ಕೇರಳ ಲವ್‌ಜಿಹಾದ್ ಹಿಂದೆ ಮುಸ್ಲಿಂ ಮಹಿಳೆಯ ಕೈವಾಡ
ದೆಹಲಿ: ಕೇರಳದಲ್ಲಿ ಬೇರೂರಿರುವ ಲವ್‌ಜಿಹಾದ್ ವಿರುದ್ಧ ತನಿಖೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದ ಬೆನ್ನಲ್ಲೇ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಜಿಹಾದ್ ಹಿಂದೆ ಮುಸ್ಲಿಂ ಮಹಿಳೆಯ ಕೈವಾಡ ಇದೆ ಎಂದು ತಿಳಿಸಿದೆ.
ಪಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ಗೆ ಸೇರಿದ ಶೈನಾಬ ಎಂಬಾಕೆ ಹಿಂದೂ ಯುವತಿಯರನ್ನು ಮನವೊಲಿಸಿ ಇಸ್ಲಾಾಂಗೆ ಮತಾಂತರಗೊಳಿಸುತ್ತಿದ್ದಳು. ಅಲ್ಲದೆ ಮುಸ್ಲಿಂ ಯುವಕರನ್ನು ಪ್ರೀತಿಸು ಎಂದು ತಲೆತುಂಬುತ್ತಿದ್ದಳು. ಈಕೆ ಲವ್‌ಜಿಹಾದ್‌ನ ಮಾರ್ಗದರ್ಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಳು ಎಂದು ಎನ್‌ಐಎ ಮಾಹಿತಿ ನೀಡಿದೆ.
ಕೇರಳದ ಪಲಕ್ಕಾಡ್‌ನಲ್ಲಿ ಹಿಂದೂಯುವತಿ ಅಖಿಲಾ ಅಶೋಕನ್‌ರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಿ, ಶಾಫಿನ್ ಜಹಾನ್‌ರನ್ನು ಮದುವೆಯಾಗಿದ್ದಾರೆ ಎಂದು ದೂರು ದಾಖಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಕೇರಳ ಹೈಕೊರ್ಟ್ ಈ ಮದುವೆಯನ್ನೇ ಅನೂರ್ಜಿತಗೊಳಿಸಿತ್ತು. ಕೊನೆಗೆ ಈ ಮದುವೆಯ ಹಿಂದೆ ಲವ್‌ಜಿಹಾದ್‌ನ ಲಕ್ಷಣಗಳಿದ್ದು, ತನಿಖೆ ನಡೆಸಬೇಕು ಎಂದು ಸುಪ್ರೀಂ ಕೊರ್ಟ್ ತೀರ್ಪು ನೀಡಿದೆ.
Leave A Reply