ಸೇಫ್ ಆಗಿ ಕರೆದುಕೊಂಡು ಬಂದಿದ್ದಕ್ಕೆ ಧನ್ಯವಾದಗಳು- ನುಶ್ರತ್ ಬರೋಚಾ

ಇಸ್ರೇಲಿನಿಂದ ಸುರಕ್ಷಿತವಾಗಿ ಭಾರತಕ್ಕೆ ಮರಳಿರುವ ಖ್ಯಾತ ನಟಿ ನುಶ್ರತ್ ಬರೋಚಾ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ. ಎಲ್ಲರ ಪ್ರಾರ್ಥನೆಗಳಿಗೆ ಕೃತಜ್ಞತೆಗಳು. ಎರಡು ದಿನಗಳ ಹಿಂದೆ ಇಸ್ರೇಲಿನ ಹೋಟೇಲ್ ರೂಂನಲ್ಲಿ ಬೆಳಿಗ್ಗೆ ಎದ್ದಾಗ ಬಾಂಬ್ ಗಳ ಶಬ್ದ ಕಿವಿಗೆ ಅಪ್ಪಳಿಸುತ್ತಿತ್ತು. ಸೈರನ್ ಶಬ್ದ ನಮ್ಮ ಆಸುಪಾಸಿನಲ್ಲಿ ಕೇಳಿಸುತ್ತಿದ್ದಂತೆ ನಮ್ಮನ್ನು ಹೋಟೇಲಿನ ಬೇಸ್ ಮೆಂಟಿಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ನಮ್ಮ ಸುರಕ್ಷತೆಗೆ ವ್ಯವಸ್ಥೆ ಮಾಡಲಾಗಿತ್ತು.
ಇಂತಹ ಪರಿಸ್ಥಿತಿಯನ್ನು ನಾನು ಯಾವತ್ತೂ ಅನುಭವಿಸಿಲ್ಲ. ಇವತ್ತು ನನ್ನ ಮನೆಯ ಕೋಣೆಯಲ್ಲಿ ಬೆಳಿಗ್ಗೆ ಎದ್ದಾಗ ಅಂತಹ ಯಾವುದೇ ಶಬ್ದ ಕೇಳಿಸುವುದಿಲ್ಲ. ಇದರಿಂದ ನಾವು ನಮ್ಮ ಭಾರತದಲ್ಲಿ ಎಷ್ಟು ಸುರಕ್ಷಿತವಾಗಿ ಇದ್ದೇವೆ ಎನ್ನುವ ಅರಿವಾಗುತ್ತದೆ. ನಾವು ಇಲ್ಲಿ ಸೇಫ್ ಇದ್ದೇವೆ. ಅದಕ್ಕಾಗಿ ಭಾರತ ಸರಕಾರಕ್ಕೆ ಧನ್ಯವಾದಗಳು. ಅದರೊಂದಿಗೆ ಭಾರತೀಯ ರಾಯಭಾರ ಕಚೇರಿ, ಇಸ್ರೇಲ್ ರಾಯಭಾರಿ ಕಚೇರಿಗೂ ಕೃತಜ್ಞತೆಗಳು.
ಇನ್ನು ಅಲ್ಲಿ ಯುದ್ಧಭೂಮಿಯಲ್ಲಿ ಸಿಲುಕಿರುವವರು ಕೂಡ ಸುರಕ್ಷಿತವಾಗಿರಲಿ ಎಂದು ಹಾರೈಸುತ್ತೇನೆ. ಶಾಂತಿ ಬೇಗ ಸ್ಥಾಪನೆಯಾಗಲಿ ಎಂದು ಅವರು ಹೇಳಿದ್ದಾರೆ. ನುಶ್ರತ್ ಬರೋಚಾ ಹೈಫಾ ಇಂಟರ್ ನ್ಯಾಶನಲ್ ಫಿಲಂ ಫೆಸ್ಟಿವಲ್ ನಲ್ಲಿ ಭಾಗವಹಿಸಲು ಇಸ್ರೇಲಿಗೆ ತೆರಳಿದ್ದರು.
Leave A Reply