ಎಂಪಿ: ಅತ್ಯಾಚಾರ ಆರೋಪಿ ಎನ್ಕೌಂಟರ್
ಮಧ್ಯಪ್ರದೇಶದ ಉಜ್ಜೈನಿಯಲ್ಲಿ 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ರಸ್ತೆ ಬದಿ ಬಿಸಾಡಿ ಹೋದ ಘಟನೆ ರಾಷ್ಟ್ರವ್ಯಾಪಿ ಸುದ್ದಿಯಾಗಿತ್ತು. ಆ ಸಂತ್ರಸ್ತೆ ಎಂಟು ಕಿ.ಮೀ ನಡೆದುಕೊಂಡು ಹೋಗಿ ಅಲ್ಲಲ್ಲಿ ಜನರ ಬಳಿ ಸಹಾಯಕ್ಕೆ ಅಂಗಲಾಚಿದರೂ ಯಾರೂ ನೆರವಿಗೆ ಬಂದಿರಲಿಲ್ಲ. ಕೊನೆಗೆ ಆಶ್ರಮವೊಂದರ ಸಹಾಯಕ ಆಕೆಗೆ ಬಟ್ಟೆಬರೆ ನೀಡಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿಂದ ಪೊಲೀಸ್ ಠಾಣೆಗೆ ಅವರು ಮಾಹಿತಿಯನ್ನು ನೀಡಿದ್ದರು. ಬಾಲಕಿ ಸಹಾಯಕ್ಕಾಗಿ ಅಂಗಲಾಚುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಕೆಲವು ಕಡೆ ಸೆರೆಯಾಗಿತ್ತು. ಅದು ಸಾಮಾಜಿಕ ಜಾಲತಾಣಗಳ ಮೂಲಕ ವೈರಲ್ ಕೂಡ ಆಗಿತ್ತು.
ಈ ಬಗ್ಗೆ ಮಧ್ಯಪ್ರದೇಶ ಸರಕಾರದ ವಿರುದ್ಧ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ್ದರು. ಪ್ರಿಯಾಂಕಾ ವಾದ್ರಾ ಮಧ್ಯಪ್ರದೇಶದ ಭಾರತೀಯ ಜನತಾ ಪಾರ್ಟಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ನಡುವೆ ಉಜ್ಜೈನಿ ಪೊಲೀಸರು ಐದು ಆರೋಪಿಗಳನ್ನು ಬಂಧಿಸಿದ್ದರು. ಪೊಲೀಸರು ಬಂಧಿಸಿದ ಆರೋಪಿಗಳ ಪೈಕಿ ಒಬ್ಬ ವ್ಯಕ್ತಿ ಕಸ್ಟಡಿಯಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿರುವಾಗ ಶೂಟೌಟ್ ಮಾಡಲಾಗಿದೆ.
ಈ ಹಿಂದೆ ಕೂಡ ತೆಲಂಗಾಣದಲ್ಲಿ ಅತ್ಯಾಚಾರ ಆರೋಪಿಗಳು ಪೊಲೀಸರ ಕಸ್ಟಡಿಯಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿರುವಾಗ ಶೂಟೌಟ್ ಮಾಡಲಾಗಿತ್ತು. ಅಂದು ತೆಲಂಗಾಣ ಪೊಲೀಸರ ಕ್ರಮಕ್ಕೆ ಜನಸಾಮಾನ್ಯರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಅದರ ಬಳಿಕ ಅತ್ಯಾಚಾರ ಆರೋಪಿಗಳ ವಿರುದ್ಧ ಉತ್ತರ ಪ್ರದೇಶ ಸರಕಾರ ಕೂಡ ಕಠಿಣ ಕ್ರಮಗಳನ್ನು ಕೈಗೊಂಡಿತ್ತು. ಈಗ ಮಧ್ಯಪ್ರದೇಶ ಸರಕಾರ ಕೂಡ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಯಾವುದೇ ಅನೈತಿಕ ಕೃತ್ಯಗಳನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಸಾರಿದೆ.
Leave A Reply