ನನ್ನ ಹೆಸರಿನಲ್ಲಿ ಮನೆಯಿಲ್ಲ, ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಮನೆ ನೀಡಿದ ತೃಪ್ತಿ ಇದೆ – ಮೋದಿ

“ನನ್ನ ಹೆಸರಿನಲ್ಲಿ ಯಾವುದೇ ಮನೆಯಿಲ್ಲ. ಆದರೆ ಈ ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಸ್ವಂತ ಮನೆ ಹೊಂದುವ ಅವಕಾಶ ನಮ್ಮ ಕೇಂದ್ರ ಸರಕಾರದ ಯೋಜನೆಗಳಿಂದ ಸಿಗುತ್ತಿದೆ. ಪರಿಶಿಷ್ಟ ಜಾತಿ/ ಪಂಗಡ, ಹಿಂದುಳಿದ ಮಹಿಳೆಯರಿಗೆ ಈಗ ಸ್ವಂತ ಮನೆಗಳು ಸಿಗುತ್ತಿವೆ. ನಮ್ಮ ಯೋಜನೆಗಳಿಂದ ಅವರು ಲಕ್ಷಾಧೀಶರಾಗುವಂತಾಗಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅವರು ಗುಜರಾತಿನ ಚೋಟಾದೇಪುರ್ ಜಿಲ್ಲೆಯ ಬಡೋಳಿಯಲ್ಲಿ 5000 ಕೋಟಿ ರೂ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಿಲಾನ್ಯಾಸ ಮತ್ತು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ತಮ್ಮ ಮನಸ್ಸಿನ ಮಾತುಗಳನ್ನು ಹಂಚಿಕೊಂಡ ಮೋದಿಯವರು “ಬಡವರು ತುಂಬಾ ಸವಾಲುಗಳನ್ನು ಬದುಕಿನಲ್ಲಿ ಅನುಭವಿಸುತ್ತಾ ಬರುತ್ತಿದ್ದಾರೆ. ಈಗ ದೇಶಾದ್ಯಂತ ನಾಲ್ಕು ಕೋಟಿ ಕುಟುಂಬಗಳಿಗೆ ನಮ್ಮ ಸರಕಾರ ಸ್ವಂತ ಮನೆಗಳನ್ನು ಕಟ್ಟಿಸಿಕೊಟ್ಟಿದೆ. ಹಿಂದಿನ ಸರಕಾರಗಳಂತೆ ಮನೆ ಕಟ್ಟಿಸಿಕೊಡುವುದು ಎಂದರೆ ಕೇವಲ ಸಂಖ್ಯೆಗಳ ಕಾರಣಗಳಿಗಾಗಿ ಅಲ್ಲ. ಬಡವರು ಉತ್ತಮ ರೀತಿಯಲ್ಲಿ ವಾಸಿಸುವ ವ್ಯವಸ್ಥೆ ಕೂಡ ಮಾಡಲಾಗಿದೆ” ಎಂದು ಹೇಳಿದರು.
“ಯಾವುದೇ ಮಧ್ಯವರ್ತಿ ಇಲ್ಲದೇ, ಆದಿವಾಸಿಗಳಿಗೆ ಅವರ ಅನುಕೂಲಕ್ಕೆ ತಕ್ಕಂತೆ ಮನೆ ನಿರ್ಮಿಸಿಕೊಟ್ಟಿದ್ದೇವೆ. ನನ್ನ ಹೆಸರಿನಲ್ಲಿ ಮನೆ ಇಲ್ಲದಿದ್ದರೂ, ದೇಶದ ಲಕ್ಷಾಂತರ ಹೆಣ್ಣುಮಕ್ಕಳು ತಮ್ಮ ಸ್ವಂತ ಮನೆಗಳಲ್ಲಿ ವಾಸಿಸುವ ಹಾಗೆ ವ್ಯವಸ್ಥೆ ಮಾಡಿರುವ ನಮ್ಮ ಸರಕಾರದ ಯೋಜನೆಗಳ ಬಗ್ಗೆ ಖುಷಿ ಇದೆ” ಎಂದು ಮೋದಿ ಹೇಳಿದರು.
Leave A Reply