲ…..ಆದರೆ ಈಗಿರುವ ಸರ್ಕಾರ ತಮಗೆ ಸಹಕಾರ ನೀಡುತ್ತಿದೆ ಎಂದು ಸ್ವತಃ ಅವರೇ ಹೇಳುತ್ತಿದ್ದಾರೆ….
ಸರ್ಕಾರದ ಸಹಕಾರವಿರುವ ಧೈರ್ಯದಿಂದ ಈ ವರ್ಷ ಒಂದು ದಿನದ ಕಾರ್ಯಗಾರ ಕೂಡ ಮಾಡಿದ್ದಾರೆ… ಹಾಗಾಗಿ ಇಂತಹ ಆಧಾರರಹಿತ Guttur ಸಾಹಿತ್ಯವನ್ನು ನಿರೀಕ್ಷಿಸಿ ಅಂತಷ್ಟೇ ಹೇಳಬಲ್ಲೆ
ಮುಂದಿನ ವರ್ಷದ ಒಳಗೆ ಲದ್ದಿ ಗ್ಯಾಂಗಿನ ಇಡೀ Eco System ಆ ಕಾರ್ಯಗಾರದ Product ಆಗಿ ಬಂದ ಇಂತಹ Gutter ಸಾಹಿತ್ಯವನ್ನೇ ಇತಿಹಾಸವೆಂದು ಬಿಂಬಿಸುವ ಸರ್ವ ಪ್ರಯತ್ನವನ್ನೂ ಮಾಡಲಿದೆ.
Leave A Reply