• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಏನಂತ ಚೈತ್ರಾಳಿಗೆ ಅಷ್ಟು ಹಣ ಕೊಟ್ರು ಪೂಜಾರಿ!?

Nag Shenoy Posted On September 14, 2023


  • Share On Facebook
  • Tweet It

ನಾನು ಚೈತ್ರಾ ಕುಂದಾಪುರ ಇವರನ್ನು ನಮ್ಮ ಟಿವಿಯ ಜನಧ್ವನಿಯ ಡಿಬೇಟಿನಲ್ಲಿ ಮೊದಲು ನೋಡಿದ್ದು. ಆಗ ಚೈತ್ರಾ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಇರುತ್ತಿದ್ದಳು. ಅಲ್ಲಿ ಆಕೆಯ ಭಾಷಣಗಳು ಟಿವಿ ಕ್ಯಾಮೆರಾದಲ್ಲಿ ಸೆರೆಯಾಗುತ್ತಿದ್ದವು. ಅದನ್ನು ಟಿವಿ ವಾಹಿನಿಗಳು ನ್ಯೂಸ್ ನಲ್ಲಿ ಪ್ರಸಾರ ಮಾಡುತ್ತಿದ್ದವು. ಅಂತಹ ಒಂದು ವಿಷಯದ ಚರ್ಚೆಗಾಗಿ ನಾನು ಅವಳನ್ನು ಸ್ಟುಡಿಯೋಗೆ ಆಹ್ವಾನಿಸಿದ್ದೆ. ಡಿಬೇಟ್ ಚೆನ್ನಾಗಿ ನಡೆದಿತ್ತು. ನಂತರ ಚೈತ್ರಾ ವಿದ್ಯಾಭ್ಯಾಸ ಮುಗಿದ ಬಳಿಕ ಸ್ಪಂದನಾ ವಾಹಿನಿ ಸೇರಿಕೊಂಡಳು. ಅಲ್ಲಿ ಖಡಕ್ ನಿರೂಪಣೆಗಾರರ ತಂಡವೇ ಇತ್ತು. ರಕ್ಷತ್ ಶೆಟ್ಟಿ, ಶ್ರೀಕಾಂತ್ ಶೆಟ್ಟಿ, ಚೈತ್ರಾ ಕುಂದಾಪುರ ಹೀಗೆ ಅವರು ಯಾವುದೇ ವಿಷಯದಲ್ಲಿ ತಮ್ಮ ನೇರ ಖಡಕ್ ಮಾತುಗಳಿಂದ ವಾಹಿನಿಗೆ ವೀಕ್ಷಕರ ಸಂಖ್ಯೆಯನ್ನು ಹೆಚ್ಚು ಮಾಡುತ್ತಾ ಹೋದರು. ಬಳಿಕ ಚೈತ್ರಾ ಅಲ್ಲಿಂದ ಹಿಂದೂ ಸಮಾಜೋತ್ಸವದ ವೇದಿಕೆಗಳಲ್ಲಿ ಕಾಣಿಸಿಕೊಂಡಳು. ಅವಳ ಮಾತುಗಳಿಗೆ ಚಪ್ಪಾಳೆಗಳು ಬೀಳಲು ಶುರುವಾಯಿತು. ಜಯಘೋಷಗಳು ಮೊಳಗಿದವು. ಚೈತ್ರಾ ಹಿಂದೂ ನಾಯಕಿಯಾದಳು. ಸಾಮಾನ್ಯವಾಗಿ ಹೀಗೆ ಯುವ ನಾಯಕರು ತುಂಬಿದ ಸಭೆಯಲ್ಲಿ ಖಡಕ್ ಆಗಿ ಮಾತನಾಡುತ್ತಿದ್ದಂತೆ ಕ್ರಮೇಣ ಪಕ್ಷದ ನಾಯಕರ ಕಣ್ಣಿಗೆ ಬೀಳುತ್ತಾರೆ. ಶೋಭಾ ಕರಂದ್ಲಾಜೆಯವರಿಂದ ಹಿಡಿದು ಸಿಟಿ ರವಿ, ಸುನೀಲ್ ಕುಮಾರ್ ಹೀಗೆ ಹಲವು ನಾಯಕರು ತಮ್ಮ ನಿಷ್ಠುರ ಭಾಷಣಗಳಿಂದ ರಾಜ್ಯ ನಾಯಕರ ಗಮನ ಸೆಳೆಯುತ್ತಾ ಹೋಗಿ ಶಾಸಕ, ಸಂಸದ ಹೀಗೆ ಬೇರೆ ಬೇರೆ ಹುದ್ದೆಗಳನ್ನು ಅಲಂಕರಿಸುತ್ತಾ ಹೋಗಿರುವುದು ಇತಿಹಾಸದಲ್ಲಿದೆ.

