ಹೈದ್ರಾಬಾದ್ ಬಿರಿಯಾನಿ ಎಫೆಕ್ಟ್! ಪಾಕ್ ಕಳಪೆ ಫಿಲ್ಡಿಂಗ್!
ಹೈದ್ರಾಬಾದಿನ ಬಿರಿಯಾನಿಯ ರುಚಿಗೆ ಮನಸೋತಿರುವ ಪಾಕಿಸ್ತಾನದ ಕ್ರಿಕೆಟಿಗರು ಅದನ್ನು ಗಡದ್ದಾಗಿ ತಿಂದು ತೇಗುತ್ತಿದ್ದಾರೆ. ಇದರಿಂದ ಹೊಟ್ಟೆಭಾರವಾಗಿ ಮೈದಾನದಲ್ಲಿ ಸರಿಯಾಗಿ ಬಗ್ಗಲು ಆಗದೇ ಒದ್ದಾಡುತ್ತಿದ್ದಾರೆ. ಇದರಿಂದ ವಿಶ್ವಕಪ್ ಪಂದ್ಯಾವಳಿಯ ಮೊದಲೆರಡು ಪ್ರಾಕ್ಟೀಸ್ ಮ್ಯಾಚ್ ಗಳನ್ನು ಸೋತಿದ್ದಾರೆ. ಪಂದ್ಯಾಟದ ನಂತರ ನಿರೂಪಕ ಹರ್ಷಾ ಬೋಗ್ಳೆ ನಿಮ್ಮ ಸೋಲಿಗೆ ಕಾರಣವೇನು? ಎಂದು ಹಂಗಾಮಿ ಕಪ್ತಾನ ಶದಾಬ್ ಖಾನ್ ಅವರನ್ನು ಕೇಳಿದಾಗ ಅವರು ಹೈದ್ರಾಬಾದ್ ಬಿರಿಯಾನಿ ಎಂದು ಹೇಳಿದ್ದಾರೆ.
ಭಾರತದಲ್ಲಿ ವಿಶ್ವಕಪ್ ಆಡಲು ಬಂದಿರುವ ಪಾಕಿಸ್ತಾನಿ ಆಟಗಾರರು ಇಲ್ಲಿನ ಹೋಟೇಲುಗಳ ವೈಭವವನ್ನು ಕಂಡು ಖುಷಿಗೊಂಡಿದ್ದಾರೆ. ಶತ್ರು ರಾಷ್ಟ್ರವೇ ಆಗಿದ್ದರೂ ಅತಿಥಿ ದೇವೋಭವ ಎಂದು ಸತ್ಕರಿಸುವ ಭಾರತೀಯ ಸಂಪ್ರದಾಯದಂತೆ ಪಾಕ್ ಕ್ರಿಕೆಟಿಗರನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತಿದೆ. ಐಷಾರಾಮಿ ವ್ಯವಸ್ಥೆಯಲ್ಲಿ ತಿಂದುಡು ಎಂಜಾಯ್ ಮಾಡುತ್ತಿರುವ ಪಾಕ್ ಆಟಗಾರರು ಹೈದ್ರಾಬಾದಿನ ಬಿರಿಯಾನಿಯನ್ನು ಹೊಟ್ಟೆ ತುಂಬಾ ಉಂಡು ಖುಷಿಪಟ್ಟಿದ್ದಾರೆ. ಸಾಮಾನ್ಯವಾಗಿ ಕ್ರಿಕೆಟಿಗರು ಆಹಾರದ ವಿಷಯದಲ್ಲಿ ಕಟ್ಟುನಿಟ್ಟನ್ನು ಪಾಲಿಸಬೇಕಾಗುತ್ತದೆ. ಇಲ್ಲದೇ ಹೋದರೆ ಅದು ಅವರ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತದೆ. ಪಾಕ್ ಆಟಗಾರರಿಗೆ ಆಟಕ್ಕಿಂತ ಆಹಾರವೇ ಮುಖ್ಯವಾಗಿರುವಂತೆ ವರ್ತಿಸುತ್ತಿದ್ದಾರೆ. ಇದರಿಂದ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ಕಳಪೆ ಫಿಲ್ಡಿಂಗ್ ನಿಂದ ಸೋಲಬೇಕಾಗಿದೆ.
ನಿತ್ಯ ಹೈದ್ರಾಬಾದ್ ಬಿರಿಯಾನಿಯೊಂದಿಗೆ ಬ್ಯಾಟಿಂಗ್ ಮಾಡುತ್ತಿರುವುದರಿಂದ ಪಾಕ್ ಆಟಗಾರರ ಫಾರ್ಮ್ ಹೀಗೆ ಮುಂದುವರೆಯುತ್ತದೆಯಾ ಅಥವಾ ಅವರು ಆದಷ್ಟು ಎಚ್ಚರಗೊಳ್ಳುತ್ತಾರಾ ಎನ್ನುವುದನ್ನು ಕಾದು ನೋಡಬೇಕಾಗಿದೆ.
Leave A Reply