ಗೋವಾ ಉಪಚುನಾವಣೆ: ಪರಿಕ್ಕರ್‌ಗೆ ಗೆಲುವು
Posted On August 28, 2017

ಪಣಜಿ: ಗೋವಾದ ಪಣಜಿ ವಿಧಾನಸಭೆ ಕ್ಷೇತ್ರಕ್ಕೆೆ ನಡೆದ ಉಪಚುನಾವಣೆಯಲ್ಲಿ ಮುಖ್ಯಮಂತ್ರಿಿ ಮನೋಹರ್ ಪರಿಕ್ಕರ್ ಭರ್ಜರಿ ಗೆಲುವು ಸಾಧಿಸುವ ಮೂಲಕ ಆರನೇ ಬಾರಿ ಶಾಸಕರಾಗಿ ಆಯ್ಕೆೆಯಾಗಿದ್ದಾಾರೆ.
ಪರಿಕ್ಕರ್ 9862 ಮತ ಪಡೆಯುವ ಮೂಲಕ ಪ್ರತಿಸ್ಪರ್ಧಿ ಗಿರೀಶ್ ಚಂದನ್‌ಕರ್‌ರನ್ನು 4,803 ಮತಗಳಿಂದ ಸೋಲಿಸಿದ್ದಾಾರೆ. ಚಂದನ್‌ಕರ್ 5,059 ಮತ ಪಡೆಯುವಲ್ಲಿ ಮಾತ್ರ ಶಕ್ತರಾದರು.
ವಾಲ್ಪೋೋಯಿ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿಯೇ ಗೆಲುವು ಸಾಧಿಸಿದ್ದು ವಿಶ್ವಜಿತ್ ರಾಣೆ ಅವರು ಕಾಂಗ್ರೆೆಸ್‌ನ ರಾಯ್ ನಾಯ್‌ಕ್ ವಿರುದ್ಧ 10,066 ಮತಗಳಿಂದ ಭಾರಿ ಜಯ ಗಳಿಸಿದ್ದಾಾರೆ.
ಪರಿಕ್ಕರ್ ಲಖನೌನಿಂದ ರಾಜ್ಯಸಭೆ ಪ್ರತಿನಿಧಿಸುತ್ತಿಿದ್ದು, ಮುಂದಿನವಾರ ಸದಸ್ಯ ಸ್ಥಾಾನಕ್ಕೆೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾಾರೆ. ಪರಿಕ್ಕರ್ ವಿಜಯಕ್ಕೆೆ ಗೃಹ ಸಚಿವ ರಾಜನಾಥ ಸಿಂಗ್ ಹಾಗೂ ಜವಳಿ ಸಚಿವೆ ಸ್ಮತಿ ಇರಾನಿ ಅಭಿನಂದನೆ ಸಲ್ಲಿಸಿದ್ದಾಾರೆ. ಆ.23ರಂದು ಉಪಚುನಾವಣೆ ನಡೆದಿತ್ತು.
- Advertisement -
Leave A Reply