ದೊಡ್ಡವರ ಬಳಿ ಮಾತನಾಡಬಹುದಾ?

ಸಾಮಾನ್ಯವಾಗಿ ಹೀಗೆ ಭಾಷಣಗಳನ್ನು ಮಾಡುತ್ತಾ ಹೋಗುವವರ ಮುಂದೆ ಒಂದು ಹಂತದಲ್ಲಿ ಎರಡು ಪ್ರಶ್ನೆಗಳು ಎದುರಾಗುತ್ತವೆ. ಮೊದಲನೇಯದಾಗಿ ನಾನು ಹೀಗೆ ಭಾಷಣಗಳನ್ನು ಮಾಡುತ್ತಾ ಯಾರು ಯಾರನ್ನೋ ಎಂಪಿ, ಎಂಎಲ್ ಎ ಮಾಡುತ್ತಾ ಇರುವುದಾ ಅಥವಾ ನಾನು ಕೂಡ ಏನಾದರೂ ಆಗುವುದಾ?
ಯಾವುದೋ ಒಬ್ಬ ವ್ಯಕ್ತಿ ಶಾಸಕ ಅಥವಾ ಸಂಸದ ಆಗುವುದು ಅವನ ಕರ್ಮದ ಅನುಸಾರವೇ ವಿನ: ಪ್ರತಿ ಬಾರಿ ಅಲ್ಲಿ ಅವನು ಪಕ್ಷಕ್ಕಾಗಿ, ಸಂಘಟನೆಗಾಗಿ ದುಡಿದಿರುವುದರಿಂದ ಏನಾದರೂ ಆಗುತ್ತಾನೆ ಎಂದಲ್ಲ. ಹಾಗೆ ನೋಡಿದರೆ ಜನಪ್ರತಿನಿಧಿಗಳ ಬದುಕು ಹೊರಗಿನಿಂದ ಚೆಂದವಾಗಿಯೇ ಕಾಣುತ್ತದೆ. ಆದರೆ ಸರಿಯಾಗಿ ಅದರ ಒಳಗೆ ಇಣುಕಿದರೆ ಅಲ್ಲಿ ಇರುವಷ್ಟು ಕಿರಿಕಿರಿ, ಒಳರಾಜಕೀಯ, ವೈಯಕ್ತಿಕ ಜೀವನ ಇಲ್ಲದ್ದು, ಸೋಲುವ ಆತಂಕ ಹೀಗೆ ನೂರಾರು ಸವಾಲುಗಳು ಇವೆ. ಆದರೂ ಸಂಘಟನೆ, ಪಕ್ಷಕ್ಕಾಗಿ ದುಡಿಯುವ ವ್ಯಕ್ತಿ ತಾನು ಕೂಡ ಒಂದು ದಿನ ಶಾಸಕ, ಸಚಿವ ಆಗಬೇಕು ಎಂದೇ ದುಡಿಯುತ್ತಾನೆ. ನನಗೆ ಏನೂ ಬೇಡಾ, ನನ್ನದು ನಿಸ್ವಾರ್ಥ ಸೇವೆ ಎಂದು ಪಕ್ಷದ ಕಾರ್ಯಕರ್ತನಾಗಿ ಹೇಳುವವರು ಇಲ್ವಾ? ಇದ್ದಿರಬಹುದು. ನನಗೆ ಸಿಕ್ಕಿಲ್ಲ ಅಷ್ಟೇ.
