3 ಬಂಧಿತ ಶಂಕಿತ ಐಸಿಸ್ ಉಗ್ರರು ಇಂಜಿನಿಯರ್ಸ್!
ರಾಷ್ಟ್ರೀಯ ತನಿಖಾ ದಳ ಇತ್ತೀಚೆಗೆ ಬಂಧಿಸಿರುವ ಮೂರು ಜನ ಶಂಕಿತ ಐಸಿಸ್ ಉಗ್ರರ ಜಾತಕವನ್ನು ಬಯಲಿಗೆಳೆದಾಗ ಆಶ್ಚರ್ಯಕರ ಮಾಹಿತಿಯೊಂದು ಹೊರಗೆ ಬಂದಿದೆ. ಬಂಧಿತ ಮೂವರಲ್ಲಿ ಶಹನವಾಜ್ ಗಣಿ ಇಂಜಿನಿಯರ್ ಆಗಿದ್ದು, ನ್ಯಾಶನಲ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಬಿಟೆಕ್ ಪದವಿಯನ್ನು ಪಡೆದಿದ್ದಾನೆ. ಇನ್ನು ಅರ್ಷದ್ ಎನ್ನುವ ಶಂಕಿತ ಉಗ್ರ ಆಲಿಘರ್ ಮುಸ್ಲಿಂ ವಿಶ್ವವಿದ್ಯಾನಿಲಯದಿಂದ ಮೆಕಾನಿಕಲ್ ಇಂಜಿನಿಯರಿಂಗ್ ನಲ್ಲಿ ಬಿಟೆಕ್ ಪದವಿಯನ್ನು ಹೊಂದಿದ್ದಾನೆ. ಅದನ್ನು ಕಲಿತ ಬಳಿಕ ಎಂಬಿಎ ಮತ್ತು ಪಿಎಚ್ ಡಿ ಪದವಿಯನ್ನು ಜಮೀಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದಿಂದ ಗಳಿಸಿದ್ದಾನೆ. ಮತ್ತೊಬ್ಬ ಶಂಕಿತ ಉಗ್ರ ರಿಜ್ವಾನ್ ಮಾಹಿತಿ ತಂತ್ರಜ್ಞಾನದಲ್ಲಿ ಬಿಟೆಕ್ ಪದವಿಯನ್ನು ಗಳಿಸಿದ್ದಾನೆ.
ವಿದ್ಯೆ ವಿನಯವನ್ನು ನೀಡುತ್ತದೆ ಎಂದು ಪ್ರಾಜ್ಞರು ಹೇಳುತ್ತಾರೆ. ಆದರೆ ಇಲ್ಲಿ ವಿದ್ಯೆ ದೇಶದ್ರೋಹ ಕೃತ್ಯಕ್ಕೆ ಬಳಕೆಯಾಗುವುದನ್ನು ಕಂಡಾಗ ಇಂತವರು ಕಲಿಯುವುದೇ ಬೇರೆ ದೇಶದಲ್ಲಿ ವಿಧ್ವಂಸಕ ಕೃತ್ಯ ಮಾಡುವುದಕ್ಕೆ ಎನ್ನುವುದಕ್ಕೆ ಸಾಬೀತಾಗುತ್ತಿದೆ. ಇಲ್ಲಿಯ ತನಕ ಬಂಧಿತರಾಗಿರುವ ಬಹುತೇಕ ಉಗ್ರರು ಉತ್ತಮ ಶೈಕ್ಷಣಿಕ ಹಿನ್ನಲೆಯನ್ನು ಹೊಂದಿದ್ದಾರೆ. ಕೆಲವರು ಈ ದೇಶದ ಪ್ರಖ್ಯಾತ ಕಂಪೆನಿಗಳಲ್ಲಿ ಉನ್ನತ ಉದ್ಯೋಗವನ್ನು ಕೂಡ ಮಾಡುತ್ತಾ ಇರುತ್ತಾರೆ. ಇತ್ತೀಚೆಗೆ ಮಹಾರಾಷ್ಟ್ರದ ಖ್ಯಾತ ಆಸ್ಪತ್ರೆಯಲ್ಲಿ ವಿಭಾಗದ ಮುಖ್ಯಸ್ಥರಾಗಿದ್ದ ವೈದ್ಯರಿಗೂ ಐಸಿಸ್ ಲಿಂಕ್ ಇರುವುದು ಪತ್ತೆಯಾಗಿತ್ತು. ಕೆಲವರು ಹೊರನೋಟಕ್ಕೆ ವೈಟ್ ಕಾಲರ್ ಕೆಲಸವನ್ನು ಮಾಡುತ್ತಾ ಒಳಗೊಳಗೆ ಸ್ಲೀಪರ್ ಸೆಲ್ ಗಳಾಗಿ ಕೆಲಸ ಮಾಡುತ್ತಾ ಇರುತ್ತಾರೆ. ಎಲ್ಲೋ ಒಂದು ಸಣ್ಣ ಕ್ಲೂ ಹಿಡಿದು ತನಿಖಾ ಸಂಸ್ಥೆಗಳು ಇವರ ಕದ ತಟ್ಟಿದಾಗ ಇವರ ಬಂಡವಾಳ ಬಯಲಿಗೆ ಬರುತ್ತದೆ
Leave A Reply