ನಮ್ಮ ಶತ್ರುವಿಗೆ ಬೆಂಬಲಿಸಿದ್ದಾನೆ ಎಂದು ಅರ್ಥ ಅಲ್ವಾ?
ಒಂದು ವೇಳೆ ಭಾರತೀಯ ಕ್ರಿಕೆಟ್ ತಂಡ ಪಾಕಿಸ್ತಾನದ ರಾವಲ್ ಪಿಂಡಿಯಲ್ಲಿ ಪಾಕಿಸ್ತಾನದ ವಿರುದ್ಧ ಕ್ರಿಕೆಟ್ ಆಡಿದಾಗ ಅಲ್ಲಿ ಭಾರತೀಯ ತಂಡಕ್ಕೆ ಬೆಂಬಲ, ಉದ್ಘೋಷಣೆ ಅಲ್ಲಿನವರಿಂದ ಸಿಕ್ಕಿದ್ರೆ ನಂತರ ಅಂತವರನ್ನು ಹುಡುಕಿ ಹುಡುಕಿ ಜನ್ನತ್ ಗೆ ಕಳುಹಿಸಲಾಗುತ್ತಿತ್ತು. ಯಾಕೆಂದರೆ ಅದು ಪಾಕಿಸ್ತಾನ. ಆದರೆ ಮೊನ್ನೆ ಹೈದ್ರಾಬಾದಿನಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ಕ್ರಿಕೆಟ್ ಪಂದ್ಯಾಟ ನಡೆಯಿತು. ಪಂದ್ಯಾಟ ಎಷ್ಟರಮಟ್ಟಿಗೆ ಪಾಕಿಸ್ತಾನಕ್ಕೆ ಖುಷಿಯಾಯಿತು ಎಂದರೆ ಅವರು ಶ್ರೀಲಂಕಾದ ವಿರುದ್ಧ ಗೆದ್ದದ್ದು ಮಾತ್ರವಲ್ಲ, ನಮಗೆ ಪಾಕಿಸ್ತಾನದಲ್ಲಿಯೇ ಆಡಿದಷ್ಟು ಖುಷಿಯಾಯಿತು ಎಂದು ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಹೇಳಿಬಿಟ್ಟ. ಯಾಕೆಂದರೆ ಅವನಿಗೆ ಬ್ಯಾಟಿಂಗ್ ಮಾಡುವಾಗ ಬೆಂಬಲ ಹಾಗೆ ಸಿಕ್ಕಿತ್ತು. ಅಷ್ಟೇ ಅಲ್ಲ, ತನ್ನ ತಾಯ್ನೆಲದಲ್ಲಿ ಆಡಿದ ಹಾಗೆ ಅವನಿಗೆ ಅನಿಸಿದ್ದ ಕಾರಣ ಅವನು ಹಿಂದೆ ಮುಂದೆ ನೋಡದೆ ತನ್ನ ಸೆಂಚುರಿಯನ್ನು ಗಾಜಾದಲ್ಲಿರುವ ತನ್ನ ಸಹೋದರ, ಸಹೋದರಿಯರಿಗೆ ಇದು ಅರ್ಪಣೆ ಎಂದು ಹೇಳಿಬಿಟ್ಟ.
ಅದ್ಯಾವ ಖುಷಿಯಿಂದ ಅವರಿಗೆ ಪ್ರೋತ್ಸಾಹಿಸುವುದು!
