ತನ್ನ ದೇಶದ ಭಿಕ್ಷುಕರನ್ನು ಅರಬ್ ರಾಷ್ಟ್ರಗಳಿಗೆ ಕಳುಹಿಸುತ್ತಿರುವ ಪಾಕ್!
ಇಡೀ ದೇಶವೇ ಭಿಕ್ಷುಕರ ಕೇಂದ್ರದಂತೆ ಆಗಿರುವಾಗ ಆ ದೇಶದ ನಿಜವಾದ ಭಿಕ್ಷುಕರು ಏನು ಮಾಡಬೇಕು. ಎಲ್ಲರೂ ಬೇಡುವವರೇ ಆಗಿರುವಾಗ ಕೊಡುವವರು ಯಾರು? ಇಂತಹ ಒಂದು ಪರಿಸ್ಥಿತಿಯನ್ನು ಪಾಕಿಸ್ತಾನದ ಭಿಕ್ಷುಕರು ಅನುಭವಿಸುತ್ತಿದ್ದಾರೆ. ಬಹಳ ದರಿದ್ರ ಅವಸ್ಥೆಯಲ್ಲಿರುವ ಪಾಕಿಸ್ತಾನದ ಭಿಕ್ಷುಕರನ್ನು ಅಲ್ಲಿನ ಸರಕಾರ ಅರಬ್ ರಾಷ್ಟ್ರಗಳಿಗೆ ಕಳುಹಿಸಿಕೊಡುತ್ತಿದೆ.
ಅವರನ್ನು ಉಮ್ರಾ ವೀಸಾದಲ್ಲಿ ಪಾಕಿಸ್ತಾನ ಕಳುಹಿಸಿಕೊಡುತ್ತಿದೆ. ಅವರು ಅರಬ್ ರಾಷ್ಟ್ರಗಳಲ್ಲಿ ವೀಸಾ ಅವಧಿ ಮುಗಿದ ಬಳಿಕವೂ ನಿರಾಶ್ರಿತರಾಗಿ ನೆಲೆ ನಿಲ್ಲುತ್ತಿದ್ದಾರೆ. ಅವರಲ್ಲಿ ಬಹುತೇಕರು ಸಣ್ಣಪುಟ್ಟ ಕಳ್ಳತನ, ಪಿಕ್ ಪಾಕೆಟ್ ಸಹಿತ ಅಕ್ರಮ ಕೆಲಸಗಳಲ್ಲಿ ದೊರಕಿಸಿಕೊಳ್ಳುತ್ತಿದ್ದಾರೆ. ಅಂತವರು ಬಂಧಿತರಾದಾಗ ಅವರ ಮೂಲ ಹುಡುಕಿದಾಗ ಎಲ್ಲರೂ ಪಾಕಿಸ್ತಾನದಿಂದ ಅಕ್ರಮ ವೀಸಾದಲ್ಲಿ ಬಂದು ನೆಲೆ ನಿಂತವರು ಎನ್ನುವುದು ಗೊತ್ತಾಗುತ್ತಿದೆ. ಇಂತವರಿಂದಲೇ ಗಲ್ಫ್ ರಾಷ್ಟ್ರಗಳ ಜೈಲುಗಳು ತುಂಬಿವೆ.
ಇವರ ಶಿಕ್ಷೆಯ ಅವಧಿ ಮುಗಿದು ವಾಪಾಸ್ ಪಾಕಿಸ್ತಾನಕ್ಕೆ ಕಳುಹಿಸಿದ ನಂತರವವೂ ಅವರು ಮತ್ತೆ ಅರಬ್ ರಾಷ್ಟ್ರಗಳಿಗೆ ವಾಪಾಸ್ ಬರುತ್ತಿದ್ದಾರೆ. ಇದರಿಂದ ಆಕ್ರೋಶಿತಗೊಂಡಿರುವ ಅರಬ್ ರಾಷ್ಟ್ರಗಳು ಭಿಕ್ಷುಕರನ್ನು ಕಳುಹಿಸದಿರುವಂತೆ ಪಾಕಿಸ್ತಾನಕ್ಕೆ ಕಟ್ಟುನಿಟ್ಟಾಗಿ ಸೂಚಿಸಿದೆ. ಈ ವಿಷಯವನ್ನು ಪಾಕಿಸ್ತಾನದ ಟಿವಿ ಮತ್ತು ಪತ್ರಿಕಾ ಮಾಧ್ಯಮಗಳು ವರದಿ ಮಾಡಿವೆ. ಇದರಿಂದ ಪಾಕಿಸ್ತಾನದ ಮಾನ ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಹರಾಜಾಗಿದೆ. ಪಾಕಿಸ್ತಾನದ ನಾಗರಿಕರ ಪಾಡೇ ನರಕಸದೃಶ್ಯವಾಗಿರುವಾಗ ಅಲ್ಲಿನ ಭಿಕ್ಷುಕರ ಕಥೆಯನ್ನು ಕೇಳುವವರೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
Leave A Reply