ಸಾಮಾನ್ಯವಾಗಿ ನೀವು ಪತ್ರಕರ್ತರಾಗಿದ್ದರೆ, ಸಂಘಟನೆಯ ಪ್ರಮುಖರಾಗಿದ್ದರೆ, ಆಗಾಗ ಶಾಸಕ, ಸಚಿವ, ಸಂಸದರ ಹಿಂದೆ ಮುಂದೆ ಸುತ್ತುತ್ತಾ, ಅವರೊಂದಿಗೆ ನಗುತ್ತಾ, ಫೋಟೋದಲ್ಲಿ, ವಿಡಿಯೋದಲ್ಲಿ ಕಾಣಿಸಿಕೊಳ್ಳುತ್ತಾ ಇದ್ದರೆ ನಿಮಗೆ ಏನೋ ಅವ್ಯಕ್ತ ಶಕ್ತಿಯಿದೆ ಎಂದು ಅಂದುಕೊಳ್ಳುವ ವರ್ಗವೇ ಹುಟ್ಟಿಕೊಳ್ಳುತ್ತದೆ. ಅದರಲ್ಲಿಯೂ ಕಾರ್ಪೋರೇಟರ್ ಆಗಬೇಕು ಎಂದು ಆಸೆ ಇಟ್ಟುಕೊಂಡವರು, ಗ್ರಾಮ ಪಂಚಾಯತ್ ನಿಂದ ಜಿಲ್ಲಾ ಪಂಚಾಯತ್ ತನಕ ಚುನಾವಣೆಗೆ ನಿಲ್ಲಲು ಬಯಸುವವರು ನೀವು ಮನಸ್ಸು ಮಾಡಿದರೆ “ದೊಡ್ಡವರ” ಬಳಿ ಮಾತನಾಡಿ ಟಿಕೆಟ್ ಕೊಡಿಸಬಹುದು ಎಂದೇ ಅಂದುಕೊಳ್ಳುತ್ತಾರೆ. ನಿಮ್ಮನ್ನು ಸಂಪರ್ಕಿಸಲು ಪ್ರಯತ್ನ ಮಾಡುತ್ತಾರೆ. ನೀವು ಸಿಕ್ಕಿದರೆ ಕಾಫಿಗೆ, ಊಟಕ್ಕೆ ಆಹ್ವಾನಿಸುತ್ತಾರೆ. ಮಾತನಾಡುತ್ತಿದ್ದಂತೆ ತಾವು ಮಾಡುತ್ತಿರುವ ಸಮಾಜ ಸೇವೆ, ಕಷ್ಟದಲ್ಲಿರುವವರಿಗೆ ಅದು ಕೊಟ್ಟೆ, ಇದು ಕೊಟ್ಟೆ, ಅವರು ಕರೆದು ಸನ್ಮಾನ ಮಾಡಿದ್ರು, ಇವರು ಕರೆದು ಬಿರುದು ಕೊಟ್ಟರು ಎಂದೆಲ್ಲಾ ಹೇಳುತ್ತಾ ಹೋಗುತ್ತಾರೆ. ದೇವರು ಕೊಟ್ಟಿರುವುದನ್ನು ಸಮಾಜಕ್ಕೆ ಕೊಡುವುದು ಎಂದು ಹೇಳುತ್ತಾ ಹಲ್ಲುಗಿಂಜುತ್ತಾರೆ. ಆಗ ನೀವು ಕೂಡ ಇಷ್ಟೆಲ್ಲಾ ಸಮಾಜಸೇವೆ ಮಾಡುತ್ತಿದ್ದಿರಿ, ನೀವು ಕಾರ್ಪೋರೇಟರ್, ಶಾಸಕ ಆಗಬೇಕು ಎಂದು ಹೇಳಿಬಿಟ್ಟರೋ ಅವರ ಮುಂದಿನ ಪ್ರಶ್ನೆ “ಎಲ್ಲರೂ ಅದೇ ಹೇಳುವುದು, ಆದರೆ ನಮಗೆ ಯಾರು ಕೊಡುತ್ತಾರೆ, ಅಲ್ವೇ”.