ಇಲ್ಲಿ ಎರಡು ವಿಷಯ ಇದೆ. ಪಾಕಿಸ್ತಾನ ಭಾರತಕ್ಕೆ ಆಗಮಿಸಿದಾಗ ವಿಮಾನ ನಿಲ್ದಾಣದಲ್ಲಿಯೇ ಅವರಿಗೆ ಉತ್ತಮ ಸ್ವಾಗತ ಸಿಕ್ಕಿದೆ. ಹೈದ್ರಾಬಾದಿನಲ್ಲಿ ಹೋಟೇಲಿಗೆ ಆಗಮಿಸಿದಾಗಲೇ ಅವರಿಗೆ ಇನ್ನಷ್ಟು ಭರಪೂರ ಪ್ರೀತಿ ದೊರಕಿತ್ತು. ನಂತರ ಮೈದಾನದಲ್ಲಿ ಕೂಡ ಪ್ರೋತ್ಸಾಹ, ಯಾವುದಕ್ಕೂ ಅವರಿಗೆ ಕಡಿಮೆಯಾಗಲಿಲ್ಲ. ಇಂತಹ ವ್ಯವಸ್ಥೆ ಇರುವಾಗ ಅವರಿಗೆ ತಮ್ಮ ತಾಯ್ನೆಲದಲ್ಲಿ ಆಡುವ ಫಿಲಿಂಗ್ ಆಗದೇ ಇರಲು ಸಾಧ್ಯವಿದೆಯಾ? ಹಾಗಾದರೆ ಭಾರತದ ಶತ್ರುಗಳನ್ನು ಈ ಪರಿ ಬೆಂಬಲಿಸುವವರು ಭಾರತದಲ್ಲಿ ಅಷ್ಟು ಜನರಿದ್ದಾರಾ? ಕ್ರಿಕೆಟನ್ನು ಕ್ರಿಕೆಟಿನ ಹಾಗೆ ನೋಡಬೇಕು ಎನ್ನುವವರು ಇದ್ದಾರೆ. ಆದರೆ ಗಡಿಯಲ್ಲಿ ಪಾಕ್ ಬೆಂಬಲಿತ ಉಗ್ರಗಾಮಿಗಳು, ಅವರ ಯೋಧರು ನಮ್ಮವರನ್ನು ಕೊಂದ ಮಾಹಿತಿ ಕಿವಿಗೆ ಬೀಳುವಾಗ ಅದ್ಯಾವ ಖುಷಿಯಿಂದ ಅವರಿಗೆ ಪ್ರೋತ್ಸಾಹಿಸುವುದು. ಅವರನ್ನು ಹೊಗಳಲು ಅದೇಗೆ ಮನಸ್ಸು ಬರುತ್ತೆ. ಅಂತಹ ದೇಶದ್ರೋಹಿಗಳು ಭಾರತದಲ್ಲಿ ಬಹಿರಂಗವಾಗಿ ಮೈದಾನದಲ್ಲಿ ನಿಂತು ಬೆಂಬಲ ನೀಡುತ್ತಾ ಇರುತ್ತಾರಲ್ಲ, ಎನ್ನುವುದೇ ಆಶ್ಚರ್ಯ.
ನಮ್ಮ ಶತ್ರುವಿಗೆ ಬೆಂಬಲಿಸಿದ್ದಾನೆ ಎಂದು ಅರ್ಥ ಅಲ್ವಾ?
ಇಲ್ಲಿನ ಗಾಳಿಯನ್ನು ಉಸಿರಾಡಿ, ಇಲ್ಲಿನ ಆಹಾರ, ನೀರು ಸೇವಿಸಿ, ನಮ್ಮ ಶತ್ರುಗಳನ್ನು ಹೊಗಳುವ ಮನಸ್ಥಿತಿಯೇ ಅಸಹ್ಯ. ಅಂತವರಿಗೆ ಏನು ಮಾಡಬೇಕು. ಅದರೊಂದಿಗೆ ನಮ್ಮ ಮಿತ್ರದೇಶ ಇಸ್ರೇಲ್ ಮೇಲೆ ದಾಳಿ ಮಾಡಿ ಅಮಾಯಕ ಯುವತಿಯರನ್ನು ಅತ್ಯಾಚಾರ ಮಾಡಿ ಕೊಲ್ಲುತ್ತಿರುವ ಗಾಜಾದ ಸಹೋದರ, ಸಹೋದರಿಯರಿಗೆ ತನ್ನ ಶತಕ ಸಮರ್ಪಣೆ ಎಂದನಲ್ಲ ಆ ರಿಜ್ವಾನ್. ಗಾಜಾದ ಉಗ್ರಗಾಮಿಗಳು ಇವನ ಸಹೋದರ, ಸಹೋದರಿಯರು ಎಂದಾದರೆ ಇವನು ನಮ್ಮ ಶತ್ರುವಿಗೆ ಬೆಂಬಲಿಸಿದ್ದಾನೆ ಎಂದು ಅರ್ಥ ಅಲ್ವಾ? ಅವನನ್ನು ಇನ್ನು ಪಾಕಿಸ್ತಾನಕ್ಕೆ ಕಳುಹಿಸಿಲ್ವಾ? ಏನಿದು ಆಟವೋ, ಅನಿಷ್ಟವೋ
Leave A Reply