ಪಠಾಣ್ ಕೋಟ್ ಮಾಸ್ಟರ್ ಮೈಂಡ್ ಶಹೀದ್ ಲತೀಫ್ ಹತ್ಯೆ
ಭಾರತಕ್ಕೆ ಬೇಕಾಗಿದ್ದ ಮೋಸ್ಟ್ ವಾಟೆಂಡ್ ಭಯೋತ್ಪಾದಕ, ಪಠಾಣ್ ಕೋಟ್ ದಾಳಿಯ ಮಾಸ್ಟರ್ ಮೈಂಡ್ ಶಹೀದ್ ಲತೀಫ್ ಪಾಕಿಸ್ತಾನದ ಮಸೀದಿಯೊಳಗೆ ಅಕ್ಟೋಬರ್ 10 ರಂದು ಹತನಾಗಿದ್ದಾನೆ. ಈತನನ್ನು ಲತೀಫ್ ಯಾನೆ ಬಿಲಾಲ್ ಎನ್ನುವ ಹೆಸರಿನಿಂದ ಗುರುತಿಸಲಾಗುತ್ತಿತ್ತು. ಈತ ಯುಎಪಿಎ ಆಕ್ಟ್ ಅಡಿಯಲ್ಲಿ ಭಾರತಕ್ಕೆ ಅತೀ ಅಗತ್ಯವಾಗಿ ಬೇಕಾಗಿದ್ದ. ಈತನ ಜೊತೆ ಈತನ ಇನ್ನಿಬ್ಬರು ಸಹಚರರನ್ನು ಕೂಡ ಮೂರು ಜನ ಅನಾಮಧೇಯ ಬಂದೂಕುಧಾರಿಗಳು ಹತ್ಯೆಗೈದಿದ್ದಾರೆ. ಈತ ಹತನಾಗಿರುವ ಮಸೀದಿ ಪಾಕಿಸ್ತಾನದ ಸಿಸಲ್ ಕೋಟ್ ಇಲ್ಲಿನ ದಸ್ಕಾ ಎನ್ನುವ ಏರಿಯಾದಲ್ಲಿ ಬರುತ್ತದೆ.
ಜೈಶ್-ಇ-ಮೊಹಮ್ಮದ್ ಸಂಘಟನೆಯ ಪ್ರಮುಖನಾಗಿದ್ದ ಶಹೀದ್ ಲತೀಫ್ 2016 ರ ಪಠಾಣ್ ಕೋಟ್ ವಾಯುನೆಲೆಯ ಮೇಲೆ ವಿಧ್ವಂಸಕ ಕೃತ್ಯದ ಪ್ರಧಾನ ಆರೋಪಿ ಎಂದೇ ಗುರುತಿಸಲಾಗಿದೆ. ಅಲ್ಲಿ ಏಳು ಜನ ವಾಯುಸೇನೆಯ ಯೋಧರು ಹುತಾತ್ಮರಾಗಿದ್ದರು.
ಈತ 1993 ರಲ್ಲಿ ಕಾಶ್ಮೀರದ ಕಣಿವೆಯ ಮೂಲಕ ಅತಿಕ್ರಮ ಪ್ರವೇಶ ಮಾಡಿದ್ದ. ನಂತರದ ವರ್ಷದಲ್ಲಿ ಬಂಧಿತನಾಗಿದ್ದ. 2010 ರ ತನಕ ಜೆಇಎಂ ಉಗ್ರಗಾಮಿ ಸಂಘಟನೆಯ ಸ್ಥಾಪಕ ಮಸೂದ್ ಅಜರ್ ಎನ್ನುವ ಮತ್ತೊಬ್ಬ ಕುಖ್ಯಾತ ಭಯೋತ್ಪಾದಕನ ಜೊತೆ ಜಮ್ಮು ಜೈಲಿನಲ್ಲಿದ್ದ. 2010 ರಲ್ಲಿ ಯುಪಿಎ ಸರಕಾರ ಇವನನ್ನು ಬಿಡುಗಡೆಗೊಳಿಸಿ ಪಾಕಿಸ್ತಾನಕ್ಕೆ ಗಡಿಪಾರು ಮಾಡಿತ್ತು.
Leave A Reply