• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಇಸ್ರೇಲ್ ನಮ್ಮ ಶಾಶ್ವತ ಮಿತ್ರ!

Hanumantha Kamath Posted On October 10, 2023


  • Share On Facebook
  • Tweet It

ಒಂದು ರಾಜಕೀಯ ಪಕ್ಷಕ್ಕೆ ಈ ಪರಿಸ್ಥಿತಿ ಬರಬಾರದು. ಅಧಿಕಾರಕ್ಕೆ ಬರಲು ಮತಬ್ಯಾಂಕ್ ಮುಖ್ಯ. ಆದರೆ ಮತಬ್ಯಾಂಕಿಗೋಸ್ಕರ ಸೀದಾ ಈ ಲೆವೆಲ್ಲಿಗೆ ಇಳಿದರೆ ಜನರು ಏನಂದುಕೊಳ್ಳುತ್ತಾರೋ ಎನ್ನುವ
ಕನಿಷ್ಟ ಜ್ಞಾನ ಕೂಡ ಶತಮಾನದಷ್ಟು ಹಳೆಯ ಪಾರ್ಟಿಗೆ ಬೇಡ್ವಾ?. ರಾಷ್ಟ್ರದಲ್ಲಿ ಕೇವಲ 52 ರಷ್ಟು ಲೋಕಸಭಾ ಸ್ಥಾನಗಳನ್ನು ಮಾತ್ರ ಹೊಂದಿದ್ದರೂ ನಮ್ಮ ಮಿತ್ರನ ಶತ್ರುವಿಗೆ ನೀವು ಬೆಂಬಲ ಕೊಡುತ್ತೀರಿ ಎಂದಾದರೆ ನಿಮ್ಮ ಸಿದ್ಧಾಂತ ಎಲ್ಲಿಗೆ ತಲುಪಿತು ಎನ್ನುವ ಅರಿವಿದೆಯಾ?
ಅಷ್ಟಕ್ಕೂ ಪ್ಯಾಲೇಸ್ತೀನ್ ನನ್ನು ಬೆಂಬಲಿಸುವ ಮೂಲಕ ಕಾಂಗ್ರೆಸ್ಸಿಗೆ ಆಗುವಂತದ್ದು ಏನೂ ಇಲ್ಲ. ಅಲ್ಲಿರುವ ಮುಸ್ಲಿಮರನ್ನು ಖುಷಿಪಡಿಸಿದರೆ ಇವರಿಗೆ ರಾಜಕೀಯವಾಗಿ ಲಾಭ ಏನೂ ಆಗುವುದಿಲ್ಲ. ಹೆಚ್ಚೆಂದರೆ ಇಲ್ಲಿರುವ ಒಂದಿಷ್ಟು ಮುಸ್ಲಿಮರಿಗೆ ಖುಷಿಯಾಗಬಹುದು. ಆದರೂ ಮುಸ್ಲಿಮರನ್ನು ಖುಷಿಪಡಿಸಬೇಕು ಎನ್ನುವ ಧಾವಂತಕ್ಕೆ ಬಿದ್ದವರಂತೆ ಕಾಂಗ್ರೆಸ್ ವರ್ಕಿಂಗ್ ಕಮಿಟಿಯಲ್ಲಿ ಪ್ಯಾಲೇಸ್ತಿನ್ ದೇಶವನ್ನು ಬೆಂಬಲಿಸುವ ನಿರ್ಧಾರಕ್ಕೆ ಬರಲಾಗಿದೆ. ಒಂದು ದೇಶದ ಪ್ರಧಾನಿ ಯುದ್ಧದಲ್ಲಿ ನಿರತರಾಗಿರುವ ಎರಡು ರಾಷ್ಟ್ರಗಳ ಪೈಕಿ ಯಾವುದಾದರೂ ಒಂದು ರಾಷ್ಟ್ರವನ್ನು ಬೆಂಬಲಿಸಿದರೆ ನಮ್ಮ ರಾಷ್ಟ್ರದಲ್ಲಿರುವ ಎಲ್ಲರೂ ಅದನ್ನು ಸಮರ್ಥಿಸಬೇಕಾಗಿರುವ ಅಗತ್ಯ ಇದೆ. ಯಾಕೆಂದರೆ ಭಾರತದ ಶತ್ರು ಯಾರು, ಮಿತ್ರ ಯಾರು ಎಂದು ಜನಸಾಮಾನ್ಯರಿಗೆ ಗೊತ್ತಿಲ್ಲದಿದ್ದರೆ ಕನಿಷ್ಟ ಪತ್ರಿಕೆಗಳಲ್ಲಿ, ಮಾಧ್ಯಮಗಳ ಮೂಲಕವಾದರೂ ತಿಳಿದುಕೊಳ್ಳುತ್ತಾರೆ. ಆದರೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಮುಖಂಡರಿಗೆ ಭಾರತಕ್ಕೆ ಇಸ್ರೇಲ್ ಮಿತ್ರನಾ, ಶತ್ರುವಾ ಎನ್ನುವುದು ಗೊತ್ತಿಲ್ಲದೇ ಹೋದರೆ ಕನಿಷ್ಟ ದೇಶದ ಇತಿಹಾಸವನ್ನಾದರೂ ತಿಳಿದು ಮುನ್ನಡೆಯಬಹುದಿತ್ತಲ್ಲಾ?