ಇಮೇಜ್ ಪಣಕ್ಕೆ ಇಡಲು ಹೋದರೆ!

ಅಷ್ಟೊತ್ತಿಗೆ ನೀವು ಅವರ ಕಾಫಿಯ ಅಥವಾ ಊಟದ ಹಂಗಿಗೆ ಬಿದ್ದು “ಒಂದು ಮಾತು ಗೊತ್ತಿದ್ದವರಿಗೆ ಹೇಳುತ್ತೇನೆ, ಏನು ಆಗುತ್ತೆ ನೋಡೋಣ” ಎಂದುಬಿಟ್ಟರೆ ಮುಗಿಯಿತು. ಅವರು ಮುಂದೆ ಯಾವಾಗ ಸಿಗೋಣ ಎಂದು ಕೇಳುತ್ತಾರೆ. ನಿಮಗೆ ಫೋನ್ ಮಾಡಲು ಶುರು ಮಾಡುತ್ತಾರೆ. ಇಂತಹ ಸಮಯದಲ್ಲಿಯೇ ಕೆಲವರು ಅಡ್ಡದಾರಿ ಹಿಡಿಯಲು ಶುರು ಮಾಡುತ್ತಾರೆ. ಟಿಕೆಟ್ ಕೊಡಿಸಬಹುದು, ಆದರೆ ಅದಕ್ಕೆ ಇಷ್ಟು ಖರ್ಚು ಆಗುತ್ತದೆ ಎಂದು ಹೇಳುವವರೂ ಇದ್ದಾರೆ. ಇನ್ನು ಕೆಲವರು ಇಲ್ಲಾ, ನನ್ನಿಂದ ಆಗಲಿಲ್ಲ, ಸಾರಿ ಎಂದು ಕೈ ತೊಳೆದುಕೊಂಡು ಎದ್ದುಬಿಡುವವರು ಇದ್ದಾರೆ. ಆದರೆ ಚೈತ್ರಾ ತನಗೆ ಅನಾಯಾಸವಾಗಿ ಒಲಿದು ಬಂದ ಹಿಂದೂತ್ವದ ಇಮೇಜಿನಿಂದ ಏನಾದರೂ ಮಾಡೋಣ ಎಂದು ನಿರ್ಧರಿಸಿದಳಾ ಎನ್ನುವುದು ಈಗಿರುವ ಪ್ರಶ್ನೆ. ಯಾಕೆಂದರೆ ಚುನಾವಣೆಗೆ ಒಂದು ವರ್ಷ ಇರುವಾಗ ಟಿಕೆಟ್ ಆಕಾಂಕ್ಷಿಗಳಾಗಿರುವವರಲ್ಲಿ, ಏನಾದರೂ ಮಾಡಿ ಟಿಕೆಟ್ ದಕ್ಕಿಸಿಕೊಂಡು ಬಿಡೋಣ ಎಂದು ಹೊರಡುವವರಲ್ಲಿ ಗೋವಿಂದ ಬಾಬು ಪೂಜಾರಿ ಮೊದಲಿಗರಲ್ಲ, ಕೊನೆಯವರೂ ಅಲ್ಲ. ಆದರೆ ಟಿಕೆಟ್ ಸಿಗುತ್ತೆ ಎಂದು 5 ಕೋಟಿ ರೂಪಾಯಿಯನ್ನು ಒಬ್ಬ ಯುವತಿಯನ್ನು ನಂಬಿ ಕೊಟ್ಟರಲ್ಲ, ಅದು ಆಶ್ಚರ್ಯ. ಅದರೊಂದಿಗೆ ಹಣ ಹೋಯಿತು ಎಂದು ದೂರು ಕೊಟ್ಟು ಇಷ್ಟು ದೊಡ್ಡ ವಿವಾದಕ್ಕೆ ನಾಂದಿ ಹಾಡಿದರಲ್ಲ, ಅದು ಕೂಡ ಕರಾವಳಿ ಕರ್ನಾಟಕದ ಮಟ್ಟಿಗೆ ಹೊಸತು. ಚೈತ್ರಾ ಮೇಲೆ ಆರೋಪ ಸಾಬೀತಾಗುತ್ತಾ, ಇಲ್ವಾ ಎನ್ನುವುದಕ್ಕೆ ಇನ್ನು ತುಂಬಾ ತನಿಖೆ, ನ್ಯಾಯಾಲಯದಲ್ಲಿ ವಿಚಾರಣೆ ಹೀಗೆ ಸಾಕಷ್ಟು ಸಮಯ ಇದೆ. ಆದರೆ ಇನ್ನು ಚೈತ್ರಾ ವೇದಿಕೆಯ ಮೇಲೆ ನಿಂತು ಓ ನನ್ನ ಹಿಂದೂ ಸಹೋದರ, ಸಹೋದರಿಯರೇ ಎಂದು ಹೇಳಿದಾಗ ಕೆಳಗೆ ಕೇಳುವ ಕಿವಿಗಳಿಗೆ ಅದೇ ಅಭಿಮಾನ ಇರುತ್ತಾ? ಗೊತ್ತಿಲ್ಲ!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Nag Shenoy May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Nag Shenoy May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search