ಉತ್ತರಖಂಡದ ಮದರಸಾಗಳಲ್ಲಿ ಇನ್ನು ಸಂಸ್ಕೃತ ಶಿಕ್ಷಣ
Posted On September 14, 2023
0

ಇನ್ನು ಮುಂದೆ ಉತ್ತರಖಂಡದ ಮದರಸಾಗಳಲ್ಲಿ ಸಂಸ್ಕೃತ ಭಾಷೆಯನ್ನು ಕಲಿಸಲಾಗುವುದು ಎಂದು ಉತ್ತರಖಂಡ ವಕ್ಫ್ ಬೋರ್ಡ್ ಚೇರಮೆನ್ ಶದಾಬ್ದ್ ಶಾಮ್ ಮಾಹಿತಿ ನೀಡಿದ್ದಾರೆ. ದೇವಭೂಮಿ ಉತ್ತರಖಂಡ ದೇವರುಗಳು ನೆಲೆಸಿದ ಪುಣ್ಯ ಕ್ಷೇತ್ರವಾಗಿದ್ದು, ಇಂತಹ ಪುಣ್ಯ ನೆಲದಲ್ಲಿ ಸಂಸ್ಕೃತ ಕಲಿಸದಿದ್ದರೆ ಇನ್ನೆಲ್ಲಿ ಕಲಿಸುವುದು ಎಂದು ಅವರು ತಿಳಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಉತ್ತರಖಂಡದ ಮದರಸಾಗಳಲ್ಲಿ ಅಳವಡಿಸುವ ಚಿಂತನೆ ನಡೆದಿದ್ದು, ಅದರ ಭಾಗವಾಗಿ ಸಂಸ್ಕೃತ ಶಿಕ್ಷಣವನ್ನು ಮದರಸಾಗಳಲ್ಲಿ ಕಲಿಸಲಾಗುವುದು ಎಂದು ಅವರು ಹೇಳಿದ್ದಾರೆ. ಇದೊಂದು ಐತಿಹಾಸಿಕ ನಿರ್ಧಾರವಾಗಿದ್ದು, ಉತ್ತರಖಂಡದಂತಹ ಶ್ರೇಷ್ಟ ಹಿನ್ನಲೆ ಹೊಂದಿದ ನಾಡಿನಲ್ಲಿ ವಕ್ಫ್ ಬೋರ್ಡ್ ಇಂತಹ ಕ್ರಮ ತೆಗೆದುಕೊಂಡದ್ದು ಎಲ್ಲರಿಗೂ ಮಾದರಿ ಎಂದು ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
Trending Now
ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
September 17, 2025
ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
September 17, 2025