ಇಸ್ರೇಲ್ ನಮ್ಮ ಶಾಶ್ವತ ಮಿತ್ರ!

2000 ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದ ಯಹೂದಿಗಳು ಯಾವತ್ತೂ ಕೂಡ ಭಾರತದಲ್ಲಿ ತಮ್ಮ ಧರ್ಮ ಹರಡುವ ಕೆಲಸ ಮಾಡಲೇ ಇಲ್ಲ. ಇಲ್ಲಿನ ಯಾವ ದೇವಸ್ಥಾನವನ್ನು ಕೂಡ ಅವರು ಒಡೆಯಲಿಲ್ಲ. ಹಿಂದೂಗಳನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಲಿಲ್ಲ. ಅದಕ್ಕಿಂತ ಹೆಚ್ಚಾಗಿ ಭಾರತದ ಮೇಲೆ ಪಾಕಿಸ್ತಾನ ಸಹಿತ ಬೇರೆ ರಾಷ್ಟ್ರಗಳು ಕೆಟ್ಟ ಕಣ್ಣು ಹಾಕಿದಾಗ ಭಾರತದ ಮೇಲೆ ಕೈ ಹಾಕುವ ಮೊದಲು ನಮ್ಮೊಡನೆ ಹೋರಾಡಿ ಎಂದು ಕರೆ ಕೊಟ್ಟಿದ್ದು ಇಸ್ರೇಲ್. ಇಸ್ರೇಲ್ ಭಾರತದ ಶಾಶ್ವತ ಮಿತ್ರ. ಒಂದಿಷ್ಟು ಇತಿಹಾಸ ನೋಡಿದರೆ ಇದು ಗೊತ್ತಾಗಿಬಿಡುತ್ತದೆ. ಆದರೆ ಭಾರತದಲ್ಲಿರುವ ವಿಪಕ್ಷಕ್ಕೆ ತಾವು ಎಲ್ಲಿಯಾದರೂ ಇಸ್ರೇಲ್ ಅನ್ನು ಬೆಂಬಲಿಸಿದರೆ ಹಮಾಸ್ ಉಗ್ರರಿಗೆ ಬೇಸರವಾಗುತ್ತದೆಯೇನೋ ಎನ್ನುವ ಆತಂಕ ಬಂದಿರಬಹುದು. ಹಮಾಸ್ ಉಗ್ರರ ವಿರುದ್ಧ ಹೇಳಿಕೆ ಕೊಟ್ಟರೆ ಭಾರತದಲ್ಲಿರುವ ಸ್ಲೀಪಿಂಗ್ ಸೆಲ್ ನಲ್ಲಿ ಅಡಗಿರುವ ಭಯೋತ್ಪಾದಕರಿಗೆ ಬೇಸರವಾಗುತ್ತದೆಯೇನೋ ಎನ್ನುವ ಹೆದರಿಕೆ ಇದ್ದಿರಬಹುದು. ಆದ್ದರಿಂದ ಅವರು ಪ್ಯಾಲೇಸ್ತಿನ್ ಪರವಾಗಿರುವ ಹೇಳಿಕೆ ನೀಡುತ್ತಾರೆ. ಇಸ್ರೇಲಿನಲ್ಲಿ ಆ ದೇಶದ ವಿಪಕ್ಷಗಳು ಅಲ್ಲಿನ ಸರಕಾರಕ್ಕೆ ಬೆಂಬಲ ನೀಡುತ್ತಿವೆ. ಇಲ್ಲಿ ನೋಡಿದರೆ ಈ ದೇಶದ ವಿಪಕ್ಷ ನಮ್ಮ ಶತ್ರು ರಾಷ್ಟ್ರಕ್ಕೆ ಬೆಂಬಲ ನೀಡುತ್ತದೆ.

