ಹಂದಿಜ್ವರ: ಬಿಜೆಪಿ ಶಾಸಕಿ ಸಾವು
Posted On August 28, 2017

ಜೈಪುರ: ಹಂದಿ ಜ್ವರದಿಂದ ರಾಜಸ್ಥಾನದ ಮಂಡಲ್‌ಗಡ ಶಾಸಕಿ ಕೀರ್ತಿಕುಮಾರಿ (50) ಸೋಮವಾರ ಮೃತಪಟ್ಟಿದ್ದಾರೆ.
ಜ್ವರದಿಂದ ಬಳಲುತ್ತಿದ್ದ ಕೀರ್ತಿಕುಮಾರಿ ಅವರನ್ನು ಭಾನುವಾರ ಮಂಡಲ್‌ಗಡದ ಎಸ್‌ಎಂಎಸ್ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಉಸಿರಾಟದಲ್ಲಿ ತೊಂದರೆಯಾದ ಕಾರಣ ಫೊರ್ಟಿಸ್ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಡಾ.ಶ್ರೀಕಾಂತ ಸ್ವಾಮಿ ತಿಳಿಸಿದ್ದಾರೆ.
ಕೀರ್ತಿಕುಮಾರಿ ಅವರು ರಾಜಸ್ಥಾನದ ಬಿಜೋಲಿಯಾ ಮನೆತನಕ್ಕೆ ಸೇರಿದ್ದರು. ಶಾಸಕಿ ನಿಧನಕ್ಕೆ ಮುಖ್ಯಮಂತ್ರಿ ವಸುಂಧರಾ ರಾಜೆ ಸಂತಾಪ ಸೂಚಿಸಿದ್ದಾರೆ. ಅಲ್ಲದೆ ಶಾಸಕಿ ನಿಧನದಿಂದ ಬಿಜೆಪಿಗೆ ತುಂಬಲಾರದ ನಷ್ಟ ಎಂದಿದ್ದಾರೆ.
- Advertisement -
Leave A Reply