ಕಣ್ಣು ತೆಗೆಯಲು ಬಂದರೆ ದೇಹವನ್ನೇ ಸೀಳುತ್ತೇವೆ!

ಇನ್ನೊಂದು ವಿಷಯ ಏನೆಂದರೆ ಇಸ್ರೇಲ್ ತಾನೇ ಕಾಲು ಕೆರೆದು ಪ್ಯಾಲೇಸ್ತಿನ್ ಮೇಲೆ ಜಗಳಕ್ಕೆ ಹೋದದ್ದಲ್ಲ. ಜಗಳ ಶುರು ಮಾಡಿದ್ದೇ ಪ್ಯಾಲೇಸ್ತೇನಿನ ಹಮಾಸ್ ಉಗ್ರಗಾಮಿಗಳು. ಅದು ಬರೀ ಜಗಳ ಅಲ್ಲ. ಇಸ್ರೇಲಿನ ಒಳಗೆ ನುಗ್ಗಿ ಅಲ್ಲಿನ ಯುವತಿಯರನ್ನು ಎಳೆದು ಸಾಮೂಹಿಕ ಅತ್ಯಾಚಾರ ಮಾಡಿ ಅಲ್ಲಿಯೇ ಭೀಭತ್ಯವಾಗಿ ಕೊಂದು ಹೆಣವನ್ನು ತೆರೆದ ವಾಹನದಲ್ಲಿ ಪ್ರದರ್ಶಿಸುತ್ತಾ ಅವಳು ಸ್ವರ್ಗಕ್ಕೆ ಹೋದಳು ಎಂದು ಬೊಬ್ಬೆ ಹಾಕುವುದು ಇದೆಯಲ್ಲ, ಅದು ಎಂಭತ್ತರ ಹರೆಯದವರಲ್ಲಿಯೂ ರೋಷ ಹುಟ್ಟಿಸುತ್ತದೆ. ಇದಕ್ಕೆ ಪ್ರತ್ಯುತ್ತರ ಕೊಡದೇ ಸುಮ್ಮನೆ ಕುಳಿತುಕೊಳ್ಳಲು ಇಸ್ರೇಲ್ ರಣಹೇಡಿಯಲ್ಲ. ಕಣ್ಣು ತೆಗೆಯಲು ಬಂದರೆ ದೇಹವನ್ನೇ ಸೀಳುತ್ತೇವೆ ಎಂದು ಉತ್ತರ ಕೊಟ್ಟಿದೆ. ಅದನ್ನು ತಪ್ಪು ಎಂದು ಕಾಂಗ್ರೆಸ್ ವಾದಿಸುವುದೇ ಆದರೆ ಪಾಪ ಎನಿಸುವುದು ಬೇರೆ ಏನೂ ಅಲ್ಲ. ಇದೇ ಕಾಂಗ್ರೆಸ್ಸಿಗರ ಬಗ್ಗೆ. ಪ್ಯಾಲೇಸ್ತಿನ್ ನಾಗರಿಕರ ಬಗ್ಗೆ ಅನುಕಂಪ ತೋರಿಸುವ ನೆಪದಲ್ಲಿ ಹಮಾಸ್ ಉಗ್ರರ ಪರ ಮಾತನಾಡುವ ಪರಿಸ್ಥಿತಿ ಇವರಿಗೆ ಬಂತಲ್ಲ ಅಂತ!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search